alex Certify ಕಲ್ಯಾಣ ಕರ್ನಾಟಕ ಪಿಂಚಣಿದಾರರಿಗೆ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಲ್ಯಾಣ ಕರ್ನಾಟಕ ಪಿಂಚಣಿದಾರರಿಗೆ ಗುಡ್ ನ್ಯೂಸ್

ಬೆಂಗಳೂರು: ಕಲ್ಯಾಣ ಕರ್ನಾಟಕ ವಿಭಾಗದ ಕಲಬುರಗಿ, ಯಾದಗಿರಿ, ಬೀದರ್, ಬಳ್ಳಾರಿ, ರಾಯಚೂರು, ಹೊಸಪೇಟೆ(ವಿಜಯನಗರ) ಮತ್ತು ಕೊಪ್ಪಳ ಜಿಲ್ಲೆಗಳಿಗೆ ಒಳಗೊಂಡಂತೆ ಪಿಂಚಣಿದಾರರ ಕುಂದುಕೊರತೆ ಮತ್ತು ಅಹವಾಲುಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇದೇ ಫೆಬ್ರವರಿ 22 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಕಾನ್ಫ್‍ರೆನ್ಸ್ ಸಭಾಂಗಣದಲ್ಲಿ  ವಿಡಿಯೋ ಕಾನ್ಫರೆನ್ಸ್ ಮೂಲಕ ಪಿಂಚಣಿ ಅದಾಲತ್‍ ಹಮ್ಮಿಕೊಳ್ಳಲಾಗಿದೆ.

ಕಲಬುರಗಿ ಜಿಲ್ಲೆಯ ಪಿಂಚಣಿದಾರರು ನೇರವಾಗಿ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ಪಿಂಚಣಿ ಅದಾಲತ್‍ದಲ್ಲಿ ಭಾಗವಹಿಸಬಹುದಾಗಿದೆ. ಉಳಿದ ಕಲ್ಯಾಣ ಕರ್ನಾಟಕದ ಭಾಗದ ಜಿಲ್ಲೆಗಳಾದ ಯಾದಗಿರಿ, ಬೀದರ, ರಾಯಚೂರು, ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಒಳಗೊಂಡಂತೆ ಆಯಾ ಜಿಲ್ಲೆಗಳಲ್ಲಿ ವಾಸವಿರುವ ಪಿಂಚಣಿದಾರರು ಆಯಾ ಜಿಲ್ಲೆಗಳ ಜಿಲ್ಲಾಡಳಿತದ ಕಚೇರಿಯಲ್ಲಿ ಜರುಗುವ ವಿಡಿಯೋ ಕಾನ್ಸರೆನ್ಸ್ ಮೂಲಕ ಪಿಂಚಣಿ ಅದಾಲತ್‍ನಲ್ಲಿ ಭಾಗವಹಿಸಬಹುದಾಗಿದೆ.

60 ವರ್ಷ ಮೇಲ್ಪಟ್ಟ ಪಿಂಚಣಿದಾರರು ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಪ್ರಯಾಣ ಮಾಡಲು ದುಸ್ತರವಾಗುವುದರಿಂದ, ಅವರ ಕೇಂದ್ರ ಸ್ಥಾನದಿಂದಲೇ ಈ ಪಿಂಚಣಿ ಅದಾಲತ್‍ನಲ್ಲಿ ಭಾಗವಹಿಸಿ ತಮ್ಮ ಕುಂದುಕೊರತೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.

ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಖಜಾನಾಧಿಕಾರಿಗಳು, ಹಿರಿಯ ಅಧಿಕಾರಿಗಳು, ಎಲ್ಲಾ ಇಲಾಖೆಗಳ ಪಿಂಚಣಿ ಶಾಖೆಯನ್ನು ನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳು ಕಲಬುರಗಿ ಜಿಲ್ಲಾಡಳಿತ ಸಭಾಂಗಣದಲ್ಲಿ ಮೇಲ್ಕಂಡ ದಿನದಂದು ನಡೆಯುವ ಪಿಂಚಣಿ ಅದಾಲತ್‍ನಲ್ಲಿ ಭಾಗವಹಿಸಬೇಕು.

ಬೆಂಗಳೂರಿನ ರಾಜ್ಯ ಪಿಂಚಣಿ ಪಾವತಿ ಮತ್ತು ನಿರ್ವಹಣಾ ಖಜಾನೆಯ ಅಪರ ನಿರ್ದೇಶಕರು, ಕರ್ನಾಟಕ ಉಪ ಮಹಾಲೇಖಪಾಲರು, ಬ್ಯಾಂಕ್ ಅಫ್ ಬರೋಡಾ, ಎಸ್.ಬಿ.ಐ., ಕೆನರಾ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಸಿಪಿಪಿಸಿ, ಶಾಖೆಯ ಅಧಿಕಾರಿಗಳು ಅದಾಲತ್‍ದಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರಿನ ರಾಜ್ಯ ಪಿಂಚಣಿ ಪಾವತಿ ಮತ್ತು ನಿರ್ವಹಣಾ ಖಜಾನೆ ಹಾಗೂ ಮಹಾಲೇಖಪಾಲರು ಇವರ ನೇತೃತ್ವದಲ್ಲಿ ಪಿಂಚಣಿ ಅದಾಲತ್ ಜರುಗಲಿದೆ. ಆಯಾ ಜಿಲ್ಲೆಗಳ ಎಲ್ಲಾ ಪಿಂಚಣಿದಾರರು ಪಿಂಚಣಿ ಆದಲಾತ್‍ನÀಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08472-221937 ಹಾಗೂ ಕಲಬುರಗಿ ಜಿಲ್ಲಾ ಖಜಾನೆ ಪ್ರಥಮ ದರ್ಜೆ ಸಹಾಯಕ ಅಮರಪ್ಪ ಇವರ ಮೊಬೈಲ್ ಸಂಖ್ಯೆ 9844114139ಗೆ ಸಂಪರ್ಕಿಸಲು, ಪಿಂಚಣಿ ಅದಾಲತ್‍ಗೆ ಸಂಬಂಧಿಸಿದಂತೆ ಯಾದಗಿರಿ ಜಿಲ್ಲೆಗೆ ಸಂಬಂಧಿಸಿದಂತೆ ದೂರವಾಣಿ ಸಂಖ್ಯೆ 08473-253711, ಬೀದರ ಜಿಲ್ಲೆ ದೂ.ಸಂ. 08482-226203, ಬಳ್ಳಾರಿ-ದೂರವಾಣಿ ಸಂಖ್ಯೆ 08392-277412, ಕೊಪ್ಪಳ ದೂ.ಸಂ. 08539-220577, ರಾಯಚೂರು-ದೂ.ಸಂ. 08532-228330 ಹಾಗೂ  ಹೊಸಪೇಟೆ (ವಿಜಯನಗರ)  ದೂ.ಸಂ. 08394-227153 ಗಳಿಗೆ ಸಂಪರ್ಕಿಸಲು ಎಂದು ರಾಜ್ಯ ಪಿಂಚಣಿ ಪಾವತಿ ಮತ್ತು ನಿರ್ವಹಣಾ ಖಜಾನೆಯ ಅಪರ ನಿರ್ದೇಶಕರಾದ ಡಾ. ವಿ. ಭಾಗ್ಯಲಕ್ಷ್ಮೀ ಅವರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...