alex Certify ಅನ್ಯಗ್ರಹದಿಂದ ಬಂದಿವೆಯೇ ʼಪೆಂಗ್ವಿನ್ʼ ​ಗಳು..? ಅಧ್ಯಯನದ ವರದಿ ಬಳಿಕ ಶುರುವಾಗಿದೆ ಹೀಗೊಂದು ಚರ್ಚೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನ್ಯಗ್ರಹದಿಂದ ಬಂದಿವೆಯೇ ʼಪೆಂಗ್ವಿನ್ʼ ​ಗಳು..? ಅಧ್ಯಯನದ ವರದಿ ಬಳಿಕ ಶುರುವಾಗಿದೆ ಹೀಗೊಂದು ಚರ್ಚೆ

ಹಾರಾಟವನ್ನೇ ಮಾಡಲಾಗದೇ ಇದ್ದರೂ ಪಕ್ಷಿಗಳ ಜಾತಿಯಲ್ಲೇ ಸ್ಥಾನ ಪಡೆದಿರುವ ಪೆಂಗ್ವಿನ್​ಗಳು ಸೃಷ್ಟಿಯ ಕೌತುಕಗಳಲ್ಲಿ ಒಂದು ಎಂದು ಹೇಳಿದರೆ ತಪ್ಪಾಗಲಾರದು. ಸದಾ ಗುಂಪಿನಲ್ಲೇ ಇರುವ ಕಪ್ಪು ಹಾಗೂ ಬಿಳಿ ಬಣ್ಣದ ಪೆಂಗ್ವಿನ್​ಗಳು ನೋಡೋಕೆ ತುಂಬಾನೆ ಮುದ್ದಾಗಿ ಇರುತ್ತವೆ. ಈ ಮುದ್ದಾದ ಪಕ್ಷಿಗಳ ಬಗ್ಗೆ ವಿಜ್ಞಾನಿಗಳು ಒಂದು ಶಾಕಿಂಗ್​ ಮಾಹಿತಿಯನ್ನು ಬಯಲು ಮಾಡಿದ್ದಾರೆ.

ಹೌದು..! ಪೆಂಗ್ವಿನ್​ಗಳ ಮಲದಲ್ಲಿ ವಿಚಿತ್ರವಾದ ರಾಸಾಯನಿಕವೊಂದು ಪತ್ತೆಯಾಗಿದ್ದು ಇದನ್ನು ನೋಡಿದ ವಿಜ್ಞಾನಿಗಳು ಪೆಂಗ್ವಿನ್​ಗಳು ಅನ್ಯಗ್ರಹದ ಜೀವಿಗಳಿರಬಹುದೇ ಎಂದು ಶಂಕಿಸುವಂತಾಗಿದೆ. ಏಕೆಂದರೆ ಶುಕ್ರ ಗ್ರಹದಲ್ಲಿ ಕಂಡು ಬರುವ ರಾಸಾಯನಿಕವೊಂದು ಪೆಂಗ್ವಿನ್​ಗಳ ಮಲದಲ್ಲಿ ಪತ್ತೆಯಾಗಿದೆ..!

ಬ್ರಿಟನ್​ ಸಂಶೋಧಕರ ಅಧ್ಯಯನದ ಪ್ರಕಾರ ಪೆಂಗ್ವಿನ್​​ನ ಮಲದಲ್ಲಿ ಫಾಸ್ಪೈನ್​ ಎಂಬ ರಾಸಾಯನಿಕ ಅಂಶ ಪತ್ತೆಯಾಗಿದೆ ಎನ್ನಲಾಗಿದೆ. ಇದಾದ ಬಳಿಕ ಪೆಂಗ್ವಿನ್​ ಮೂಲ ಯಾವುದು ಎಂಬ ಚರ್ಚೆ ವಿಜ್ಞಾನ ಲೋಕದಲ್ಲಿ ಶುರುವಾಗಿದೆ. ಏಕೆಂದರೆ 38 ಮಿಲಿಯನ್​ ಮೈಲಿ ದೂರದಲ್ಲಿರುವ ಶುಕ್ರ ಗ್ರಹದಲ್ಲಿ ಕಾಣಸಿಗುವ ಫಾಸ್ಪೈನ್​ ಭೂಮಿಯಲ್ಲಿರುವ ಜೀವಿಯಲ್ಲಿ ಕಾಣಿಸಿಕೊಳ್ಳಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡಿದೆ.

ಈ ರಾಸಾಯನಿಕದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವ ಸಲುವಾಗಿ ವಿಜ್ಞಾನಿಗಳು ಫಾಕ್ಲ್ಯಾಂಡ್​ ದ್ವೀಪಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಜೆಂಟೂ ಪೆಂಗ್ವಿನ್​ಗಳ ಜೀವನ ಶೈಲಿಯ ಬಗ್ಗೆ ಕಣ್ಣಿಟ್ಟಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...