
ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂದಿದ್ದ ಹರ್ಭಜನ್ ಸಿಂಗ್ ತಮ್ಮ ಅಂಡರ್ 19 ದಿನಗಳ ಚಿತ್ರವನ್ನು ಹಂಚಿಕೊಂಡಿದ್ದಾರೆ. ತಮ್ಮ ಜೊತೆ ಇರುವ ಇತರೆ ಆಟಗಾರರು ಯಾರೆಂದು ಕಂಡುಹಿಡಿಯಿರಿ ಎಂದು ತಮ್ಮ ಫಾಲೋವರ್ಸ್ಗೆ ಭಜ್ಜಿ ವಿಶೇಷ ಟಾಸ್ಕ್ ನೀಡಿದ್ದಾರೆ.
ಇವರು ಯಾರೆಂದು ಗುರುತಿಸಿ. 1998/99ನೇ ಸಾಲಿನ ಅಂಡರ್ 19 ವರ್ಲ್ಡ್ ಕಪ್ ದಿನಗಳು ಎಂದು ಈ ಫೊಟೋಗೆ ಹರ್ಭಜನ್ ಸಿಂಗ್ ಶೀರ್ಷಿಕೆ ನೀಡಿದ್ದಾರೆ.
ಈ ಫೋಟೋದಲ್ಲಿ ಹರ್ಭಜನ್ ಸಿಂಗ್ ಪಾಕಿಸ್ತಾನದ ಮಾಜಿ ಕ್ರಿಕೆಟಿಗ್ ಹಸನ್ ರಾಜಾ ಹಾಗೂ ಇಮ್ರಾನ್ ತಾಹೀರ್ ಜೊತೆ ಪೋಸ್ ನೀಡಿದ್ದಾರೆ. ಈ ಫೋಟೋವನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆದ 1998/99ನೇ ಸಾಲಿನ ಅಂಡರ್ 19 ವರ್ಲ್ಡ್ ಪಂದ್ಯದ ವೇಳೆ ಕ್ಲಿಕ್ಕಿಸಲಾಗಿದೆ.