
ಪೆಗಾಸಸ್ ಇದೀಗ ಮತ್ತೊಮ್ಮೆ ಚರ್ಚೆಯಲ್ಲಿದೆ. ಮಾಧ್ಯಮಗಳು ನೀಡಿರುವ ವರದಿಯ ಪ್ರಕಾರ ಪೆಗಾಸಸ್ನ ಸಹಾಯದಿಂದ ಅನೇಕರ ಮೇಲೆ ನಿಗಾ ಇಡಲಾಗ್ತಿದೆ. ಪೆಗಾಸಸ್ ಅತ್ಯಾಧುನಿಕ ಹಾಗೂ ಪವರ್ಫುಲ್ ಸಾಫ್ಟ್ವೇರ್ ಆಗಿದೆ.

ರಿಸಚರ್ಸ್ ನೀಡಿರುವ ಮಾಹಿತಿಯ ಪ್ರಕಾರ ಸ್ಪೈ ಸಾಫ್ಟ್ವೇರ್ನಿಂದ ನಿಮ್ಮ ಮೊಬೈಲ್ ಫೋನ್ನ್ನು ಬಹಳ ಸುಲಭವಾಗಿ ಆಕ್ಸೆಸ್ ಮಾಡಬಹುದಾಗಿದೆ. ಇದರ ಸುಳಿವು ಕೂಡ ನಿಮ್ಮ ಹೋಂ ಸ್ಕ್ರೀನ್ನಲ್ಲಿ ಕಾಣೋದು ಇಲ್ಲ. ಹಾಗಾದರೆ ಯಾವೆಲ್ಲ ರೀತಿಯಲ್ಲಿ ನಿಮ್ಮ ಮೊಬೈಲ್ ಫೋನ್ನ್ನು ಟಾರ್ಗೆಟ್ ಮಾಡಲಾಗುತ್ತೆ ಅನ್ನೋದಕ್ಕೆ ಇಲ್ಲಿದೆ ಮಾಹಿತಿ.

ಮಿಸ್ಡ್ ಕಾಲ್ ಮೂಲಕ :
ಮಿಸ್ಡ್ ಕಾಲ್ ಮೂಲಕ ಪೆಗಾಸಸ್ ನಿಮ್ಮ ಮೊಬೈಲ್ ಫೋನ್ನ್ನು ಟಾರ್ಗೆಟ್ ಮಾಡುತ್ತದೆ. 2019ರಲ್ಲಿ ಫೇಸ್ಬುಕ್ ಮಾಲೀಕತ್ವದ ವಾಟ್ಸಾಪ್ನಲ್ಲಿ ಒಂದು ವಲ್ನರೇಬಿಲಿಟಿ ಕಾಣಿಸಿಕೊಂಡಿತ್ತು. ಇದರ ಸಹಾಯದಿಂದ ಸಾಫ್ಟ್ವೇರ್ ಆಂಡ್ರಾಯ್ಡ್ ಅಥವಾ ಐಓಎಸ್ ಮೊಬೈಲ್ಗಳಿಗೆ ಕೇವಲ ಒಂದು ಕಾಲ್ ಮಾಡುವ ಮೂಲಕ ಟಾರ್ಗೆಟ್ ಮಾಡಲಾಗುತ್ತಿತ್ತು.
ನಕಲಿ ಅಪ್ಲಿಕೇಶನ್ಗಳು :
ಸೈಬರ್ ಕ್ರಿಮಿನಲ್ ಹಾಗೂ ಹ್ಯಾಕರ್ಸ್ಗಳಿಗೆ ಇದೊಂದು ಸಾಮಾನ್ಯವಾದ ಮಾರ್ಗವಾಗಿದೆ. ಇದರ ಸಹಾಯದಿಂದ ನಿಮ್ಮ ಮೊಬೈಲ್ ಫೋನ್ನ್ನು ಅವರು ಬಹಳ ಸುಲಭವಾಗಿ ಟಾರ್ಗೆಟ್ ಮಾಡುತ್ತಾರೆ. ಬಳಕೆದಾರರಿಗೆ ಮೈಲೇಶಿಯಸ್ ಆ್ಯಪ್ ಅಥವಾ ಇನ್ಯಾವುದೋ ಮಾಲ್ವೇರ್ನ ಜೊತೆಯಲ್ಲಿ ಡೌನ್ಲೋಡ್ ಮಾಡಿಸಲಾಗುತ್ತದೆ. ಇಂಥಹ ಅಪ್ಲಿಕೇಶನ್ಗಳು ಥರ್ಡ್ ಪಾರ್ಟಿ ಆ್ಯಪ್ ಸೆಂಟರ್ ಹಾಗೂ ವೆಬ್ಸೈಟ್ಗಳಲ್ಲಿ ಕಂಡುಬರುತ್ತದೆ.

ವಾಟ್ಸಾಪ್, ಇಮೇಲ್ಗಳು ಹಾಗೂ ಎಸ್ಎಂಎಸ್ :
ವಾಟ್ಸಾಪ್, ಇಮೇಲ್ಸ್ ಹಾಗೂ ಎಸ್ಎಂಎಸ್ನ ಸಹಾಯದಿಂದ ಹ್ಯಾಕರ್ಗಳು ಲಿಂಕ್ನ್ನು ಕಳುಹಿಸುತ್ತಾರೆ. ಮೊಬೈಲ್ ಫೋನ್ ಮಾಲೀಕರು ಈ ಲಿಂಕ್ ಮೇಲೆ ಕ್ಲಿಕ್ ಮಾಡುತ್ತಿದ್ದಂತೆಯೇ ವೈರಸ್ ಇಲ್ಲವೇ ಸಾಫ್ಟ್ವೇರ್ಗಳು ತನ್ನಿಂದ ತಾನೇ ಇನ್ಸ್ಟಾಲ್ ಆಗಿಬಿಡುತ್ತದೆ. ಇದರಿಂದ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನ ಕದಿಯೋದು ಹ್ಯಾಕರ್ಸ್ಗೆ ಬಹಳ ಸುಲಭವಾಗಿ ಬಿಡುತ್ತದೆ.

ಸಿಮ್ ಕಾರ್ಡ್ ಸ್ವೈಪ್ :
ಸಿಮ್ ಕಾರ್ಡ್ ಸ್ವೈಪ್ ಮಾರ್ಗವನ್ನ ಹ್ಯಾಕರ್ಸ್ಳು ನಿಮ್ಮ ವೈಯಕ್ತಿಕ ಮಾಹಿತಿಯನ್ನ ಕಲೆಹಾಕುವ ಸಂದರ್ಭದಲ್ಲಿ ಬಳಕೆ ಮಾಡಿಕೊಳ್ತಾರೆ. ಇದಾದ ಬಳಿಕ ಹ್ಯಾಕರ್ಸ್ ನಿಮ್ಮ ಟೆಲಿಫಾರಂ ಆಪರೇಟರ್ನ್ನು ಕ್ಯಾಂಟಾಕ್ಟ್ ಮಾಡಿ ಸಿಮ್ ರಿಪ್ಲೇಸ್ಮೆಂಟ್ಗೆ ಬೇಡಿಕೆ ಇಡುತ್ತಾರೆ. ಹೊಸ ಸಿಮ್ ಬಂದ ಬಳಿಕ ಹಳೆಯ ಸಿಮ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಇದರ ಅರ್ಥ ಹ್ಯಾಕರ್ಸ್ ಬಳಿ ನಿಮ್ಮ ಮೊಬೈಲ್ ಸಂಖ್ಯೆಯ ಸಂಪೂರ್ಣ ಮಾಹಿತಿ ಸಿಗಲಿದೆ.

ಬ್ಲೂಟೂಥ್ ಹ್ಯಾಕಿಂಗ್ :
ಇದರ ಸಹಾಯದಿಂದ ಹ್ಯಾಕರ್ಸ್ ತಮ್ಮ ಸಮೀಪವಿರುವ ಸಾಧನವನ್ನ ಬ್ಲೂಟುಥ್ನ ಸಹಾಯದಿಂದ ಹ್ಯಾಕ್ ಮಾಡುತ್ತಾರೆ. ಇದಕ್ಕಾಗಿ ಅವರು ವಿಶೇಷವಾದ ಸಾಫ್ಟ್ವೇರ್ ಬಳಕೆ ಮಾಡುತ್ತಾರೆ. ಇಂತಹ ಹ್ಯಾಕ್ಗಳು ಸಾಮಾನ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತದೆ. ಇದೇ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಇರುವ ವೈ ಫೈ ಮೂಲಕವೂ ಟಾರ್ಗೆಟ್ ಮಾಡಲಾಗುತ್ತದೆ.
