ನವದೆಹಲಿ: ಎಲ್ಲ ಯುಪಿಐ ಪೇಮೆಂಟ್ ಅಪ್ಲಿಕೇಷನ್‌ಗಳಿಗೂ ಪೇಟಿಎಂ ಮೂಲಕ ಪಾವತಿ ಮಾಡುವ ಹೊಸ ಫೀಚರ್ ಇದೀಗ ಜಾರಿಗೆ ತರಲಾಗಿದೆ. ಪೇಟಿಎಂ ಆ್ಯಪ್ ಡೌನ್ಲೋಡ್ ಮಾಡಿಕೊಂಡಿರುವ ಬಳಕೆದಾರರು ಈಗ ಎಲ್ಲ ಯುಪಿಐ ಪಾವತಿ ಅಪ್ಲಿಕೇಷನ್‌ಗಳಾದ್ಯಂತ ಮೊಬೈಲ್ ಸಂಖ್ಯೆಗಳಿಗೆ ಯುಪಿಐ ಪಾವತಿಗಳನ್ನು ಮಾಡಲು ಸಾಧ್ಯವಾಗಿದೆ.
ನಿಮ್ಮ ಬಳಿ ಪೇಟಿಎಂ ಆ್ಯಪ್ ಇದ್ದರೆ ನೋಂದಾಯಿತ ಯುಪಿಐ ಐಡಿಯೊಂದಿಗೆ ಯಾವುದೇ ಮೊಬೈಲ್ ಸಂಖ್ಯೆಗೆ ಮತ್ತು ಸೇವಾ ಪೂರೈಕೆದಾರರನ್ನು ಲೆಕ್ಕಿಸದೆ ತಕ್ಷಣ ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು.
ಇದಕ್ಕೆ ಮಾಡಬೇಕಿರುವುದು ಇಷ್ಟು:
– ಪೇಟಿಎಂ ಆ್ಯಪ್ ‘ಯುಪಿಐ ಹಣ ವರ್ಗಾವಣೆ’ ವಿಭಾಗದಲ್ಲಿ, ‘ಯುಪಿಐ ಅಪ್ಲಿಕೇಷನ್’ ಕ್ಲಿಕ್ ಮಾಡಬೇಕು
– ‘ಯಾವುದೇ ಯುಪಿಐ ಅಪ್ಲಿಕೇಷನ್‌ನ ಮೊಬೈಲ್ ಸಂಖ್ಯೆಯನ್ನು ನಮೂದಿಸಿ’ ಎಂಬುದರ ಮೇಲೆ ಕ್ಲಿಕ್ ಮಾಡಿ ಹಣ ಸ್ವೀಕರಿಸುವವರ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು
– ಎಷ್ಟು ಹಣವನ್ನು ನೀಡಬೇಕೋ ಆ ಮೊತ್ತವನ್ನು ನಮೂದಿಸಿ ಮತ್ತು ಹಣದ ಶೀಘ್ರ ವರ್ಗಾವಣೆಗಾಗಿ ‘ಈಗ ಪಾವತಿಸಿ’ ಟ್ಯಾಪ್ ಮಾಡಬೇಕು. ಇಷ್ಟಾದರೆ ಹಣ ಸಂದಾಯವಾಗುತ್ತದೆ.