ಬಾಯಿಯ ಸ್ವಚ್ಛತೆ ಕಡೆಗೆ ಗಮನ ಕೊಡಬೇಕಾದ್ದು ನಮ್ಮ ಆದ್ಯ ಕರ್ತವ್ಯ. ಹಾಗಿದ್ದರೆ ನಾವು ಬ್ರಶ್ ಮಾಡುವುದು ಹೇಗೆ?
ಗಟ್ಟಿಯಾದ ಹಲ್ಲುಗಳ ಬ್ರಶ್ ಬಳಸುವುದರಿಂದ ನಿಮ್ಮ ಹಲ್ಲು ಮತ್ತು ಒಸಡು ಸ್ವಚ್ಛವಾಗುತ್ತದೆ ಎಂಬ ತಪ್ಪು ಕಲ್ಪನೆ ದೂರ ಮಾಡಿ. ಇದರಿಂದ ಒಸಡಿಗೆ ಹಾನಿಯಾಗುವ ಸಾಧ್ಯತೆಯೇ ಹೆಚ್ಚು. ಮೃದುವಾದ ಬ್ರಶ್ ಹಲ್ಲನ್ನು ಹೆಚ್ಚು ಸ್ವಚ್ಛಗೊಳಿಸುತ್ತದೆ.
ಪೇಸ್ಟ್ ಗೆ ಹಲ್ಲನ್ನು ಸ್ವಚ್ಛಗೊಳಿಸುವ ಗುಣವಿಲ್ಲ. ಅದು ಏನಿದ್ದರೂ ನಿಮ್ಮ ಉಸಿರಿಗೆ ತಾಜಾತನ ಕೊಡುವ ಪ್ರಯತ್ನವಷ್ಟೇ. ನೀವು ಹೇಗೆ ಬ್ರಶ್ ಮಾಡುತ್ತೀರಿ ಎಂಬುದು ಮಾತ್ರ ನಿಮ್ಮ ಹಲ್ಲಿನ ಆರೋಗ್ಯವನ್ನು ಕಾಪಾಡುತ್ತದೆ.
ಎರಡರಿಂದ ಐದು ನಿಮಿಷದ ಕಾಲ ಬ್ರಶ್ ಮಾಡಿದರೆ ಸಾಕು. ಅದಕ್ಕಿಂತ ಹೆಚ್ಚು ಸಮಯ ಅಥವಾ ಕಡಿಮೆ ಮಾಡಿದರೆ ಯಾವುದೇ ಉಪಯೋಗವಿಲ್ಲ. ರಾತ್ರಿ ಮಲಗುವ ಮುನ್ನ ಬ್ರಶ್ ಮಾಡಲು ಮರೆಯದಿರಿ.