ಪಾಕಿಸ್ತಾನಿ ಸಾಮಾಜಿಕ ಜಾಲತಾಣದ ಇನ್ಫ್ಲುಯೆನ್ಸರ್ ಎನಿಸಿಕೊಂಡ ದನನೀರ್ ಮೊಬೀನ್ ಮತ್ತೆ ಸುದ್ದಿಗೆ ಬಂದಿದ್ದಾರೆ. ಐದು ಸೆಕೆಂಡ್ಗಳ ವಿಡಿಯೋ ‘ಪಾವ್ರಿ ಹೋ ರಹೀ ಹೆೈ’ ವೈರಲ್ ಆದ ನಂತರ ರಾತ್ರೋರಾತ್ರಿ ಸಂಚಲನ ಮೂಡಿಸಿದ ‘ಪಾವ್ರಿ ಗರ್ಲ್’ , ಈ ಬಾರಿ ಗಾಯನ ಕೌಶಲ್ಯಕ್ಕಾಗಿ ಮತ್ತೆ ಕಾಣಿಸಿಕೊಂಡಿದ್ದಾರೆ.
ಅವರು ಇತ್ತೀಚೆಗೆ ತಮ್ಮ ಖಾತೆಯಲ್ಲಿ ಹೊಸ ವಿಡಿಯೊ ಹಂಚಿಕೊಂಡಿದ್ದಾರೆ, ಅದರಲ್ಲಿ ತಮ್ಮ ಸುಮಧುರ ಧ್ವನಿಯಲ್ಲಿ ಬಾಲಿವುಡ್ ಹಾಡನ್ನು ಹಾಡಿದ್ದು, ನೆಟ್ಟಿಗರ ಗಮನ ಸೆಳೆದಿದೆ. 2002 ರ ಚಲನಚಿತ್ರ ʼಸಾಥಿಯಾʼದಲ್ಲಿನ ಚುಪ್ಕೆ ಸೇ……. ಎಂಬ ಭಾವಪೂರ್ಣ ಹಾಡನ್ನು ಆಕೆ ಹಾಡಿದ್ದಾರೆ. ಈ ಹಾಡನ್ನು ಮೂಲತಃ ಸಾಧನಾ ಸರ್ಗಮ್ ಹಾಡಿದ್ದಾರೆ.
ಚುಪ್ಕೆ ಸೆ…… ನಾನು ಈ ಹಾಡನ್ನು ಪೂರ್ಣವಾಗಿ ಇಷ್ಟಪಟ್ಟೆ ಮತ್ತು ಅದನ್ನು ಹಾಡಲು ಪ್ರಯತ್ನಿಸಲು ಬಯಸುತ್ತೇನೆ. ಮೂಲ ಗಾಯಕರು ಬೇಸರಿಸಬೇಡಿ ಎಂದು ಕೋರಿ ಪೋಸ್ಟ್ ಮಾಡಿದ್ದಾರೆ.
ಅವರು ಪೋಸ್ಟ್ ಹಂಚಿಕೊಂಡಾಗಿನಿಂದ ವಿಡಿಯೊ ವೈರಲ್ ಆಗಿದ್ದು, ಆಕೆಯ ಮಧುರ ಧ್ವನಿಗೆ ಜನರು ಖುಷಿಪಟ್ಟಿದ್ದಾರೆ. ಕಾಮೆಂಟ್ ವಿಭಾಗವು ಹೃದಯ ಮತ್ತು ಪ್ರೀತಿಯ ಎಮೋಜಿಗಳಿಂದ ತುಂಬಿದೆ.
20 ವರ್ಷದ ಪಾಕಿಸ್ತಾನಿ ಸಾಮಾಜಿಕ ಜಾಲತಾಣ ಇನ್ಫ್ಲುಯೆನ್ಸರ್ 2.4 ಮಿಲಿಯನ್ಗಿಂತಲೂ ಹೆಚ್ಚು ಫಾಲೋಯರ್ಗಳನ್ನು ಅನುಸರಿಸುತ್ತಿದ್ದಾರೆ. ಆಕೆ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತನಾಡುವುದರ ಜೊತೆಗೆ ಇತ್ತೀಚಿನ ಮೇಕಪ್ ಮತ್ತು ಫ್ಯಾಷನ್ ಪ್ರವೃತ್ತಿಗಳು ಸೇರಿದಂತೆ ಹಲವಾರು ವಿಷಯಗಳ ಕುರಿತು ಕಂಟೆಂಟ್ ಪ್ರಸ್ತುತಪಡಿಸುತ್ತಾರೆ. ಭಾರತ ಮತ್ತು ಪಾಕಿಸ್ತಾನ ಎರಡರಲ್ಲೂ ಸೂಪರ್ ವೆೈರಲ್ ಆದ ಪಾವ್ರಿ ವಿಡಿಯೋ ಆಕೆಯ ಖ್ಯಾತಿಗೆ ಕಾರಣವಾಗಿತ್ತು.