
ಹೌದು, ತಮ್ಮ ಇಡೀ ಕುಟುಂಬಕ್ಕೆ ಸೇವೆ ಸಲ್ಲಿಸುವ ತಾಯಂದಿರು ನಮ್ಮಲ್ಲಿದ್ದಾರೆ. ಕೆಲವೊಮ್ಮೆ, ಅವಳು ಇತರರಿಗಿಂತ ಕಡಿಮೆ ತಿನ್ನುತ್ತಾಳೆ ಅಥವಾ ತಣ್ಣಗಾಗಿರುವ ಊಟ ಮಾಡುತ್ತಾರೆ. ಟ್ವೀಟ್‌ಗೆ ಬಂದ ಪ್ರತಿಕ್ರಿಯೆಗಳನ್ನು ನೋಡಿದ್ರೆ ಯುವ ಪೀಳಿಗೆ ವಿಷಯಗಳನ್ನು ಬದಲಾಯಿಸಲು ಪ್ರಯತ್ನಿಸುತ್ತಿವೆ ಎಂದು ತೋರಿಸಿದೆ. ಇದು ಭಾರತೀಯ ಸಂಪ್ರದಾಯ ಮತ್ತು ತಾಯಿಯ ಪ್ರೀತಿ ಎಂದು ಕೆಲವರು ಭಾವಿಸಿದ್ದಾರೆ.
ಬಹುತೇಕ ಮಂದಿ ತಮ್ಮ ತಾಯಿ ಕೂಡ ಎಲ್ಲರೂ ಊಟ ಮಾಡಿದ ಬಳಿಕ ತಾನು ಊಟಕ್ಕೆ ಕೂರುತ್ತಾಳೆ ಎಂದು ಹೇಳಿಕೊಂಡಿದ್ದಾರೆ. ಬಹುತೇಕ ಹೆಣ್ಮಕ್ಕಳು ಮದುವೆಯಾಗಿ, ಮಕ್ಕಳಾದ ನಂತರ ಇದನ್ನೇ ಅನುಸರಿಸಬಹುದು. ಇದು ಭಾರತೀಯ ಸಂಸ್ಕೃತಿ ಎಂದು ಹೇಳಿದ್ದಾರೆ.
ಬಳಕೆದಾರರೊಬ್ಬರು, ತನ್ನ ತಾಯಿ 4 ಮಕ್ಕಳಿಗೆ ಬೆಳಗಿನ ಉಪಹಾರ ಮತ್ತು ಊಟವನ್ನು ತಯಾರಿಸಲು 4 ಗಂಟೆಗೆ ಎದ್ದೇಳುತ್ತಿದ್ದರು. ಇದು ಕುಟುಂಬಕ್ಕಾಗಿ ಅವಳ ಪ್ರೀತಿ ಮತ್ತು ಸಮರ್ಪಣೆಯಾಗಿದೆ ಎಂದಿದ್ದಾರೆ. ಬಹುತೇಕ ಎಲ್ಲಾ ಮನೆಗಳಲ್ಲಿ ಮೊದಲು ತಾಯಿಯನ್ನು ತಿನ್ನುವಂತೆ ಒತ್ತಾಯಿಸಿದರೂ ಅವರು ನಿರಾಕರಿಸುತ್ತಾರೆ. ತಾಯಂದಿರಿಗೆ ಇಷ್ಟೊಂದು ಕಾಳಜಿ ಯಾಕಿರುತ್ತದೆ ಅಂದ್ರೆ, ತನಗೆ ಆಹಾರ ಕಮ್ಮಿಯಾದ್ರೂ ಪರವಾಗಿಲ್ಲ, ಯಾರಿಗೂ ಕೂಡ ಊಟ ಕಡಿಮೆಯಾಗಬಾರದು ಎಂಬುದಾಗಿರುತ್ತದೆ.
— thissinghisfromthighland (@Nicks592) June 13, 2022
https://twitter.com/iMitul_n/status/1536054636599181312?ref_src=twsrc%5Etfw%7Ctwcamp%5Etweetembed%7Ctwterm%5E1536054636599181312%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fpatriarchy-or-love-twitter-thread-discusses-why-desi-mothers-eat-last-5369959.html