
ಲಾಕ್ಡೌನ್ ನಿರ್ಬಂಧ ಸಡಿಲ, ಭಕ್ತರಿಗೆ ಗುಡ್ ನ್ಯೂಸ್: ದೇವರ ದರ್ಶನಕ್ಕೆ ಅವಕಾಶ, ಬಸ್ ಫುಲ್ ರಶ್, ಶಾಲೆಗಳ ಆರಂಭಕ್ಕೆ ಪ್ರತ್ಯೇಕ ತೀರ್ಮಾನ
ಹವಾಮಾನ ವೈಪರಿತ್ಯದಿಂದಾಗಿ ಅಮೆರಿಕದ ಉತ್ತರ ಕೆರೋಲಿನಾದ ಚಾರ್ಲೋಟ್ನಿಂದ ಮೇರಿಲ್ಯಾಂಡ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ಮಾಡುತ್ತಿದ್ದ ಅಮೆರಿಕ ಏರ್ಲೈನ್ ವಿಮಾನವನ್ನ ರದ್ದು ಮಾಡಲಾಗಿತ್ತು. 172 ಪ್ರಯಾಣಿಕರು ಹಾಗೂ ಆರು ಮಂದಿ ಸಿಬ್ಬಂದಿ ವಿಮಾನವೇರಿದ ಬಳಿಕ ಫ್ಲೈಟ್ ರದ್ದಾದ ಬಗ್ಗೆ ಮಾಹಿತಿ ನೀಡಲಾಗಿತ್ತು.
ಮನೆಬಾಗಿಲಿಗೆ ಪಡಿತರ ಪೂರೈಕೆ ಸೇರಿದಂತೆ ರಾಜ್ಯದ ಜನತೆಗೆ ಗುಡ್ ನ್ಯೂಸ್
ಈ ಪ್ರಯಾಣಿಕರ ಪೈಕಿ ಓರ್ವ ಬ್ರ್ಯಾಂಡೋನ್ ಗೋಲ್ಡ್ಡರ್ ಎಂಬವರು ಈ ವಿಚಾರವನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು ಜೆಟ್ ಬ್ರಿಡ್ಜ್ ನಿರ್ವಹಣೆ ಮಾಡಲು ಯಾರೂ ಇಲ್ಲದ ಕಾರಣ ನಾವು ಅರ್ಧ ಗಂಟೆಗಿಂತಲೂ ಹೆಚ್ಚುಕಾಲ ವಿಮಾನದ ಒಳಗೆ ಇರಬೇಕಾಯ್ತು ಎಂದು ಹೇಳಿದ್ದಾರೆ.
ಆದರೆ ತಾಳ್ಮೆ ಕಳೆದುಕೊಂಡ ಪ್ರಯಾಣಿಕನೊಬ್ಬ ಇನ್ನು ಕಾಯಲು ಸಾಧ್ಯವಿಲ್ಲ ಎಂದು ನಿರ್ಧರಿಸಿ ಎಮರ್ಜೆನ್ಸಿ ಗೇಟ್ನಿಂದ ಟರ್ಮಾಕ್ನ ಮೇಲೆ ಹಾರಲು ಯತ್ನಿಸಿದ್ದಾನೆ. ಈ ರೀತಿ ಮಾಡಿದ ಪ್ರಯಾಣಿಕನನ್ನ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.