alex Certify ವಿಮಾನದಲ್ಲಿಯೇ ಪ್ರಯಾಣಿಕನ ಅಬ್ಬರ; ತತ್ತರಿಸಿದ ಸಹ ಪ್ರಯಾಣಿಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನದಲ್ಲಿಯೇ ಪ್ರಯಾಣಿಕನ ಅಬ್ಬರ; ತತ್ತರಿಸಿದ ಸಹ ಪ್ರಯಾಣಿಕರು

ವಿಮಾನಗಳಲ್ಲಿ ಪ್ರಯಾಣಿಕರೂ ಒಂದಷ್ಟು ನಿಯಮ ಪಾಲನೆ ಕಡ್ಡಾಯ. ಆದರೆ ಅನೇಕ ಉದಾಹರಣೆಗಳಲ್ಲಿ ಪ್ರಯಾಣಿಕರು ಅಸಹನೆ ಹೊರಹಾಕಿ ವಾತಾವರಣ ಕಲುಷಿತಗೊಳಿಸುವ ಉದಾಹರಣೆಗಳಿವೆ.

ಪಾಕಿಸ್ತಾನ್​ ಇಂಟರ್​ನ್ಯಾಶನಲ್​ ಏರ್​ಲೈನ್ಸ್​ (ಪಿಐಎ)ನ ಪೇಶಾವರ- ದುಬೈ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಪ್ರಯಾಣದ ನಡುವೆ ಅಬ್ಬರಿಸುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ.

ಆ ಅಶಿಸ್ತಿನ ಪ್ರಯಾಣಿಕನು ಸೀಟುಗಳನ್ನು ಗುದ್ದುವುದು, ವಿಮಾನದ ಕಿಟಕಿಗೆ ಒದೆಯುವುದು ಮತ್ತು ವಿಮಾನದ ಸಿಬ್ಬಂದಿಯೊಂದಿಗೆ ಜಗಳವಾಡುವುದು ಕಂಡುಬಂದಿದೆ.

ಮೊದಲು ವಿಮಾನ ಸಿಬ್ಬಂದಿಯೊಂದಿಗೆ ಜಗಳ ಆರಂಭವಾಯಿತು. ಬಳಿಕ ಅಲ್ಲಿನ ಆಸನ ಮುರಿಯುವುದಾಗಿಹೇಳಿ ಒದೆಯಲು ಪ್ರಾರಂಭಿಸುತ್ತಾನೆ. ನಂತರ ಪರಿಸ್ಥಿತಿಯನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಪೈಲೈಟ್​ ಅಟೆಂಡೆಂಟ್​ಗಳು ಮಧ್ಯಪ್ರವೇಶಿಸಿದಾಗ ಆತ ಅವರ ಮೇಲೂ ಹಲ್ಲೆ ನಡೆಸಿದ್ದಾನೆ.

ಪರಿಸ್ಥಿತಿ ಉಲ್ಬಣಗೊಳ್ಳುವುದನ್ನು ತಪ್ಪಿಸಲು, ವಿಮಾನಯಾನ ಕಾನೂನಿನ ಪ್ರಕಾರ ಆ ಪ್ರಯಾಣಿಕನನ್ನು ಆತನ ಆಸನದಲ್ಲಿ ಬಲವಂತವಾಗಿ ಕೂರಿಸಲಾಗಿದೆ. ಪ್ರೋಟೋಕಾಲ್​ಗಳ ಪ್ರಕಾರ, ವಿಮಾನದ ಕ್ಯಾಪ್ಟನ್​ ದುಬೈನ ಏರ್​ ಟ್ರಾಫಿಕ್​ ಕಂಟ್ರೋಲರ್​ ಅನ್ನು ಸಂಪಕಿರ್ಸಿ ಭದ್ರತೆಯನ್ನು ಕೋರಿದರು.

ದುಬೈ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ, ಭದ್ರತಾ ಅಧಿಕಾರಿಗಳು ಆ ಪ್ರಯಾಣಿಕನನ್ನು ವಶಕ್ಕೆ ತೆಗೆದುಕೊಂಡರು. ಘಟನೆ ಸೆಪ್ಟೆಂಬರ್​ 14 ರಂದು ನಡೆದಿದ್ದು, ಪಿಐಎ ಅಧಿಕಾರಿಗಳ ಪ್ರಕಾರ, ಪ್ರಯಾಣಿಕನನ್ನು ವಿಮಾನಯಾನ ಸಂಸ್ಥೆ ಬ್ಲಾಕ್​ ಲಿಸ್ಟ್​ಗೆ ಸೇರಿಸಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...