ಪೊಲೀಸ್ ಇಲಾಖೆ ಈಗೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗ್ತಿದೆ. ಜನರಲ್ಲಿ ಜಾಗೃತಿ ಮೂಡಿಸಲು ಪೊಲೀಸರು ಮಾಡುವ ಟ್ವೀಟ್ಗಳು ಟ್ವೀಟಿಗರನ್ನ ಆಕರ್ಷಿಸುವಲ್ಲಿ ಯಶಸ್ವಿಯಾಗ್ತಿದೆ.
ಇದೇ ಟ್ರೆಂಡ್ನ್ನು ಮುಂದುವರಿಸಿರುವ ಆಸ್ಸಾಂ ಪೊಲೀಸರು ಲಿಕ್ಕರ್ ಮಾಫಿಯಾ ಭೇದಿಸಿದ ಬಳಿಕ ಟ್ವೀಟ್ ಮಾಡಿದ ಶೈಲಿ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಗುವಂತೆ ಮಾಡಿದೆ.
ಭಾರೀ ಪ್ರಮಾಣದ ಮದ್ಯವನ್ನ ವಶಕ್ಕೆ ಪಡೆದ ಸಿಲ್ಚಾರ್ದ ಕಚರ್ ಪೊಲೀಸರು ಟ್ವಿಟರ್ನಲ್ಲಿ ಈ ಮಾಹಿತಿಯನ್ನ ಶೇರ್ ಮಾಡಿದ್ದರು. ಈ ಫೋಟೋಗಳಿಗೆ ಪೊಲೀಸರು ‘ಯೇ ರಮ್ ಹೈ, ಯೇ ಹಮ್ ಹೈ, ಔರ್ ಯೇ ಹಮ್ ಪಾರ್ಟಿ ಸ್ಪಾಯಿಲ್ ಕರ್ ರಹೇ ಹೈ (ಇದು ರಮ್, ಇದು ನಾವು, ಹಾಗೂ ನಾವು ಪಾರ್ಟಿಯನ್ನ ಹಾಳು ಮಾಡಿದ್ದೇವೆ) ಎಂದು ʼಯೇ ಹಮಾರಿ ಪಾರ್ವಿ ಹೋ ರಹಿ ಹೈʼ ಶೈಲಿಯಲ್ಲಿ ಟ್ವೀಟಾಯಿಸಿದ್ದಾರೆ.