alex Certify Big News: ಹೆಣ್ಣುಮಕ್ಕಳ ಮದುವೆ ವಯಸ್ಸು ತಿದ್ದುಪಡಿ ಸಮಿತಿಯಲ್ಲಿ ಕೇವಲ ಓರ್ವ‌ ಮಹಿಳಾ ಸದಸ್ಯೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಹೆಣ್ಣುಮಕ್ಕಳ ಮದುವೆ ವಯಸ್ಸು ತಿದ್ದುಪಡಿ ಸಮಿತಿಯಲ್ಲಿ ಕೇವಲ ಓರ್ವ‌ ಮಹಿಳಾ ಸದಸ್ಯೆ…!

ಹೆಣ್ಣುಮಕ್ಕಳು ಕಾನೂನುಬದ್ಧವಾಗಿ ಮದುವೆಯಾಗಲು 21 ವರ್ಷದವರಾಗಿರಬೇಕು ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದ್ದ ಮಸೂದೆಗೆ ಎಲ್ಲೆಡೆಯಿಂದ ಪ್ರಶಂಸೆ ದೊರೆತಿದೆ.

ಆದರೆ ಇದೇ ಮಸೂದೆಯನ್ನ ಪರಿಶೀಲಿಸಲು ನಿಯೋಜಿಸಿರುವ ಸದಸ್ಯರ ಸಂಸದೀಯ ಸಮಿತಿಯಲ್ಲಿ ಕೇವಲ ಒಬ್ಬ ಮಹಿಳಾ ಎಂಪಿ ಇರುವುದು ಟೀಕೆಗೆ ಕಾರಣವಾಗಿದೆ. ತೃಣಮೂಲ ಕಾಂಗ್ರೆಸ್ ನ ಸಂಸದೆ ಸುಶ್ಮಿತಾ ದೇವ್ ಸಮಿತಿಯಲ್ಲಿರುವ ಏಕೈಕ ಮಹಿಳೆಯಾಗಿದ್ದಾರೆ.

ಚಳಿಗಾಲದ ಅಧಿವೇಶನದಲ್ಲಿ ಬಾಲ್ಯ ವಿವಾಹ ನಿಷೇಧ (ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. ಮಸೂದೆಯು ಮಹಿಳೆಯರ ವಿವಾಹದ ಕಾನೂನುಬದ್ಧ ವಯಸ್ಸನ್ನು 18 ರಿಂದ 21 ಕ್ಕೆ ಹೆಚ್ಚಿಸಲು ಪ್ರಯತ್ನಿಸುತ್ತದೆ. ಬಿಜೆಪಿಯ ಹಿರಿಯ ನಾಯಕ ವಿನಯ್ ಸಹಸ್ರಬುದ್ಧೆ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರ ಪಟ್ಟಿಯ ಪ್ರಕಾರ, 31 ಸದಸ್ಯರಲ್ಲಿ ಟಿಎಂಸಿ ಸಂಸದೆ ಸುಶ್ಮಿತಾ ದೇವ್ ಏಕೈಕ ಮಹಿಳೆಯಾಗಿದ್ದಾರೆ, ಈ‌ ಲಿಸ್ಟ್ ರಾಜ್ಯಸಭಾ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಸಮಿತಿಯಲ್ಲಿ ಹೆಚ್ಚು ಮಹಿಳಾ ಸಂಸದರಿದ್ದರೆ ಉತ್ತಮ ಎಂದು ಸುಶ್ಮಿತಾ ದೇವ್ ಹೇಳಿದ್ದಾರೆ. ಸಮಿತಿಯಲ್ಲಿ ಹೆಚ್ಚಿನ ಮಹಿಳಾ ಸಂಸದರು ಇರಬೇಕೆಂದು ನಾನು ಬಯಸುತ್ತೇನೆ. ಆದರೂ ಈ ವಿಷಯದ ಬಗ್ಗೆ ಆಸಕ್ತಿ ಇರುವ ಗುಂಪುಗಳು ಹಾಗೂ ಸದಸ್ಯರನ್ನ ನಮ್ಮ ಸಮಿತಿ ಕೇಳಿಸಿಕೊಳ್ಳಲು ತಯಾರಿದೆ ಎಂದು ಸುಶ್ಮಿತಾ ಹೇಳಿದ್ದಾರೆ.

ಎನ್‌ಸಿಪಿ ಸಂಸದೆ ಸುಪ್ರಿಯಾ ಅವರು ಇದೇ ರೀತಿಯ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚಿಸುವ ಸಮಿತಿಯಲ್ಲಿ ಹೆಚ್ಚಿನ ಮಹಿಳಾ ಸಂಸದರು ಇರಬೇಕಿತ್ತು ಎಂಬುದು ಸುಪ್ರಿಯಾ ಅವರ ಅಭಿಪ್ರಾಯ.

ಸಮಿತಿಗೆ ಜನರನ್ನ ಆಹ್ವಾನಿಸುವ ಅಧಿಕಾರ ಅಧ್ಯಕ್ಷರಿಗಿದೆ. ಆದ್ದರಿಂದ ಹೆಚ್ಚು ಅಂತರ್ಗತ ಮತ್ತು ವ್ಯಾಪಕ ಚರ್ಚೆಗಳಿಗಾಗಿ, ಅವರು ಇತರ ಮಹಿಳಾ ಸಂಸದರನ್ನು ಆಹ್ವಾನಿಸಬಹುದು ಎಂದು ಸುಪ್ರಿಯಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...