alex Certify ಪಾರ್ಕಿಂಗ್ ಸ್ಥಳ ರಿಸರ್ವ್ ಮಾಡಲು ಈತ ಮಾಡಿದ್ದೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾರ್ಕಿಂಗ್ ಸ್ಥಳ ರಿಸರ್ವ್ ಮಾಡಲು ಈತ ಮಾಡಿದ್ದೇನು ಗೊತ್ತಾ….?

ಕಾರ್ ಕೊಳ್ಳುವುದು ಎಷ್ಟು ಕಷ್ಟವೋ ಅದನ್ನ ಸರಿಯಾದ ಜಾಗದಲ್ಲಿ ಪಾರ್ಕಿಂಗ್ ಮಾಡುವುದು ಅದಕ್ಕಿಂತ ದೊಡ್ಡ ಟಾಸ್ಕ್. ನಮ್ಮ ಭಾರತದಲ್ಲೂ ಈ ಸಮಸ್ಯೆ ಇದೆ. ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರೋದನ್ನು ಸಹ ಕಂಡಿದ್ದೇವೆ. ಆದರೆ ದೂರದ ಬರ್ಮಿಂಗ್ಹ್ಯಾಮ್‌ ನ ನಿವಾಸಿ ಪಾರ್ಕಿಂಗ್ ರಿಸರ್ವ್ ಮಾಡಿರುವ ರೀತಿ ಇಡೀ ಇಂಟರ್ನೆಟ್ ಅನ್ನು ಮೌನವಾಗಿಸಿದೆ.

ನಗರ ಅಥವಾ ಉಪನಗರಗಳಲ್ಲಿ ವಾಸಿಸುವ ಜನರು, ಬೇರೆ ಯಾರಾದರೂ ತಮ್ಮ ಮನೆ ಮುಂದೆ ಕಾರ್ ನಿಲ್ಲಿಸುವುದನ್ನು ವಿರೋಧಿಸುತ್ತಾರೆ. ಹಲವರು ಮನೆಯ ಮುಂದೆ ವಾಹನಗಳನ್ನು ನಿಲ್ಲಿಸಬೇಡಿ ಎಂದು ಬೋರ್ಡ್ ಹಾಕುತ್ತಾರೆ, ಆದರೆ ಹ್ಯಾಂಡ್ಸ್‌ವರ್ತ್‌ನ ಈ ನಿವಾಸಿ ಪಾರ್ಕಿಂಗ್ ಜಾಗವನ್ನು ಭದ್ರಪಡಿಸಲು, ಆ ಜಾಗದಲ್ಲಿ ದೊಡ್ಡ ಕಸದ ಬುಟ್ಟಿ ಇಟ್ಟು ಅದನ್ನು ಸರಪಳಿಯಿಂದ ಲಾಕ್ ಮಾಡಿದ್ದಾನೆ. ಈ ರೀತಿ ಮಾಡಿದರೆ ಕಸದ ಬುಟ್ಟಿಯನ್ನು ಅಲುಗಾಡಿಸಲು ಸಾಧ್ಯವಿಲ್ಲ, ಮನೆ ಮುಂದೆ ಯಾರು ವಾಹನಗಳನ್ನು ನಿಲ್ಲಿಸುವುದಿಲ್ಲ, ನನ್ನ ಪಾರ್ಕಿಂಗ್ ಸ್ಥಳ ಕೂಡ ಸುರಕ್ಷಿತವಾಗಿರುತ್ತದೆ ಎನ್ನುವುದು ಆತನ ಆಲೋಚನೆ.

ಬಸ್ ನಿಲ್ದಾಣದಲ್ಲಿ ಬೆಂಕಿ ಅವಘಡ; ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಟ್ಟಡ

ಕಸದ ಬುಟ್ಟಿಯನ್ನು ಸರಪಳಿಯಲ್ಲಿ ಬಂಧಿಸಿಟ್ಟಿರುವ ಫೋಟೊವನ್ನು ಸುಹಾದ್ ಮಿಯಾ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಹ್ಯಾಂಡ್ಸ್‌ವರ್ತ್‌ನಲ್ಲಿ ತನ್ನ ಸ್ನೇಹಿತನನ್ನು ಭೇಟಿಯಾಗಲು ಬಂದ ಮಿಯಾ, ಪಾರ್ಕಿಂಗ್ ಸ್ಥಳ ಹುಡುಕಲು ಪರದಾಡಿದ್ದಾರೆ. ಆನಂತರ ದೈತ್ಯಾಕಾರದ ಕಪ್ಪು ಕಸದ ಬುಟ್ಟಿ ಕಾಣಿಸಿಕೊಂಡಿದೆ, ಅದನ್ನು ಪಕ್ಕಕ್ಕೆಳೆದು ತನ್ನ ವಾಹನವನ್ನು ಅ ಜಾಗದಲ್ಲಿ ನಿಲ್ಲಿಸಬಹುದು ಎಂದುಕೊಂಡ ಆತ ಆನಂತರ ಆಘಾತಗೊಂಡಿದ್ದಾನೆ‌.

ಎಷ್ಟೇ ಪ್ರಯತ್ನಿಸಿದರು ಬುಟ್ಟಿ ಅಲುಗಾಡಿಲ್ಲ, ಆಗ ಗಮನಿಸಿದಾಗ ಅದನ್ನು ಸರಪಳಿಯಿಂದ ಲಾಕ್ ಮಾಡಿರುವುದು ತಿಳಿದು ಬಂದಿದೆ. ಸಧ್ಯ ಸೋಷಿಯಲ್ ಮಿಡಿಯಾದಲ್ಲಿ ಈ ಫೋಟೊ ವೈರಲ್ ಆಗುತ್ತಿದೆ. ಮಿಯಾ ಕಸದ ಬುಟ್ಟಿಗೆ ಸರಪಳಿ ಹಾಕಿದ ಮಾಲೀಕನನ್ನು ಸ್ವಾರ್ಥಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ ನೆರೆಹೊರೆಯ ಜನರು ಕೂಡ ಈ ರೀತಿಯ ಪಾರ್ಕಿಂಗ್ ರಿಸರ್ವೇಷನ್ನಿಂದ ಕೋಪಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...