alex Certify ಪಾರ್ಕಿಂಗ್ ವಿಚಾರಕ್ಕೆ ಜಗಳ; ಚಪ್ಪಲಿ, ರಾಡ್ ಹಿಡಿದು ಯುವಕರ ಹೊಡೆದಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾರ್ಕಿಂಗ್ ವಿಚಾರಕ್ಕೆ ಜಗಳ; ಚಪ್ಪಲಿ, ರಾಡ್ ಹಿಡಿದು ಯುವಕರ ಹೊಡೆದಾಟ

ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಯುವಕರ ಎರಡು ಗುಂಪು ಚಪ್ಪಲಿ, ರಾಡ್ ಹಿಡಿದು ಹೊಡೆದಾಡಿರೋ ಘಟನೆ ಗಾಜಿಯಾಬಾದ್ ನಲ್ಲಿ ನಡೆದಿದೆ. ಹೊಡೆದಾಟದಲ್ಲಿ ಕನಿಷ್ಠ 10 ಮಂದಿ ಭಾಗವಹಿಸಿದ್ದರು. ಹೊಡೆದಾಟದ ಸಂಪೂರ್ಣ ದೃಶ್ಯವನ್ನು ಸೆರೆಹಿಡಿಯಲಾಗಿದ್ದು ವೈರಲ್ ಆಗಿದೆ. ಮೊದಲು ಇಬ್ಬರು ಹುಡುಗರು ಯುವಕನ ಮೇಲೆ ದಾಳಿ ಮಾಡುತ್ತಾರೆ. ನಂತರ ಹಲವು ಮಂದಿ ಹೊಡೆದಾಟದಲ್ಲಿ ಸೇರಿಕೊಂಡು ಚಪ್ಪಲಿ, ರಾಡ್ ಹಿಡಿದು ಗಲಾಟೆ ಮಾಡಿದ್ದಾರೆ.

ಗಾಜಿಯಾಬಾದ್‌ನ ಇಂದಿರಾಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಅಭಯ್ ಖಂಡ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಪೊಲೀಸ್ ಕಮಿಷನರೇಟ್ ಗಾಜಿಯಾಬಾದ್‌ನ ಟ್ವಿಟ್ಟರ್ ಪುಟವು ಹೊಡೆದಾಟದ ವೀಡಿಯೊವನ್ನು ಗಮನದಲ್ಲಿಟ್ಟುಕೊಂಡು ಗಲಾಟೆಯಲ್ಲಿ ತೊಡಗಿದ್ದವರ ವಿರುದ್ಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಖಚಿತಪಡಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪತ್ರಿಕಾ ಪ್ರಕಟಣೆಯಲ್ಲಿ, ಘಟನೆಯ ವೀಡಿಯೊದಲ್ಲಿ ನೋಡಿದ ಮೂವರನ್ನು ಬಂಧಿಸಿರುವುದಾಗಿ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಈ ಘಟನೆ ಮಂಗಳವಾರ, ಮೇ 16 ರಂದು ನಡೆದಿದೆ ಎಂದು ವರದಿಯಾಗಿದೆ.

ಬಂಧಿತರನ್ನು 20 ವರ್ಷದ ಗುಲ್ಶನ್ ತ್ಯಾಗಿ, 19 ವರ್ಷದ ಆಶಿಶ್ ತ್ಯಾಗಿ ಮತ್ತು 20 ವರ್ಷದ ಕ್ರಿಶ್ ಸೈನಿ ಎಂದು ಗುರ್ತಿಸಲಾಗಿದೆ. ಪಾರ್ಕಿಂಗ್ ಜಾಗದ ವಿವಾದವು ವಾಗ್ವಾದಕ್ಕೆ ಕಾರಣವೆಂದು ವರದಿಯಾಗಿದೆ.

— India Direct News (@IndiaDirectNew4) May 18, 2023

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...