alex Certify ಬರೋಬ್ಬರಿ 40 ವರ್ಷಗಳ ಬಳಿಕ ಚಿತ್ರರಂಗಕ್ಕೆ ಮರಳಿದ ಖ್ಯಾತ ನಟ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 40 ವರ್ಷಗಳ ಬಳಿಕ ಚಿತ್ರರಂಗಕ್ಕೆ ಮರಳಿದ ಖ್ಯಾತ ನಟ….!

ಬಾಲಿವುಡ್​ ಸಿನಿಮಾದಲ್ಲಿ ಅಪ್ರತಿಮ ನಟನೆಯ ಮೂಲಕ ತನ್ನದೇ ಆದ ಛಾಪು ಮೂಡಿಸಿರುವ ಹಿರಿಯ ನಟ ಪರೇಶ್​ ರಾವಲ್​ ಬರೋಬ್ಬರಿ 40 ವರ್ಷಗಳ ಬಳಿಕ ಗುಜರಾತಿ ಸಿನಿಮಾದಲ್ಲಿ ನಟಿಸುತ್ತಿರೋದಾಗಿ ಘೋಷಣೆ ಮಾಡಿದ್ದಾರೆ. ತಮ್ಮದೇ ನಾಟಕ ಡಿಯರ್​ ಫಾದರ್​ ಆಧರಿಸಿದ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ತಮ್ಮ ಅಧಿಕೃತ ಟ್ವಿಟರ್​ ಪೇಜ್​ನಲ್ಲಿ ಪರೇಶ್​ ರಾವಲ್​ ಈ ವಿಚಾರವನ್ನ ಶೇರ್​ ಮಾಡಿದ್ದಾರೆ. 40 ವರ್ಷಗಳ ಬಳಿಕ ಗುಜರಾತಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಹೇಳೋದಕ್ಕೆ ತುಂಬ ಉತ್ಸುಕನಾಗಿದ್ದೇನೆ. ಈ ಸಿನಿಮಾವು ನನ್ನದೇ ಯಶಸ್ವಿ ನಾಟಕದ ಕತೆಯನ್ನ ಆಧರಿಸಿದೆ. ನನ್ನ ಈ ಹೊಸ ಪ್ರಯತ್ನ ರತನ್​ ಜೈನ್​ ಜಿಯಲ್ಲಿ ನೀವು ಭಾಗಿಯಾಗಿ. ನಿಮ್ಮೆಲ್ಲರ ಪ್ರೀತಿ ಹಾಗೂ ಆಶೀರ್ವಾದದ ಅವಶ್ಯಕತೆ ಇದೆ ಎಂದು ಬರೆದುಕೊಂಡಿದ್ದಾರೆ.

ಡಿಯರ್​ ಫಾದರ್​ ಅನ್ನೋದು ಒಂದು ಹಾಸ್ಯ ನಾಟಕವಾಗಿದ್ದು ಮೂವರು ಕುಟುಂಬಸ್ಥರ ನಡುವೆ ನಡೆಯುವ ಸನ್ನಿವೇಶವಾಗಿದೆ. ಈ ನಾಟಕದಲ್ಲಿ ಚೇತನ್​​ ಧನಾನಿ, ಮೃಣಮಯಿ ಗೋಡ್​ಬೋಲೆ ಹಾಗೂ ಪರೇಶ್​ ರಾವಲ್​ ನಟಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...