ಬಾಲಿವುಡ್ ಸಿನಿಮಾದಲ್ಲಿ ಅಪ್ರತಿಮ ನಟನೆಯ ಮೂಲಕ ತನ್ನದೇ ಆದ ಛಾಪು ಮೂಡಿಸಿರುವ ಹಿರಿಯ ನಟ ಪರೇಶ್ ರಾವಲ್ ಬರೋಬ್ಬರಿ 40 ವರ್ಷಗಳ ಬಳಿಕ ಗುಜರಾತಿ ಸಿನಿಮಾದಲ್ಲಿ ನಟಿಸುತ್ತಿರೋದಾಗಿ ಘೋಷಣೆ ಮಾಡಿದ್ದಾರೆ. ತಮ್ಮದೇ ನಾಟಕ ಡಿಯರ್ ಫಾದರ್ ಆಧರಿಸಿದ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ತಮ್ಮ ಅಧಿಕೃತ ಟ್ವಿಟರ್ ಪೇಜ್ನಲ್ಲಿ ಪರೇಶ್ ರಾವಲ್ ಈ ವಿಚಾರವನ್ನ ಶೇರ್ ಮಾಡಿದ್ದಾರೆ. 40 ವರ್ಷಗಳ ಬಳಿಕ ಗುಜರಾತಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಹೇಳೋದಕ್ಕೆ ತುಂಬ ಉತ್ಸುಕನಾಗಿದ್ದೇನೆ. ಈ ಸಿನಿಮಾವು ನನ್ನದೇ ಯಶಸ್ವಿ ನಾಟಕದ ಕತೆಯನ್ನ ಆಧರಿಸಿದೆ. ನನ್ನ ಈ ಹೊಸ ಪ್ರಯತ್ನ ರತನ್ ಜೈನ್ ಜಿಯಲ್ಲಿ ನೀವು ಭಾಗಿಯಾಗಿ. ನಿಮ್ಮೆಲ್ಲರ ಪ್ರೀತಿ ಹಾಗೂ ಆಶೀರ್ವಾದದ ಅವಶ್ಯಕತೆ ಇದೆ ಎಂದು ಬರೆದುಕೊಂಡಿದ್ದಾರೆ.
ಡಿಯರ್ ಫಾದರ್ ಅನ್ನೋದು ಒಂದು ಹಾಸ್ಯ ನಾಟಕವಾಗಿದ್ದು ಮೂವರು ಕುಟುಂಬಸ್ಥರ ನಡುವೆ ನಡೆಯುವ ಸನ್ನಿವೇಶವಾಗಿದೆ. ಈ ನಾಟಕದಲ್ಲಿ ಚೇತನ್ ಧನಾನಿ, ಮೃಣಮಯಿ ಗೋಡ್ಬೋಲೆ ಹಾಗೂ ಪರೇಶ್ ರಾವಲ್ ನಟಿಸಿದ್ದಾರೆ.