alex Certify ಒಮಿಕ್ರಾನ್ ನಿಂದ ಮಕ್ಕಳ ರಕ್ಷಣೆ ಹೀಗಿರಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಮಿಕ್ರಾನ್ ನಿಂದ ಮಕ್ಕಳ ರಕ್ಷಣೆ ಹೀಗಿರಲಿ

ಒಮಿಕ್ರಾನ್ ರೂಪಾಂತರದ ವಿಶ್ವದಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಒಮಿಕ್ರಾನ್ ರೂಪಾಂತರವು ದಕ್ಷಿಣ ಆಫ್ರಿಕಾದಲ್ಲಿ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದೆ. ಇದು ಪಾಲಕರ ಭಯಕ್ಕೆ ಕಾರಣವಾಗಿದೆ. ಒಮಿಕ್ರಾನ್ ನಿಂದ ಮಕ್ಕಳನ್ನು ರಕ್ಷಿಸಲು ಏನು ಮಾಡಬೇಕೆಂದು ಪಾಲಕರು ಪ್ರಶ್ನೆ ಮಾಡ್ತಿದ್ದಾರೆ.

ದೆಹಲಿಯ ರೇನ್‌ಬೋ ಆಸ್ಪತ್ರೆಯ ಡಾ.ನಿತಿನ್ ವರ್ಮಾ, ಒಮಿಕ್ರಾನ್ ರೂಪಾಂತರ ಮಕ್ಕಳಿಗೆ ಹೆಚ್ಚು ಅಪಾಯ ತಂದೊಡ್ಡಬಹುದು ಎಂದಿದ್ದಾರೆ. ಸೋಂಕಿನಿಂದ ಮಕ್ಕಳು ಹೆಚ್ಚು ಗಂಭೀರವಾಗ್ತಾರೆ ಎಂದಲ್ಲ, ಕೊರೊನಾ ಸೋಂಕಿಗೆ ಹೆಚ್ಚು ಒಳಗಾಗುತ್ತಾರೆ ಎಂದರ್ಥವೆಂದು ವೈದ್ಯರು ಹೇಳಿದ್ದಾರೆ. ದೇಶದಲ್ಲಿ ಮಕ್ಕಳಿಗೆ ಲಸಿಕೆ ಬಂದ ತಕ್ಷಣ ಎಲ್ಲ ಮಕ್ಕಳಿಗೆ ಲಸಿಕೆ ಹಾಕಿಸಬೇಕೆಂದು ವೈದ್ಯರು ಹೇಳಿದ್ದಾರೆ.

ಈ ಯೋಜನೆಯಲ್ಲಿ ಪ್ರತಿ ತಿಂಗಳು 1 ರೂ. ಹೂಡಿ ಎರಡು ಲಕ್ಷ ವಿಮೆ ಪಡೆಯಿರಿ

ಸದ್ಯ ಮಕ್ಕಳನ್ನು ರಕ್ಷಿಸಲು, ಪಾಲಕರು ಸೇರಿದಂತೆ ಎಲ್ಲ ವಯಸ್ಕರೂ ಕೊರೊನಾ ಲಸಿಕೆ ಹಾಕಿಕೊಳ್ಳಬೇಕಾಗಿದೆ. ಹಾಗೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯವೆಂದು ಅವರು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದಿಂದ ಆತಂಕಕಾರಿ ವರದಿಗಳು ಬರುತ್ತಿವೆ. ಐದು ವರ್ಷದೊಳಗಿನ ಮಕ್ಕಳು ಆಸ್ಪತ್ರೆಗೆ ದಾಖಲಾಗುವುದು ಹೆಚ್ಚಾಗಿದೆ. ಕೊರೊನಾ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿದ್ರೆ ಎಲ್ಲದರಿಂದ ರಕ್ಷಣೆ ಪಡೆಯಬಹುದೆಂದು ವೈದ್ಯರು ಹೇಳಿದ್ದಾರೆ.

ಯುರೋಪ್ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕಲಾಗ್ತಿದೆ. ಭಾರತದಲ್ಲಿ, ಕೋವ್ಯಾಕ್ಸಿನ್‌ ಲಸಿಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದಾಗ್ಯೂ, ಡ್ರಗ್ ಕಂಟ್ರೋಲರ್ ಜನರಲ್‌, ಹೆಚ್ಚುವರಿ ಡೇಟಾವನ್ನು ಕೋರಿದ್ದು, ಹಾಗಾಗಿ ಅನುಮೋದನೆಯನ್ನು ನೀಡಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...