ಜೈಪುರ: ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ನಮ್ಮ ಭಾರತೀಯ ಕ್ರೀಡಾಪಟುಗಳು ಇಡೀ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಪದಕ ಗೆದ್ದಿರುವ ರಾಜಸ್ಥಾನದ ಮೂಲದ ಪ್ಯಾರಲಿಂಪಿಯನ್ ಗಳಿಗೆ ಅಲ್ಲಿನ ಸರಕಾರ ಅರಣ್ಯ ಇಲಾಖೆಯಲ್ಲಿ ನೇಮಿಸಿತ್ತು. ಇದೀಗ ಈ ಪ್ಯಾರಾಲಿಂಪಿಯನ್ ಗಳಿಗೆ ಮೊದಲ ತಿಂಗಳ ವೇತನ ಬಿಡುಗಡೆ ಮಾಡಲಾಗಿದೆ.
ಕ್ರೀಡಾಪಟುಗಳಾದ ಅವನಿ ಲಖೇರಾ, ದೇವೇಂದ್ರ ಜಜಾರಿಯಾ, ಸುಂದರ್ ಸಿಂಗ್ ಗುರ್ಜಾರ್ ಅವರ ನೇಮಕಾತಿಯ ನಂತರ ಮೊದಲ ಬಾರಿಗೆ ರಾಜ್ಯದ ಅರಣ್ಯ ಇಲಾಖೆಯಿಂದ ಅವರ ವೇತನಗಳನ್ನು ಬಿಡುಗಡೆ ಮಾಡಲಾಯಿತು. ಈ ಮೂವರು ಕ್ರೀಡಾಪಟುಗಳಿಗೆ 5-10 ತಿಂಗಳ ಹಿಂದೆ ರಾಜಸ್ಥಾನದಲ್ಲಿ ಅರಣ್ಯ ಇಲಾಖೆಯಿಂದ ನೇಮಕಾತಿ ಮಾಡಲಾಗಿತ್ತು. ಇವರ್ಯಾರೂ ಒಂದು ತಿಂಗಳ ವೇತನವನ್ನೂ ಪಡೆದಿಲ್ಲ ಎಂದು ಮಾಧ್ಯಮ ವರದಿಯ ಹೇಳಿದೆ.
ಕಾರಿನೊಳಗೆ ಕೂತಿದ್ದ ತಾಯಿ – ಮಗನ ಮೇಲೆ ಏಕಾಏಕಿ ಹಲ್ಲೆ; ಆರೋಪಿ ಅರೆಸ್ಟ್
ನೇಮಕಾತಿ ನಡೆದಾಗಿನಿಂದ ತಮಗೆ ಒಂದು ರೂಪಾಯಿಯನ್ನು ಪಾವತಿಸಿಲ್ಲ ಎಂದು ಇಬ್ಬರು ಪ್ಯಾರಾ ಅಥ್ಲೀಟ್ ಗಳ ಕುಟುಂಬ ಸದಸ್ಯರು ಹೇಳಿದ ನಂತರವೇ, ಅರಣ್ಯ ಇಲಾಖೆಯು ಎಲ್ಲಾ ಬಾಕಿಯನ್ನು ಪಾವತಿಸಿದೆ.
“ಶಾಶ್ವತ ನಿವೃತ್ತಿ ಖಾತೆ ಸಂಖ್ಯೆಯನ್ನು ರಚಿಸಲು ಮತ್ತು ಅದನ್ನು ಆಧಾರ್ ಗೆ ಲಿಂಕ್ ಮಾಡಲು ಉದ್ಯೋಗಿಯು ದೈಹಿಕವಾಗಿ ಹಾಜರಿರಬೇಕು. ಅವರು ರಾಜಸ್ಥಾನದಲ್ಲಿ ಇಲ್ಲದ ಕಾರಣ, ಇದನ್ನು ಮಾಡಲು ಸಾಧ್ಯವಾಗಿಲ್ಲ. ಅಲ್ಲದೆ ಅರಣ್ಯ ಇಲಾಖೆಯ ಪ್ರಧಾನ ಕಚೇರಿಗೆ ಬದಲಾಗಿ ಆಟಗಾರರು ಔಪಚಾರಿಕವಾಗಿ ರಾಜ್ಯ ಕಾರ್ಯಾಲಯದಲ್ಲಿ ಸೇವೆಗೆ ಸೇರಿಕೊಂಡರು” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.