alex Certify ಇಲ್ಲಿದೆ ಟ್ವಿಟರ್​ ನೂತನ ಸಿಇಓ ಪರಾಗ್​ ಅಗರ್​ವಾಲ್​ ಕುರಿತ ಇಂಟ್ರಸ್ಟಿಂಗ್​ ಸಂಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಟ್ವಿಟರ್​ ನೂತನ ಸಿಇಓ ಪರಾಗ್​ ಅಗರ್​ವಾಲ್​ ಕುರಿತ ಇಂಟ್ರಸ್ಟಿಂಗ್​ ಸಂಗತಿ

ಟ್ವಿಟರ್​​ನ ಸಿಇಓ ಆಗಿದ್ದ ಜಾಕ್​ ಡೋರ್ಸೆ ತಮ್ಮ ಸ್ಥಾನದಿಂದ ಕೆಳಗಿಳಿದ ಬಳಿಕ ಆ ಸ್ಥಾನಕ್ಕೆ ಭಾರತೀಯ ಮೂಲದ ಅಮೆರಿಕದ ಪರಾಗ್​ ಅಗರ್​ವಾಲ್​ ನೇಮಕಗೊಂಡಿದ್ದಾರೆ.

ಅಗರ್​ವಾಲ್​​ ಐಐಟಿ ಬಾಂಬೆಯ ಮಾಜಿ ವಿದ್ಯಾರ್ಥಿಯಾಗಿದ್ದಾರೆ. 2018ರಲ್ಲಿ ಚೀಫ್​ ಟೆಕ್ನಾಲಜಿ ಆಫೀಸರ್​ ಆಗಿ ಟ್ವಿಟರ್​ ಸೇರ್ಪಡೆಯಾಗಿದ್ದ ಪರಾಗ್​ ಅಗರ್​ವಾಲ್​ ಇಂದು ಬಹುದೊಡ್ಡ ಸಾಮಾಜಿಕ ಜಾಲತಾಣ ವೇದಿಕೆಯ ಸಿಇಓ ಆಗಿ ನೇಮಕಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಪರಾಗ್​ ಅಗರ್​ವಾಲ್​​ ಟ್ವಿಟರ್​ ಸಿಇಓ ಆಗಿ ಆಯ್ಕೆಯಾಗುತ್ತಿದ್ದಂತೆಯೇ ಭಾರತೀಯರ ಖುಷಿಗೆ ಪಾರವೇ ಇಲ್ಲ ಎಂಬಂತಾಗಿದೆ. ಅಲ್ಲದೇ ಪರಾಗ್​ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಭಾರತೀಯರು ಉತ್ಸುಕರಾಗಿದ್ದಾರೆ. ಟ್ವಿಟರ್​ನ ನೂತನ ಸಿಇಓ ಪರಾಗ್​ ಅಗರ್​ವಾಲ್​ ಕುರಿತ ಐದು ಇಂಟರೆಸ್ಟಿಂಗ್​ ಮಾಹಿತಿ ಇಲ್ಲಿದೆ ನೋಡಿ :

ಸ್ಟ್ಯಾನ್​ಫೋರ್ಡ್​ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್​ ಸೈನ್ಸ್ ವಿಭಾಗದಲ್ಲಿ ಪಿಹೆಚ್​ಡಿ ಪಡೆದ ಅಗರ್​ವಾಲ್​​ ಅಕ್ಟೋಬರ್​ 2011ರಲ್ಲಿ ಡಿಸ್ಟಿಂಗ್ವಿಶ್ಡ್​​ ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಟ್ವಿಟರ್​ಗೆ ನೇಮಕಗೊಂಡರು. ಸ್ಟ್ಯಾನ್​ಫೋರ್ಡ್​ನಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಪರಾಗ್​ ಮೈಕ್ರೋಸಾಫ್ಟ್​, ಯಾಹೂ ಹಾಗೂ ಎಟಿ & ಟಿ ಪ್ರಯೋಗಾಲಯದಲ್ಲಿ ರಿಸರ್ಚ್ ಇಂಟರ್ನ್​ ಆಗಿ ಸೇವೆ ಸಲ್ಲಿಸಿದ್ದಾರೆ.

ಸಿಇಓ ಸ್ಥಾನದಿಂದ ಕೆಳಗಿಳಿದ ಜ್ಯಾಕ್​ ಡೋರ್ಸಿಯಂತೆಯೇ ಪರಾಗ್​ ಕೂಡ ಶಾಂತ, ಸಭ್ಯ ಹಾಗೂ ಇಂಟರ್ನೆಟ್​ ಬಗ್ಗೆ ಅತ್ಯಂತ ಹೆಚ್ಚಿನ ಮಾಹಿತಿಯನ್ನು ಹೊಂದಿದ್ದಾರೆ. ಪರಾಗ್​ ಒಬ್ಬ ಅತ್ಯುತ್ತಮ ನಾಯಕ ಎಂದು ಟ್ವಿಟರ್​ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

ಈ ಹಿಂದೆ ಮೆಟಾ ವೇದಿಕೆಯ ಸಿಇಓ ಜುಕರ್​ ಬರ್ಗ್​ರನ್ನು ಅತ್ಯಂತ ಕಿರಿಯ ಸಿಇಓ ಎಂದು ಕರೆಯಲಾಗುತ್ತಿತ್ತು. ಆದರೆ ಇದೀಗ ಪರಾಗ್​ ಅಗರ್​ವಾಲ್​ ವಿಶ್ವದ ಅತ್ಯಂತ ಕಿರಿಯ ಸಿಇಓ ಎಂದು ಹೇಳಲಾಗ್ತಿದೆ. ಭದ್ರತಾ ದೃಷ್ಟಿಯಿಂದ ಪರಾಗ್​ ಜನ್ಮ ದಿನಾಂಕವನ್ನು ಟ್ವಿಟರ್​ ಬಹಿರಂಗಪಡಿಸಿಲ್ಲ. ಆದರೆ ಪರಾಗ್​ ಅಗರ್​ವಾಲ್​ 37 ವರ್ಷ ಪ್ರಾಯದವರಾಗಿದ್ದಾರೆ ಹಾಗೂ ಜುಕರ್​ ಬರ್ಗ್ ಕೂಡ 1984ರಲ್ಲೇ ಜನಿಸಿದ್ದಾರೆ. ಮೇ 14 ಜುಕರ್​ ಬರ್ಗ್ ಜನ್ಮ ದಿನಾಂಕವಾಗಿದೆ. ಇದಾದ ಬಳಿಕ ಪರಾಗ್​ ಜನಿಸಿದ್ದಾರೆ ಎನ್ನಲಾಗಿದೆ.

ಪರಾಗ್​​​​ ಮುಂಬೈನಲ್ಲಿ ಜನಿಸಿದವರು. ಅಟಾಮಿಕ್​ ಎನರ್ಜಿ ಸೆಂಟ್ರಲ್​ ಸ್ಕೂಲ್​ನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು. ಪರಾಗ್​ ತಾಯಿ ನಿವೃತ್ತ ಶಿಕ್ಷಕಿ. ತಂದೆ ಪರಮಾಣು ಶಕ್ತಿ ಕೇಂದ್ರದಲ್ಲಿ ಉದ್ಯೋಗಿಯಾಗಿದ್ದರು. ಪರಾಗ್​ ವೆಂಚರ್​ ಕ್ಯಾಪಿಟಲ್​ ಹೂಡಿಕೆದಾರರಾದ ವಿನೀತ್​ ಅಗರ್​ವಾಲ್ ರನ್ನು ವರಿಸಿದ್ದಾರೆ. ಈ ದಂಪತಿಗೆ ಅಂಶ್​ ಎಂಬ ಪುಟ್ಟ ಪುತ್ರನಿದ್ದಾನೆ. ಪುಟ್ಟ ಬಾಲಕ ಕೂಡ ತನ್ನದೇ ಆದ ಟ್ವಿಟರ್​ ಖಾತೆ ಹೊಂದಿದ್ದಾನೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...
Oto przydatne porady dla ogrodników! Dowiedz się, jak pielęgnować swoje rośliny, gotować zdrowe posiłki z własnych warzyw i korzystać z praktycznych życiowych trików. Odkryj tajniki udanej uprawy i codziennej kuchni z naszymi artykułami i poradnikami. Z nami będziesz mądrym ogrodnikiem i świetnym kucharzem! Kulinarna podróż z Wciągający Mix Smaków: Żurawinowy dżem z Pomarańczą 10 Wyjątkowych Zapierający dech Odkryj tajemnice przygotowania Wyjątkowy Mistrzowskie sztuczki gotowania makaronu: przepisy na Rajskie Rozkosze z Dżemu z Tajemnice Bakłażanowy kawior z Oto kilka przydatnych wskazówek na temat oszczędzania czasu w kuchni, pomysłów na proste dania i porad dotyczących uprawy ogrodu. Znajdziesz tutaj wiele ciekawych artykułów, które pomogą Ci odkryć nowe pomysły i triki, które ułatwią Ci codzienne życie. Zapraszamy do zapoznania się z naszymi poradami!