
ತಂದೆಗೆ ಎಷ್ಟಾದರೂ ಹೆಣ್ಣುಮಕ್ಕಳೇ ಇಷ್ಟ. ಇದು ಎಲ್ಲರ ಮನೆಯಲ್ಲೂ ನಡೆಯುತ್ತಿರುವ ವಿಚಾರ. ಗಂಡುಮಕ್ಕಳ ಮೇಲೆ ಪ್ರೀತಿ ಇದ್ದರೂ, ಹೆಣ್ಣುಮಗಳೆಂದರೆ ಹೆಚ್ಚಿನ ಕಾಳಜಿ, ಮಮತೆ. ಹೆಣ್ಣುಮಕ್ಕಳಿಗೂ ಅಷ್ಟೇ ಅಮ್ಮ ಅಚ್ಚುಮೆಚ್ಚಾದರೇ, ಅಪ್ಪನ ಕಡೆಗೆ ಮಾತ್ರ ವಿಶೇಷ ಪ್ರೇಮ.
ಅಪ್ಪನಿಗೆ ಉಪಚಾರ ಮಾಡುವುದು, ಅಪ್ಪನ ಬಗ್ಗೆ ದಿನಾಲೂ ವಿಚಾರಿಸಿಕೊಳ್ಳುವುದು ಎಂದರೆ ಬಹಳ ಇಷ್ಟ.
ಇದೇ ರೀತಿಯ ಪುಟ್ಟ ಹೆಣ್ಣುಮಗಳೊಬ್ಬಳ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲಕಿ ಹೇಳುತ್ತಾಳೆ, ’’ ನನಗೆ ಅಪ್ಪನದ್ದೇ ನೆನಪು ಕಾಡುತ್ತಿರುತ್ತದೆ. ಅವರು ಕೆಲಸದ ಮೇಲೆ ಅಂಗಡಿಗೆ ಹೋದರೆ ಸಂಜೆಯವರೆಗೆ ಊಟ ಮಾಡಲ್ಲ. ಏನೂ ಕೂಡ ತಿಂದು, ಕುಡಿದು ಮಾಡಲ್ಲ. ಯಾವಾಗಲೂ ಕೆಲಸ ಕೆಲಸ ಎನ್ನುತ್ತಿರುತ್ತಾರೆ,’’ ಎಂದು ಅಳುತ್ತಲೇ ಪ್ರೀತಿ ತೋರಿಸಿದ್ದಾಳೆ.
SHOCKING NEWS: ಟಾರ್ಚ್ ಲೈಟ್ ಕಂಡು ಕಳ್ಳನನ್ನು ‘ದೆವ್ವ’ ಎಂದು ಕಂಗಾಲಾದ ಸ್ಥಳೀಯರು; ಬ್ಯಾಡರಹಳ್ಳಿ ಶಂಕರ್ ಮನೆಯಲ್ಲಿ ಘಟನೆ
ವಿಡಿಯೊದಲ್ಲಿ ಅಳುತ್ತಿರುವ ಮಗಳಿಗೆ ಸಮಾಧಾನ ಮಾಡಲು ತಾಯಿಯು , ’’ಇಲ್ಲಮ್ಮ, ಅಪ್ಪ ಬೆಳಗ್ಗೆ ಮತ್ತು ರಾತ್ರಿ ಎರಡು ಬಾರಿ ಊಟ ಮಾಡುತ್ತಾರೆ,’’ ಎಂದು ಸಂತೈಸುತ್ತಾರೆ. ಅದಕ್ಕೆ ಒಪ್ಪದ ಬಾಲಕಿಯು, ಸಂಜೆ ಮಾಡಲ್ಲವಲ್ಲ ಎಂದು ಮರುಪ್ರಶ್ನೆ ಹಾಕುತ್ತಾಳೆ. ಗ್ರಾಹಕರು ಅಂಗಡಿಯಲ್ಲಿ ಹೆಚ್ಚಿರುತ್ತಾರೆ. ಅವರ ಕಡೆಗೆ ಗಮನ ಕೊಡದಿದ್ದರೆ ಅಪ್ಪನಿಗೆ ವ್ಯಾಪಾರ ಆಗಲ್ಲ ಎಂದು ಹಲವು ರೀತಿಯಲ್ಲಿ ತಾಯಿಯು ವಿವರಿಸಿ ಸಂತೈಸಲು ಮುಂದಾಗುತ್ತಾರೆ.
ಈ ವಿಡಿಯೊ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ನಿಜವಾಗಲೂ ಹೆಣ್ಣುಮಕ್ಕಳನ್ನು ಪಡೆದ ಪೋಷಕರೇ ಧನ್ಯ. ಅವರೇ ಭವಿಷ್ಯದಲ್ಲಿ ತಂದೆ-ತಾಯಿಯ ಕಷ್ಟಕ್ಕೆ ಆಗುವುದು ಎಂದು ಹಲವರು ಟ್ವೀಟಿಗರು ಪ್ರತಿಕ್ರಿಯೆಯಲ್ಲಿ ತಮ್ಮ ಅನುಭವದ ಬುತ್ತಿ ಬಿಚ್ಚಿಟ್ಟಿದ್ದಾರೆ.