alex Certify ವಿಚಿತ್ರ ವೈರಲ್ ಜ್ವರದಿಂದ ಕಂಗೆಟ್ಟಿದ್ದಾರೆ ಲಖನೌ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚಿತ್ರ ವೈರಲ್ ಜ್ವರದಿಂದ ಕಂಗೆಟ್ಟಿದ್ದಾರೆ ಲಖನೌ ಜನ

ಕೊರೊನಾ ಸಾಂಕ್ರಾಮಿಕ ಪ್ರಸರಣದ ಭೀತಿಯಲ್ಲಿ ದೇಶ ಮುಳುಗಿದ್ದು, ಮೂರನೇ ಅಲೆ ಶುರುವಾಗುವ ಆತಂಕದಲ್ಲಿದ್ದರೆ ಉತ್ತರಪ್ರದೇಶದ ಲಖನೌನಲ್ಲಿ ಮಾತ್ರ ವಿಚಿತ್ರ ರೂಪದ ವೈರಲ್ ಜ್ವರದ ಹಾವಳಿ ಹೆಚ್ಚಿದೆ. ಹವಾಮಾನ ಬದಲಾವಣೆ ವೇಳೆ ಈ ಜ್ವರ ಸಾಮಾನ್ಯ ಎಂದು ವೈದ್ಯರುಗಳು ಸಮಜಾಯಿಷಿ ನೀಡುತ್ತಿದ್ದರೂ, 40 ಮಕ್ಕಳಲ್ಲಿ ಜ್ವರದ ಗಂಭೀರ ಸ್ವರೂಪ ಕಂಡುಬಂದಿರುವುದು ಜನಸಾಮಾನ್ಯರನ್ನು ಚಿಂತೆಗೆ ದೂಡಿದೆ.

ಸರಕಾರಿ ಆಸ್ಪತ್ರೆಗಳ ಒಪಿಡಿಗೆ ಬರುವ ರೋಗಿಗಳಲ್ಲಿ ಕನಿಷ್ಠ 20% ಮಂದಿಗೆ ಜ್ವರ, ಶೀತ ಮತ್ತು ಕಫದ ಲಕ್ಷಣಗಳು ಕಂಡುಬರುತ್ತಿವೆ. ಇವರಿಗೆಲ್ಲ ಕೋವಿಡ್-19 ಆಂಟಿಜನ್ ಟೆಸ್ಟ್ ಮಾಡಲಾಗುತ್ತಿದ್ದು, ವರದಿ ಮಾತ್ರ ನೆಗೆಟಿವ್ ಇದೆ.

ಮೋದಿ ಆಡಳಿತದಲ್ಲಿ ದೇಶ ಸುರಕ್ಷಿತ:‌ ಕೇಂದ್ರ ಸಚಿವ ರಾಜನಾಥ್‌ ಸಿಂಗ್ ಹೇಳಿಕೆ

ವೈರಲ್ ಜ್ವರ, ಡೆಂಗ್ಯೂ ಬಾಧಿತರು ಹೆಚ್ಚಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಕೆಳಹಂತದ ವಾತಾವರಣದಲ್ಲಿ ಈ ಹವಾಮಾನದ ವೇಳೆ ವೈರಾಣುಗಳ ಪ್ರಮಾಣ ಹೆಚ್ಚಿರುವುದು ಇದಕ್ಕೆ ಕಾರಣವಾಗಿದೆ. ಆದರೂ ಎಚ್ಚರಿಕೆ ವಹಿಸುವುದು ಉತ್ತಮ ಎಂದು ಸರಕಾರಿ ಆಸ್ಪತ್ರೆಯ ನಿರ್ದೇಶಕಿ ಡಾ. ಎಸ್.ಕೆ. ನಂದಾ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...