alex Certify ಕಥಕ್ ಲೋಕದ ದಂತಕಥೆ ಬಿರ್ಜು ಮಹಾರಾಜ್ ಸರಳ ನಡೆ ಬಿಂಬಿಸುತ್ತೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಥಕ್ ಲೋಕದ ದಂತಕಥೆ ಬಿರ್ಜು ಮಹಾರಾಜ್ ಸರಳ ನಡೆ ಬಿಂಬಿಸುತ್ತೆ ಈ ವಿಡಿಯೋ

ಕಥಕ್ ಗುರು ಬಿರ್ಜು ಮಹಾರಾಜ್ ದೆಹಲಿಯ ತಮ್ಮ ನಿವಾಸದಲ್ಲಿ ಜನವರಿ 17ರಂದು ಇಹಲೋಕ ತ್ಯಜಿಸಿದ್ದಾರೆ. ನೃತ್ಯದ ಈ ಪ್ರಕಾರದಿಂದಲೇ ’ಮಹಾರಾಜ್’ ಎಂದು ಖ್ಯಾತರಾಗಿರುವ ಬಿರ್ಜು ಅಗಲಿಕೆಗೆ ರಾಜಕಾರಣಿಗಳು, ಸೆಲೆಬ್ರಿಟಿಗಳು ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರು ಸಂತಾಪ ಸೂಚಿಸಿದ್ದಾರೆ.

ಮಹಾರಾಜ್‌ ಜೀ ಅವರ ಅಗಲಿಕೆಯ ಬೆನ್ನಲ್ಲೇ ವೈರಲ್ ಆದ ಅವರದ್ದೇ ಆದ ಅನೇಕ ವಿಡಿಯೋಗಳ ಪೈಕಿ, ತಮ್ಮ ಯುವ ವಿದ್ಯಾರ್ಥಿಯೊಬ್ಬರೊಂದಿಗೆ ಸಂವಹನ ನಡೆಸುತ್ತಿರುವ ಅವರನ್ನು ನೋಡಬಹುದಾಗಿದೆ. ಟ್ವಿಟರ್‌ನಲ್ಲಿ ಸರ್ವನ್_ಕೆ86 ಹೆಸರಿನ ನೆಟ್ಟಿಗರೊಬ್ಬರು ಶೇರ್‌ ಮಾಡಿದ ಕ್ಲಿಪ್‌ನಲ್ಲಿ ಮಹಾರಾಜ್‌ ಅವರು ತಮ್ಮ ವಿದ್ಯಾರ್ಥಿಗೆ ಆಶೀರ್ವಾದ ಮಾಡುತ್ತಿದ್ದಾರೆ.

ಇನ್ಮುಂದೆ ಮಾಸ್ಟರ್ ಕಾರ್ಡ್ ಗೆ ಪಾಸ್ವರ್ಡ್ ಬೇಕಿಲ್ಲ…!

ಪುಟ್ಟ ಬಾಲಕಿಯೊಬ್ಬಳಿಗೆ ಘುಂಗ್ರೂಗಳನ್ನು ಕೊಡುವ ಮೂಲಕ ವಿಡಿಯೋ ಆರಂಭಗೊಳ್ಳುತ್ತದೆ. ಬಾಲಕಿಯ ಹಣೆಗೆ ತಿಲಕ ಇಡುತ್ತಲೇ, ನೃತ್ಯದ ಆರಂಭದಲ್ಲಿ ಹೇಗೆ ನಿಲ್ಲಬೇಕೆಂದು ಬಾಲಕಿಯ ಪಾದ ಮುಟ್ಟಿ ಆಕೆಗೆ ತೋರಿಸಿಕೊಡುತ್ತಾರೆ ಮಹಾರಾಜ್‌ ಜೀ.‌ ಕಥಕ್ ದಂತಕಥೆಯ ಈ ಸರಳ ನಡೆ ನೆಟ್ಟಿಗರ ಹೃದಯ ಗೆದ್ದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...