ಸಾಂಕ್ರಾಮಿಕದ ಅಬ್ಬರಕ್ಕೆ ಸಣ್ಣ ಉದ್ಯಮಗಳಿಗೆ ಪೆಟ್ಟು ಬಿದ್ದರೂ ಸಹ ದೇಶದ ಕೆಲ ಕಂಪನಿಗಳು ತಮ್ಮ ಮಾರುಕಟ್ಟೆ ಮೌಲ್ಯದಲ್ಲಿ 68%ನಷ್ಟು ಏರಿಕೆ ಕಂಡಿವೆ.
ದಿ ಬರ್ಗಂಡಿ ಪ್ರೈವೇಟ್ ಹುರೂನ್ ಇಂಡಿಯಾ 500 ಸಮೀಕ್ಷೆಯು ಪಟ್ಟಿ ಮಾಡಿದಂತೆ ದೇಶದ 200 ಕಂಪನಿಗಳ ಒಟ್ಟಾರೆ ಮೌಲ್ಯವು 228 ಲಕ್ಷ ಕೋಟಿ ರೂ. ($3 ಲಕ್ಷ ಕೋಟಿ) ಇದ್ದು ದೇಶದ ಜಿಡಿಪಿಗಿಂತಲೂ ದೊಡ್ಡದಿದೆ.
ಈ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ನೇತೃತ್ವದ ರಿಲಾಯನ್ಸ್ ಉದ್ಯಮ ಸಮೂಹ ಮುಂದಿದ್ದು, 16.7 ಲಕ್ಷ ಕೋಟಿ ರೂ.ಗಳ ಮೌಲ್ಯವನ್ನು ಹೊಂದಿದೆ. 13.1 ಲಕ್ಷ ಕೋಟಿ ರೂ. ಮೌಲ್ಯದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಎರಡನೇ ಸ್ಥಾನದಲ್ಲಿದ್ದರೆ ಎಚ್‌ಡಿಎಫ್‌ಸಿ ಬ್ಯಾಂಕ್ 9.1 ಲಕ್ಷ ಕೋಟಿ ರೂ. ಮೌಲ್ಯದೊಂದಿಗೆ ಮೂರನೇ ಸ್ಥಾನದಲ್ಲಿದೆ.
ಗ್ರಾಹಕರೇ ಗಮನಿಸಿ: ಮುಂದಿನ ವಾರ ಈ ದಿನಗಳಲ್ಲಿ ʼಬಂದ್ʼ ಇರಲಿದೆ ಬ್ಯಾಂಕ್
ಪಟ್ಟಿಯಲ್ಲಿರದ ಕಂಪನಿಗಳಲ್ಲಿ, ಲಸಿಕೆ ಉತ್ಪಾದಕ ಸೀರಂ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) 1.8 ಲಕ್ಷ ಕೋಟಿ ರೂಪಾಯಿಯಷ್ಟು ಮಾರುಕಟ್ಟೆ ಮೌಲ್ಯ ಹೊಂದಿದೆ. ಸಾಂಕ್ರಮಿಕದ ವರ್ಷದಲ್ಲಿ ಪುಣೆ ಮೂಲದ ಕಂಪನಿಯ ಮೌಲ್ಯದಲ್ಲಿ 127%ದಷ್ಟು ಏರಿಕೆ ಕಂಡುಬಂದಿದೆ.
ದೇಶದ 43 ನಗರಗಳಿಂದ ಈ ಕಂಪನಿಗಳು ಬಂದಿದ್ದು, ಆರ್ಥಿಕ ರಾಜಧಾನಿ ಮುಂಬೈನ 167 ಕಂಪನಿಗಳು, ಬೆಂಗಳೂರಿನ 52 ಹಾಗೂ ಚೆನ್ನೈನ 38 ಕಂಪನಿಗಳು ಪಟ್ಟಿಯಲ್ಲಿ ಎಂಟ್ರಿ ಪಡೆದಿವೆ.
ಕ್ಷೇತ್ರವಾರು ಆಯಾಮದಲ್ಲಿ, ಆರ್ಥಿಕ ಸೇವೆಗಳ 77 ಕಂಪನಿಗಳು ಹಾಗೂ ಆರೋಗ್ಯ ಸೇವೆಯ 64 ಕಂಪನಿಗಳು ಈ ಪಟ್ಟಿಯಲ್ಲಿವೆ.