ಕೊರೋನ ಜಗತ್ತನ್ನು ಆವರಿಸಿದ ನಂತರ ಜನರು ತಮ್ಮ ಆರೋಗ್ಯ ಹಾಗೂ ನೈರ್ಮಲ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ. ಹಲವು ಮಂದಿ ಕಚೇರಿಗೆ, ರೆಸ್ಟೋರೆಂಟ್ ಅಥವಾ ಎಲ್ಲೇ ಹೋದರೂ ಸ್ಯಾನಿಟೈಜರ್ ನ್ನು ಜತೆಗೇ ಕೊಂಡೊಯುತ್ತಾರೆ. ಅಲ್ಲದೆ ಪದೇ ಪದೇ ಕೈ ತೊಳೆದುಕೊಳ್ಳುತ್ತಾರೆ. ಹಾಗೆ ಮಕ್ಕಳು ಕೂಡ ದೊಡ್ಡವರ ಅನುಕರಣೆ ಮಾಡುತ್ತಾರೆ.
ಅಂದ ಹಾಗೆ 2020 ರಲ್ಲಿ ಜನಿಸಿದ ಮಗುವೊಂದು ತನ್ನ ಹೆತ್ತವರು ಪದೇ ಪದೇ ಕೈತೊಳೆಯುವುದನ್ನು ಗಮನಿಸಿದೆ. ತಾನು ಕೂಡ ಎಲ್ಲೇ ಹೋದರು ಕೈ ತೊಳೆಯುತ್ತಿದೆ. ಸದ್ಯ ಈ ವಿಡಿಯೋ ಜನರ ಮನಗೆದ್ದಿದೆ. ತಾನು ಏನೇ ಮುಟ್ಟಿದರೂ ಕೂಡ ಪದೇ ಪದೇ ಕೈ ತೊಳೆಯುತ್ತೆ.
ಸೊಳ್ಳೆಗಳ ಸುಂಟರಗಾಳಿ ಎಂದಾದರೂ ನೋಡಿದ್ದೀರಾ..?
ಹೆಣ್ಣು ಮಗುವೊಂದು ರಸ್ತೆ ಬದಿಯ ದೀಪಗಳು, ಎಲೆಕ್ಟ್ರಿಕ್ ಸರ್ಕ್ಯೂಟ್ ಗಳು ಸೇರಿದಂತೆ ಬೀದಿಯಲ್ಲಿ ಕಾಣಸಿಗುವ ಪ್ರತಿಯೊಂದು ವಸ್ತುಗಳನ್ನೂ ಕೂಡ ಆಕೆ ಸ್ಯಾನಿಟೈಸರ್ ಎಂದೇ ಭಾವಿಸುತ್ತಾಳೆ. ವಸ್ತುಗಳ ಕೆಳಗೆ ತನ್ನ ಕೈಯನ್ನಿಟ್ಟು ಬಳಿಕ ಉಜ್ಜಿಕೊಳ್ಳುತ್ತಾಳೆ. ಸದ್ಯ ಪುಟ್ಟ ಬಾಲೆಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, 2.4 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆ ಮತ್ತು 73,000 ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ. ಮಗುವು ಹೊರಾಂಗಣದಲ್ಲಿ ಆಟವಾಡದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ಬೇಸರದ ಸಂಗತಿ ಅಂತೆಲ್ಲಾ ನೆಟ್ಟಿಗರು ವಿಷಾದಿಸಿದ್ದಾರೆ.
https://www.instagram.com/reel/CQ_K-Fpn-o_/?utm_source=ig_web_copy_link
https://www.youtube.com/watch?v=rae0g0p5gg4