ಶಾಶ್ವತ ಖಾತೆ ಸಂಖ್ಯೆ (ಪಾನ್) ಇಂದಿನ ದಿನದಲ್ಲಿ ಬಹುತೇಕ ಎಲ್ಲ ರೀತಿಯ ಆರ್ಥಿಕ ಚಟುವಟಿಕೆಗಳಿಗೆ ಅಗತ್ಯವಾದ ದಾಖಲೆ ಎಂಬಂತಾಗಿದೆ. ಆದಾಯ ತೆರಿಗೆ ಇಲಾಖೆ ವಿತರಿಸುವ ಹತ್ತು ಅಂಕಿಯ ಈ ಸಂಖ್ಯೆ ಮೂಲಕ ವ್ಯಕ್ತಿಯೊಬ್ಬರ ಎಲ್ಲಾ ಆರ್ಥಿಕ ವ್ಯವಹಾರಗಳನ್ನು ಲಿಂಕ್ ಮಾಡಲು ಸಾಧ್ಯವಾಗಿದೆ. ತೆರಿಗೆ ಪಾವತಿ, ಟಿಡಿಎಸ್/ಟಿಸಿಎಸ್, ಕ್ರೆಡಿಟ್ಗಳು, ಆದಾಯದ ರಿಟರ್ನ್ಸ್, ನಿರ್ದಿಷ್ಟ ವ್ಯವಹಾರಗಳು ಸೇರಿದಂತೆ ಬಹುತೇಕ ಚಟುವಟಿಕೆಗಳಿಗೆ ಪಾನ್ ಅಗತ್ಯವಾಗಿದೆ.
ಆದಾಯ ತೆರಿಗೆಯ 114ಬಿ ನಿಯಮದ ಅನುಸಾರ ಕೆಳಕಂಡ ವ್ಯವಹಾರಗಳಿಗೆ ಪಾನ್ ಅತ್ಯಗತ್ಯವಾಗಿದೆ:
1. ದ್ವಿಚಕ್ರ ವಾಹನ ಹೊರತುಪಡಿಸಿ ಮಿಕ್ಕ ವಾಹನಗಳ ಮಾರಾಟ ಹಾಗೂ ಖರೀದಿ.
2. ಬ್ಯಾಂಕಿಂಗ್ ಸಂಸ್ಥೆ ಅಥವಾ ಸಹಕಾರಿ ಬ್ಯಾಂಕ್ ನಲ್ಲಿ ಮೂಲ ಉಳಿತಾಯ ಖಾತೆ ತೆರೆಯುವ ಸಂದರ್ಭದಲ್ಲಿ.
ದೀಪ ಬೆಳಗುವ ವಿಧಾನ ಗೊತ್ತಿದ್ರೆ ಲಕ್ಷ್ಮಿ ಒಲಿಸಿಕೊಳ್ಳೋದು ಸುಲಭ…..!
3. ಕ್ರೆಡಿಟ್/ಡೆಬಿಟ್ ಕಾರ್ಡ್ಗೆ ಅರ್ಜಿ ಸಲ್ಲಿಸುವ ಸಂದರ್ಭ.
4. ಡೆಪಾಸಿಟರಿಯೊಂದಿಗೆ ಡಿಮ್ಯಾಟ್ ಖಾತೆ ತೆರೆಯುವ ಸಂದರ್ಭ, ಭದ್ರತೆಗಳ ವಾರಸುದಾರರು ಅಥವಾ ಸೆಬಿಯಲ್ಲಿ ಇನ್ಯಾವುದೇ ವ್ಯಕ್ತಿಯೊಂದಿಗೆ.
5. ಹೊಟೇಲ್ ಅಥವಾ ರೆಸ್ಟೋರೆಂಟ್ನಲ್ಲಿ 50,000 ರೂ. ಮೀರಿದ ಬಿಲ್ ಪಾವತಿ ಮಾಡುವ ಸಂದರ್ಭದಲ್ಲಿ.
6. ವಿದೇಶಕ್ಕೆ ತೆರಳುವ ಸಂದರ್ಭದಲ್ಲಿ ನಗದಿನಲ್ಲಿ ಪಾವತಿ ಮಾಡುವ ಅಥವಾ ವಿದೇಶೀ ಕರೆನ್ಸಿ ಖರೀದಿ ಮಾಡುವ ವೇಳೆ.
7. ಮ್ಯೂಚುವಲ್ ಫಂಡ್ ಅಥವಾ ಅದರ ಘಟಕಗಳ ಖರೀದಿ ಮಾಡುವಾಗ, 50,000 ರೂ. ಮೀರಿದ ವ್ಯವಹಾರಕ್ಕೆ.
ಸಾರಿಗೆ ಇಲಾಖೆಯಿಂದ ಮತ್ತೊಂದು ಹೊಸ ರೂಲ್ಸ್: ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ, 40 ಕಿ.ಮೀ. ವೇಗಮಿತಿ
8. ಕಂಪನಿಗಳು ಅಥವಾ ಸಂಸ್ಥೆಗಳು ನೀಡುವ ಬಾಂಡ್ಗಳು ಅಥವಾ ಡಿಬೆಂಚರ್ಗಳ ಮೇಲೆ 50,000 ರೂ. ಮೇಲ್ಪಟ್ಟ ಪಾವತಿ ಮಾಡುವ ವೇಳೆ.
9. ಆರ್.ಬಿ.ಐ.ಗೆ 50,000 ರೂ. ಮೀರಿದ ಪಾವತಿ ಮಾಡುವ ವೇಳೆ ಅಥವಾ ಕೇಂದ್ರ ಬ್ಯಾಂಕ್ ವಿತರಿಸುವ ಬಾಂಡ್ಗಳ ಖರೀದಿ ವೇಳೆ.
10. ಯಾವುದೇ ಬ್ಯಾಂಕಿಗ್ ಕಂಪನಿ ಅಥವಾ ಸಹಕಾರಿ ಬ್ಯಾಂಕ್ನಲ್ಲಿ ಠೇವಣಿ:- ಯಾವುದೇ ಒಂದು ದಿನದಲ್ಲಿ 50,000 ರೂ. ಮೇಲ್ಪಟ್ಟ ನಗದು; ಅಥವಾ 09 ನವೆಂಬರ್ 2016ರಿಂದ 30 ಡಿಸೆಂಬರ್ 2016ರ ಅವಧಿಯಲ್ಲಿ 2,50,000 ರೂ. ಮೀರಿದ ವಹಿವಾಟು ನಡೆಸಿದ ಸಂದರ್ಭದಲ್ಲಿ.
11. ಯಾವುದೇ ಒಂದು ದಿನದಲ್ಲಿ ಬ್ಯಾಂಕುಗಳ ಡ್ರಾಫ್ಟ್ ಅಥವಾ ಪಾವತಿ ಆರ್ಡರ್ಗಳು ಅಥವಾ ಬ್ಯಾಂಕರ್ ಚೆಕ್ಗಳ ಖರೀದಿ ಮಾಡುವ ವೇಳೆ.
12. ವಿತ್ತೀಯ ವರ್ಷವೊಂದರಲ್ಲಿ ಐದು ಲಕ್ಷ ರೂ.ಗಳನ್ನು ಮೀರಿದ ಒಂದು ಅವಧಿಯ ಠೇವಣಿ – ಬ್ಯಾಂಕಿಂಗ್ ಸಂಸ್ಥೆ, ಸಹಕಾರಿ ಸಂಸ್ಥೆ ಅಥವಾ ಅಂಚೆ ಕಚೇರಿಯಲ್ಲಿ.
ʼದೀಪಾವಳಿʼ ದಿನ ರಸ್ತೆಯಲ್ಲಿ ಹಣ ಸಿಕ್ರೆ ಏನ್ಮಾಡ್ಬೇಕು ಗೊತ್ತಾ….?
13. ಬ್ಯಾಂಕ್ ಡ್ರಾಫ್ಟ್ ಅಥವಾ ಪೇ ಆರ್ಡರ್ ಅಥವಾ ಬ್ಯಾಂಕ್ ಚೆಕ್ ಮೂಲಕ 50,000 ರೂ. ಮೀರಿದ ಪಾವತಿಯನ್ನು ಒಂದು ವಿತ್ತೀಯ ವರ್ಷದೊಳಗೆ ಮಾಡಿದಲ್ಲಿ, ಒಂದು ಅಥವಾ ಹೆಚ್ಚಿನ ಪ್ರೀಪೇಯ್ಡ್ ಪಾವತಿಗಳ ಮೂಲಕ.
14. ಒಂದು ವಿತ್ತೀಯ ವರ್ಷದಲ್ಲಿ 50,000 ರೂ. ಮೀರಿದ ಪ್ರೀಮಿಯಂ ಅನ್ನು ಜೀವ ವಿಮಾ ಪಾಲಿಸಿದಾರರಿಗೆ ಪಾವತಿ ಮಾಡುವ ಸಂದರ್ಭ.
15. ಭದ್ರತೆಗಳು ಮಾರಾಟ ಅಥವಾ ಖರೀದಿಯ ಕಾಂಟ್ರಾಕ್ಟ್, ಒಂದು ಲಕ್ಷ ರೂ. ಮೀರಿದ ಮೊತ್ತಕ್ಕೆ.
16. ಯಾವುದೇ ಕಂಪನಿಯ ಶೇರುಗಳ ಖರೀದಿ ಅಥವಾ ಮಾರಾಟದ ವೇಳೆ, ಒಂದು ಲಕ್ಷ ರೂ. ಮೀರಿದ ವಹಿವಾಟಿಗೆ, ಸ್ಟಾಕ್ ಮಾರುಕಟ್ಟೆಯ ಪಟ್ಟಿಯಲ್ಲಿ ಇಲ್ಲದ ಕಂಪನಿಗೆ.
ಗ್ರಾಹಕರಿಗೆ SBI ನೀಡಿದೆ ಖುಷಿ ಸುದ್ದಿ….! 342 ರೂ.ಗೆ ಸಿಗಲಿದೆ 4 ಲಕ್ಷ ರೂ. ಲಾಭ
17. ಹತ್ತು ಲಕ್ಷ ರೂ. ಮೀರಿದ ಸ್ಥಿರಾಸ್ತಿಯ ಖರೀದಿ ಅಥವಾ ಮಾರಾಟದ ವೇಳೆ.
18. ಪ್ರತಿ ವ್ಯವಹಾರಕ್ಕೆ ಎರಡು ಲಕ್ಷ ರೂ.ಗಳ ಗರಿಷ್ಠ ಮಿತಿಯಂತೆ, ಸರಕು ಹಾಗೂ ಸೇವೆಗಳ ಮಾರಾಟ ಹಾಗೂ ಖರೀದಿ ವೇಳೆ.