ಆರ್ಥಿಕ ವಹಿವಾಟುಗಳಿಗೆ ಅತ್ಯಗತ್ಯವಾದ ಪಾನ್ ಕಾರ್ಡ್ನಲ್ಲಿ ನಿಮ್ಮ ಭಾವಚಿತ್ರ ಹಾಗೂ ಸಹಿಗಳು ಸ್ಪಷ್ಟವಾಗಿರುವುದು ಮುಖ್ಯ. ನಿಮ್ಮ ಪಾನ್ ಕಾರ್ಡ್ ಮೇಲಿರುವ ಭಾವಚಿತ್ರ ಹಾಗೂ ಸಹಿಗಳಲ್ಲಿ ಸಾಮ್ಯತೆ ಕಾಣದೇ ಇದ್ದಲ್ಲಿ ಕೆಳಕಂಡ ಕ್ರಮಗಳ ಮೂಲಕ ಆ ವಿವರಗಳನ್ನು ಪರಿಷ್ಕರಿಸಿಕೊಳ್ಳಬಹುದಾಗಿದೆ:
ತಲೆತಿರುಗಿಸುತ್ತೆ ಶಾಹಿದ್ ಕಪೂರ್ ದಂಪತಿ ಮಾಲ್ಡೀವ್ಸ್ನಲ್ಲಿ ನೆಲೆಸಿದ್ದ ಬಂಗಲೆಯ 1 ದಿನದ ಬಾಡಿಗೆ…..!
1. ಎನ್ಎಸ್ಡಿಎಲ್ ಜಾಲತಾಣಕ್ಕೆ ಭೇಟಿ ನೀಡಿ.
2. ಇದಾದ ಬಳಿಕ, Application Type ಡ್ರಾಪ್ ಡೌನ್ ಮೆನುವಿನಲ್ಲಿ PAN Dataದಲ್ಲಿ Changes ಆಯ್ದುಕೊಳ್ಳಿ.
3. ಈಗ ಮೆನುವಿನಿಂದ Individual ಆಯ್ಕೆ ಆಯ್ದುಕೊಳ್ಳಿ.
4. ಎಲ್ಲಾ ಅಗತ್ಯ ಮಾಹಿತಿ ಭರ್ತಿ ಮಾಡಿದ ಬಳಿಕ submit ಮೇಲೆ ಕ್ಲಿಕ್ ಮಾಡಿ.
5. ಈಗ PAN application ಹೋಗಿ, KYC ಆಯ್ಕೆ ಮಾಡಿ.
6. ಇದಾದ ಬಳಿಕ ‘Photo Mismatch’ ಹಾಗೂ ‘Signature Mismatch’ ಆಯ್ಕೆಗಳು ನಿಮ್ಮ ಕಣ್ಣಿಗೆ ಬೀಳಲಿವೆ.
7. ಭಾವಚಿತ್ರವನ್ನು ಮಾರ್ಪಾಡು ಮಾಡಲು, ಡ್ರಾಪ್ಡೌನ್ ಮೆನುವಿನಲ್ಲಿ Photo Mismatch ಆಯ್ದುಕೊಳ್ಳಿ.
ಗುಡ್ ನ್ಯೂಸ್: ಶೀಘ್ರದಲ್ಲೇ ಇಳಿಕೆಯಾಗಲಿದೆ ರೈಲ್ವೆ ಪ್ರಯಾಣ ದರ…..!
8. ಅಗತ್ಯವಿರುವ ಮಾಹಿತಿ ಭರ್ತಿ ಮಾಡಿದ ಬಳಿಕ Next ಆಯ್ಕೆ ಮೇಲೆ ಕ್ಲಿಕ್ ಮಾಡಿ.
9. ಅಗತ್ಯವಿರುವ ಎಲ್ಲಾ ಮಾಹಿತಿ ಭರ್ತಿ ಮಾಡಿದ ಬಳಿಕ ಗುರುತಿನ ಸಾಕ್ಷಿ, ವಿಳಾಸ ಹಾಗೂ ಜನ್ಮ ದಿನಾಂಕದ ವಿವರಗಳನ್ನು ಲಗತ್ತಿಸಬೇಕು.
10. ಈಗ Declaration ಬಾಕ್ಸ್ ಮೇಲೆ ಕ್ಲಿಕ್ ಮಾಡಿ Submit ಆಯ್ದುಕೊಳ್ಳಿ.
11. ನಿಮ್ಮ ಭಾವಚಿತ್ರ ಹಾಗೂ ಸಹಿಯಲ್ಲಿ ಬದಲಾವಣೆ ಮಾಡಲು 101ರೂ.ಗಳ ಶುಲ್ಕವಿದೆ. ಭಾರತದ ಹೊರಗಿನ ವಿಳಾಸಕ್ಕಾದರೆ ಈ ಶುಲ್ಕವು 1011 ರೂ.ಗಳಾಗುತ್ತದೆ.
ಈ ಉಪಾಯ ಅನುಸರಿಸಿದ್ರೆ ʼಖಜಾನೆʼ ತುಂಬಿಸುತ್ತೆ ರೊಟ್ಟಿ
12. ಈ ವಹಿವಾಟು ಮುಗಿದ ಬಳಿಕ ನಿಮ್ಮ ನೋಂದಾಯಿತ ದೂರವಾಣಿಗೆ 15 ಅಂಕಿಯ ಖಾತ್ರಿ ಸಂಖ್ಯೆ ಕಳುಹಿಸಲಾಗುತ್ತದೆ.
13. ಅರ್ಜಿಯ ಪ್ರಿಂಟ್ ಅನ್ನು ಆದಾಯ ತೆರಿಗೆ ಇಲಾಖೆಯ ಪಾನ್ ಸೇವಾ ಘಟಕಕ್ಕೆ ಕಳುಹಿಸಿ.
14. ಖಾತ್ರಿ ಸಂಖ್ಯೆ ಬಳಸಿ ಅರ್ಜಿಯನ್ನು ಟ್ರ್ಯಾಕ್ ಮಾಡಬಹುದಾಗಿದೆ.