alex Certify ‌ʼಪಾನ್ʼ​ ​ಗೆ ʼಆಧಾರ್ʼ​ ಲಿಂಕ್​ ಮಾಡಿಲ್ವಾ ? ಹಾಗಾದ್ರೆ ಎಚ್ಚರ ನಿಷ್ಕ್ರಿಯಗೊಳ್ಳಲಿದೆ ನಿಮ್ಮ ಕಾರ್ಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಪಾನ್ʼ​ ​ಗೆ ʼಆಧಾರ್ʼ​ ಲಿಂಕ್​ ಮಾಡಿಲ್ವಾ ? ಹಾಗಾದ್ರೆ ಎಚ್ಚರ ನಿಷ್ಕ್ರಿಯಗೊಳ್ಳಲಿದೆ ನಿಮ್ಮ ಕಾರ್ಡ್

ನವದೆಹಲಿ: ನೀವು ಪ್ಯಾನ್ ಕಾರ್ಡ್ ಹೊಂದಿರುವಿರಾ ? ಕಾರ್ಡ್​ ಹೊಂದಿದ್ದು, ಅದನ್ನು ಇನ್ನೂ ಆಧಾರ್‌ನೊಂದಿಗೆ ಲಿಂಕ್ ಮಾಡಿಲ್ಲವೆ ? ಹಾಗಿದ್ದರೆ ಈ ಎಚ್ಚರಿಕೆಯನ್ನೊಮ್ಮೆ ಓದಿಬಿಡಿ. ಪ್ಯಾನ್​ ಕಾರ್ಡ್‌ದಾರರು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲು ವಿಫಲವಾದರೆ ಬರುವ ಮಾರ್ಚ್​ ನಂತರ ನಿಮ್ಮ ಪ್ಯಾನ್​ ಕಾರ್ಡ್​ ನಿಷ್ಕ್ರಿಯಗೊಳ್ಳುತ್ತದೆ.

ಇದಾಗಲೇ ಈ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಎರಡೂ ಕಾರ್ಡ್​ಗಳನ್ನು ಲಿಂಕ್​ ಮಾಡಲು ಕಳೆದ ಮಾರ್ಚ್ 31ರ ವರೆಗೆ ಅನುಮತಿ ನೀಡಲಾಗಿತ್ತು. ಹೀಗೆ ಮಾಡದಿದ್ದರೆ 1 ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ಹೇಳಲಾಗಿತ್ತು. ಆದರೆ ಇದೀಗ ಹೊಸ ಘೋಷಣೆ ಮಾಡಲಾಗಿದ್ದು, ಬರುವ ಮಾರ್ಚ್​ ವರೆಗೆ ಗಡುವು ನೀಡಲಾಗಿದೆ. ಒಂದು ವೇಳೆ ಲಿಂಕ್​ ಮಾಡದೇ ಹೋದರೆ ನೀವು ನಿಮ್ಮ ಪ್ಯಾನ್​ ಕಾರ್ಡ್​ ಅನ್ನು ಕಳೆದುಕೊಳ್ಳಬೇಕಾಗುತ್ತದೆ.

ಆಧಾರ್​ ಕಾರ್ಡ್​ ಜತೆಗೆ ಪ್ಯಾನ್​ ಕಾರ್ಡ್​ ಲಿಂಕ್​ ಮಾಡದೇ ಹೋದರೆ ಪ್ಯಾನ್​ ಕಾರ್ಡ್​ ನಿಷ್ಕ್ರಿಯಗೊಳ್ಳುತ್ತದೆ ಮತ್ತು ಪ್ಯಾನ್​ ಕಾರ್ಡ್​ ಅಗತ್ಯವಿರುವ ಎಲ್ಲಾ ಕಾರ್ಯವಿಧಾನಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಈ ರೀತಿಯಾದರೆ ಅದನ್ನು ಪುನಃ ಚಾಲ್ತಿಯಲ್ಲಿ ಪಡೆದುಕೊಳ್ಳಲು ದೊಡ್ಡ ಪ್ರಕ್ರಿಯೆ ನಡೆಸಬೇಕಾಗುತ್ತದೆ. ನಿಗದಿತ ಶುಲ್ಕವನ್ನು ಪಾವತಿಸಬೇಕು. ಶುಲ್ಕ ಪಾವತಿಯ ಬಳಿಕ ನಿಗದಿತ ಪ್ರಾಧಿಕಾರಕ್ಕೆ ಹೋಗಿ ಈ ಕಾರ್ಡ್​ಗಳನ್ನು ಪುನಃ ಕಾರ್ಯಗತಗೊಳಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...