ಸೆಪ್ಟೆಂಬರ್ ಶುರುವಾಗಿದೆ. ಹೊಸ ಜಿಎಸ್‍ಟಿ ನಿಯಮದಿಂದ ಪಿಎಫ್-ಆಧಾರ್ ಲಿಂಕ್ ಮಾಡುವವರೆಗೆ ಹಲವಾರು ಬದಲಾವಣೆಗಳಾಗಿವೆ. ಇದು ಜನಸಾಮಾನ್ಯರ ದಿನನಿತ್ಯದ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದರೊಂದಿಗೆ ಈ ತಿಂಗಳು ನಾಗರಿಕರು ಗಮನಿಸಬೇಕಾದ 10 ಪ್ರಮುಖ ಅಂಶಗಳು ಇಲ್ಲಿವೆ.
1) ಹೊಸ ಜಿಎಸ್‍ಟಿ ನಿಯಮ
ಸರಕು ಮತ್ತು ಸೇವಾ ತೆರಿಗೆ ನೆಟ್‍ವರ್ಕ್ (ಜಿಎಸ್‍ಟಿಎನ್) ಸೆಪ್ಟೆಂಬರ್ 1 ರಿಂದ ಕೇಂದ್ರ ಜಿಎಸ್‍ಟಿ ನಿಯಮ -59 (6) ಅಡಿಯಲ್ಲಿ ಜಿಎಸ್‍ಟಿಆರ್ -1 ಸಲ್ಲಿಸಲು ಕೆಲವು ನಿರ್ಬಂಧಗಳನ್ನು ಹೇರಿದೆ.
2) ಪಿಎಫ್-ಆಧಾರ್ ಲಿಂಕ್
ಉದ್ಯೋಗದಾತರು ಮತ್ತು ನೌಕರರು, ಉದ್ಯೋಗಿಗಳ ಭವಿಷ್ಯ ನಿಧಿ(ಪಿಎಫ್) ಖಾತೆಯ ಯುಎಎನ್ ಸಂಖ್ಯೆಗೆ ತಮ್ಮ ಆಧಾರ್ ಕಾರ್ಡ್ ಸಂಖ್ಯೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ.
ಬೇಟೆ ಬೆನ್ನತ್ತಿ ಪ್ರಪಾತಕ್ಕೆ ಬಿದ್ದ ಹಿಮ ಚಿರತೆ
3) ಪ್ಯಾನ್-ಆಧಾರ್ ಲಿಂಕ್
ಪ್ಯಾನ್ ಕಾರ್ಡ್‍ಗೆ -ಆಧಾರ್ ಸಂಖ್ಯೆ ಜೋಡಣೆ ಮಾಡಲು ಸರ್ಕಾರವು ಸೆಪ್ಟೆಂಬರ್ 30, 2021 ರ ಗಡುವನ್ನು ಈಗಾಗಲೇ ಘೋಷಿಸಿದೆ. ಇದನ್ನು ಜೂನ್ 30, 2021 ರಿಂದ ವಿಸ್ತರಿಸಲಾಗಿದೆ.
4) ಹೆಚ್ಚಿದ ಅಡುಗೆ ಅನಿಲ ಸಿಲಿಂಡರ್ ಬೆಲೆಗಳು
ಎಲ್‍ಪಿಜಿ ಅಡುಗೆ ಅನಿಲವು ಸೆಪ್ಟೆಂಬರ್ ತಿಂಗಳಲ್ಲೂ ಬೆಲೆ ಏರಿಕೆಯನ್ನು ಕಂಡಿತು. ಸರ್ಕಾರದ ಒಪ್ಪಿಗೆ ಮೇರೆಗೆ ತೈಲ ಉತ್ಪಾದನಾ ಕಂಪನಿಗಳು ಗೃಹ ಬಳಕೆ ಅಡುಗೆ ಅನಿಲ ಸಿಲಿಂಡ್ ಬೆಲೆಯನ್ನು ತಲಾ 25 ರೂ. ಹೆಚ್ಚಿಸಿವೆ.
ಕಳೆದ 20 ದಿನಗಳ ಮುನ್ನ ಕೂಡ 25 ರೂ. ಏರಿಕೆ ಕಂಡಿತ್ತು. ಈ ಮೂಲಕ ಸಬ್ಸಿಡಿ ರಹಿತ 14.2 ಕೆ.ಜಿ ತೂಕದ ಅಡುಗೆ ಅನಿಲ ಸಿಲಿಂಡರ್ ಬೆಲೆಯು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 884.50 ರೂ. ಮುಟ್ಟಿ, ದಾಖಲೆ ಬರೆದಿದೆ.
5) ಧನಾತ್ಮಕ ಪಾವತಿ ವ್ಯವಸ್ಥೆ
ಆರ್ಬಿಐ ಆರಂಭಿಸಿದ ಧನಾತ್ಮಕ ವೇತನ ವ್ಯವಸ್ಥೆಯನ್ನು ಪರಿಶೀಲನೆಗಾಗಿ ಜಾರಿಗೆ ತರಲಾಗಿದೆ. ಆದರೆ ಕೆಲವು ಬ್ಯಾಂಕ್‍ಗಳು ಇನ್ನೂ ಅನುಸರಿಸಿಲ್ಲ. ಆಕ್ಸಿಸ್ ಬ್ಯಾಂಕ್ ಮಾತ್ರ ಸೆಪ್ಟೆಂಬರ್ 1 ರಿಂದ ಧನಾತ್ಮಕ ವೇತನ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಬಹಿರಂಗಪಡಿಸಿದೆ.
6) ಬಂಪರ್-ಟು-ಬಂಪರ್ ಕಾರ್ ವಿಮೆ
ಸದ್ಯ ಕಾರಿನ ಮಾಲೀಕರು ಹೊಸ ಕಾರಿನ ಖರೀದಿ ಮೇಲೆ 5-ವರ್ಷಗಳವರೆಗೆ ಬಂಪರ್-ಟು-ಬಂಪರ್ ವಿಮೆಯನ್ನು ಹೊಂದಿರಬೇಕು. ಈ ಹಿಂದೆ ಇದು ಆಯ್ಕೆ ಆಗಿತ್ತು. ಕಾರಿನ ಪ್ರತಿ ಭಾಗವೂ ಕೂಡ ವಿಮೆಗೆ ಒಳಪಡಲೇಬೇಕಿದೆ. ಹಾಗಾಗಿ ಕಾರಿನ ಒಟ್ಟು ಬೆಲೆಯಲ್ಲಿ ಭಾರಿ ಏರಿಕೆ ಕಂಡುಬರಲಿದೆ.
7) ಮಾರುತಿ ಸುಜುಕಿ ಬೆಲೆ ಏರಿಕೆ
ಮಾರುತಿ ಸುಜುಕಿ ಕಂಪನಿಯು ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ತನ್ನ ವಾಹನಗಳ ಬೆಲೆಯನ್ನು ಶೇ. 3-4 ರಷ್ಟು ಹೆಚ್ಚಳ ಮಾಡುವುದಾಗಿ ಘೋಷಿಸಿದೆ.
8) ಪಂಜಾಬ್ ನ್ಯಾಷನಲ್ ಬ್ಯಾಂಕ್ ಉಳಿತಾಯ ಖಾತೆ (ಪಿಎನ್‍ಬಿ)
ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಉಳಿತಾಯ ಖಾತೆ ಠೇವಣಿಗಳ ಬಡ್ಡಿ ದರವನ್ನು ಸೆಪ್ಟೆಂಬರ್ 1 ರಿಂದ ಕಡಿಮೆ ಮಾಡಿದೆ. ಪ್ರಸ್ತುತ ಮತ್ತು ಹೊಸ ಉಳಿತಾಯ ಖಾತೆದಾರರಿಗೆ ಪರಿಷ್ಕೃತ ಬಡ್ಡಿದರವು ವರ್ಷಕ್ಕೆ ಶೇ. 2.90 ಮಾತ್ರವೇ ಇರಲಿದೆ.
9) ಭಾರಿ ದುಬಾರಿ ಒಟಿಟಿ ಚಂದಾದಾರಿಕೆ
ಡಿಸ್ನಿ ಜತೆಗೆ ಹಾಟ್‍ಸ್ಟಾರ್ ಚಂದಾದಾರರು ಈಗ ಸೆಪ್ಟೆಂಬರ್ ನಿಂದ ಒಟಿಟಿ ಚಂದಾದಾರಿಕೆ ಮುಂದುವರಿಸಲು ಹೆಚ್ಚಿನ ಮೊತ್ತವನ್ನು ನೀಡಬೇಕಿದೆ. ಪರಿಷ್ಕೃತ ಬೆಲೆಗಳು ತಿಂಗಳಿಗೆ 399 ರಿಂದ 499 ರೂ.ವರೆಗೆ ಇರಲಿದೆ.
10) ಗೂಗಲ್ ಆ್ಯಪ್ ನಿರ್ಬಂಧಗಳು
ಮಕ್ಕಳನ್ನು ಗುರಿಯಾಗಿಸುವ ಆ್ಯಪ್‍ಗಳಲ್ಲಿ ಬಳಸುವ ಗುರುತಿಸುವಿಕೆಗಳು (ಐಡೆಂಟಿಫೈಯರ್ಸ್) ಮೇಲೆ ಗೂಗಲ್ ಕಂಪನಿಯು ತನ್ನ ಕುಟುಂಬಗಳ ಅವಶ್ಯಕತೆಗಳ ನೀತಿಗಳ ಅನ್ವಯ ಹೊಸ ನಿರ್ಬಂಧಗಳನ್ನು ಜಾರಿಗೊಳಿಸಿದೆ. ಆ್ಯಪ್ ಡೆವಲಪರ್‌ಗಳು 2021ರ ಸೆ.1 ರಿಂದ ಹೊಸ ನಿಯಮ ಪಾಲಿಸಬೇಕು.