alex Certify ಇನ್ನೂ ಮಾಡಿಲ್ವಾ ಆಧಾರ್‌ – ಪಾನ್‌ ಲಿಂಕ್…?‌ ಹಾಗಾದ್ರೆ ಜುಲೈ 1 ರಿಂದ ಬೀಳಲಿದೆ ದುಪ್ಪಟ್ಟು ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ನೂ ಮಾಡಿಲ್ವಾ ಆಧಾರ್‌ – ಪಾನ್‌ ಲಿಂಕ್…?‌ ಹಾಗಾದ್ರೆ ಜುಲೈ 1 ರಿಂದ ಬೀಳಲಿದೆ ದುಪ್ಪಟ್ಟು ದಂಡ

PAN-Aadhaar linking not done? Double fine from July 1. Here's how to link, check status

ಸರ್ಕಾರದ ಆದೇಶದಂತೆ ಪ್ರತಿಯೊಬ್ಬ ಭಾರತೀಯ ನಾಗರಿಕರು ತಮ್ಮ ಎರಡು ಪ್ರಮುಖ ದಾಖಲೆಗಳಾದ ಪಾನ್​ ಕಾರ್ಡ್​ ಮತ್ತು ಆಧಾರ್​ ಕಾರ್ಡ್​ ಅನ್ನು ಲಿಂಕ್​ ಮಾಡಬೇಕಾಗುತ್ತದೆ.

ಪಾನ್​ ಮತ್ತು ಆಧಾರ್​ ಲಿಂಕ್​ ಮಾಡಲು ಆದಾಯ ತೆರಿಗೆ ಇಲಾಖೆಯು 2022 ರ ಮಾರ್ಚ್​ 31ಕ್ಕೆಗಡುವು ಎಂದು ನಿಗದಿಪಡಿಸಿತ್ತು, ನಂತರ ಅದನ್ನು ವಿಸ್ತರಿಸಿತ್ತು. ಮಾರ್ಚ್​ 29ರಂದು ಕೇಂದ್ರವು ಪಾನ್​ ಮತ್ತು ಆಧಾರ್​ ಅನ್ನು ಲಿಂಕ್​ ಮಾಡಲು ಗಡುವನ್ನು 2023ರ ಮಾರ್ಚ್​ 31ಕ್ಕೆ ವಿಸ್ತರಿಸಿದೆ. ಆದರೂ ಗಮನಿಸಬೇಕಾದ ಅಂಶವೊಂದಿದೆ.

2022ರ ಮಾರ್ಚ್​ 31ರ ನಂತರ ಮತ್ತು ಜೂನ್​ 30, 2022 ರೊಳಗೆ ಪಾನ್​- ಆಧಾರ್​ ಲಿಂಕ್​ ಮಾಡುವವರು ರೂ.500 ದಂಡ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ನೇರ ತೆರಿಗೆಯ ಕೇಂದ್ರೀಯ ಮಂಡಳಿಯು ಸೂಚಿಸಿದೆ. ಆ ದಿನಾಂಕದ ನಂತರ ದಾಖಲೆಗಳನ್ನು ಲಿಂಕ್​ ಮಾಡಿದರೆ 1,000 ರೂ. ದಂಡ ತೆರಬೇಕಾಗುತ್ತದೆ.

ಪಾನ್​ ಆಧಾರ್​ ಲಿಂಕ್​ ಮಾಡದಿದ್ದರೆ ಏನಾಗುತ್ತದೆ? ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿರಬಹುದು. ಹೊಸ ಗಡುವಿನ ಮೊದಲು ಎರಡನ್ನು ಲಿಂಕ್​ ಮಾಡಲು ವಿಫಲವಾದರೆ, ಪಾನ್​ ನಿಷ್ಕ್ರಿಯವಾಗಬಹುದು. ಅಂತಹ ಸಂದರ್ಭದಲ್ಲಿ ಕಾಯ್ದೆಯಡಿಯಲ್ಲಿ ಅಂತಹ ವೈಫಲ್ಯಕ್ಕಾಗಿ ಕಾಯಿದೆಯ ಅಡಿಯಲ್ಲಿ ಎಲ್ಲಾ ಪರಿಣಾಮಗಳಿಗೆ ಜವಾಬ್ದಾರರಾಗಿರುತ್ತಾರೆ ಎಂದು ಎಚ್ಚರಿಸಲಾಗಿದೆ.

5300 ಪೌರಕಾರ್ಮಿಕರ ಹುದ್ದೆಗಳಿಗೆ ನೇಮಕಾತಿ

ಹಾಗೆಯೇ, ಪಾನ್​-ಆಧಾರ್​ ಲಿಂಕ್​ ಮಾಡಲಾಗಿದೆಯೇ ಎಂದು ಪರಿಶೀಲಿಸುವುದು ಹೇಗೆ ?

– ಅಧಿಕೃತ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ: incometaxindiaefiling.gov.in/aadhaarstatus

– ನಿಮ್ಮ ಪ್ಯಾನ್​ ಮತ್ತು ಆಧಾರ್​ ವಿವರಗಳನ್ನು ನಮೂದಿಸಿ

– ‘View Link Aadhaar Status’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

– ಲಿಂಕ್​ನ ಸ್ಥಿತಿ ಪರಿಶೀಲಿಸಿ ಮುಂದಿನ ಸ್ಕ್ರೀನ್​ನಲ್ಲಿ ಪ್ರದಶಿರ್ಸಲಾಗುತ್ತದೆ

ಆನ್​ಲೈನ್​ನಲ್ಲಿ ಪಾನ್​ ಮತ್ತು ಆಧಾರ್​ ಲಿಂಕ್​ ಮಾಡುವುದು ಹೇಗೆ ?

– I-T ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಿ (www.incometaxindiaefiling.gov.in)

-“ಕ್ವಿಕ್​ ಲಿಂಕ್ಸ್​’ ವಿಭಾಗದ ಅಡಿಯಲ್ಲಿ, “ಲಿಂಕ್​ ಆಧಾರ್​’ ಮೇಲೆ ಕ್ಲಿಕ್​ ಮಾಡಿ

– ಪ್ಯಾಪಾನ್​, ಆಧಾರ್​ ಸಂಖ್ಯೆ ಮತ್ತು ಇತರ ಅಗತ್ಯವಿರುವ ವಿವರಗಳನ್ನು ನಮೂದಿಸಿ

– ನಿಮ್ಮ ಆಧಾರ್​ ಕಾರ್ಡ್​ನಲ್ಲಿ ಹುಟ್ಟಿದ ವರ್ಷ ನಮೂದಿಸಿದ್ದರೆ ಮಾತ್ರ ಬಾಕ್ಸ್​ನಲ್ಲಿ ಟಿಕ್​ ಹಾಕಿ ಮತ್ತು ನಂತರ UIDAI ಯೊಂದಿಗೆ ನಿಮ್ಮ ಆಧಾರ್​ ವಿವರಗಳನ್ನು ಮೌಲ್ಯೀಕರಿಸಲು ಸಮ್ಮತಿಸಲು ಚೆಕ್​ ಬಾಕ್ಸ್​ ಕ್ಲಿಕ್​ ಮಾಡಿ

– ಪರದೆಯ ಮೇಲೆ ಕ್ಯಾಪ್ಚಾ ಕೋಡ್​ ಅನ್ನು ನಮೂದಿಸಿ- “ಲಿಂಕ್​ ಆಧಾರ್​’ ಟ್ಯಾಬ್​ ಮೇಲೆ ಕ್ಲಿಕ್​ ಮಾಡಿ.

ಎಸ್​ಎಂಎಸ್​ ಮೂಲಕ ಆನ್​ಲೈನ್​ನಲ್ಲಿ ಪ್ಯಾನ್​ ಮತ್ತು ಆಧಾರ್​ ಲಿಂಕ್​ ಮಾಡುವುದು ಹೇಗೆ ?

– 567678 ಅಥವಾ 56161 ರಲ್ಲಿ ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಸಂದೇಶವನ್ನು ಕಳುಹಿಸಿ, ಫಾರ್ಮ್ಯಾಟ್: UIDPAN <12-ಅಂಕಿಯ ಆಧಾರ್><10-ಅಂಕಿಯ PAN>

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...