ಸರ್ಕಾರದ ಆದೇಶದಂತೆ ಪ್ರತಿಯೊಬ್ಬ ಭಾರತೀಯ ನಾಗರಿಕರು ತಮ್ಮ ಎರಡು ಪ್ರಮುಖ ದಾಖಲೆಗಳಾದ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬೇಕಾಗುತ್ತದೆ.
ಪಾನ್ ಮತ್ತು ಆಧಾರ್ ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆಯು 2022 ರ ಮಾರ್ಚ್ 31ಕ್ಕೆಗಡುವು ಎಂದು ನಿಗದಿಪಡಿಸಿತ್ತು, ನಂತರ ಅದನ್ನು ವಿಸ್ತರಿಸಿತ್ತು. ಮಾರ್ಚ್ 29ರಂದು ಕೇಂದ್ರವು ಪಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಲು ಗಡುವನ್ನು 2023ರ ಮಾರ್ಚ್ 31ಕ್ಕೆ ವಿಸ್ತರಿಸಿದೆ. ಆದರೂ ಗಮನಿಸಬೇಕಾದ ಅಂಶವೊಂದಿದೆ.
2022ರ ಮಾರ್ಚ್ 31ರ ನಂತರ ಮತ್ತು ಜೂನ್ 30, 2022 ರೊಳಗೆ ಪಾನ್- ಆಧಾರ್ ಲಿಂಕ್ ಮಾಡುವವರು ರೂ.500 ದಂಡ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ನೇರ ತೆರಿಗೆಯ ಕೇಂದ್ರೀಯ ಮಂಡಳಿಯು ಸೂಚಿಸಿದೆ. ಆ ದಿನಾಂಕದ ನಂತರ ದಾಖಲೆಗಳನ್ನು ಲಿಂಕ್ ಮಾಡಿದರೆ 1,000 ರೂ. ದಂಡ ತೆರಬೇಕಾಗುತ್ತದೆ.
ಪಾನ್ ಆಧಾರ್ ಲಿಂಕ್ ಮಾಡದಿದ್ದರೆ ಏನಾಗುತ್ತದೆ? ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿರಬಹುದು. ಹೊಸ ಗಡುವಿನ ಮೊದಲು ಎರಡನ್ನು ಲಿಂಕ್ ಮಾಡಲು ವಿಫಲವಾದರೆ, ಪಾನ್ ನಿಷ್ಕ್ರಿಯವಾಗಬಹುದು. ಅಂತಹ ಸಂದರ್ಭದಲ್ಲಿ ಕಾಯ್ದೆಯಡಿಯಲ್ಲಿ ಅಂತಹ ವೈಫಲ್ಯಕ್ಕಾಗಿ ಕಾಯಿದೆಯ ಅಡಿಯಲ್ಲಿ ಎಲ್ಲಾ ಪರಿಣಾಮಗಳಿಗೆ ಜವಾಬ್ದಾರರಾಗಿರುತ್ತಾರೆ ಎಂದು ಎಚ್ಚರಿಸಲಾಗಿದೆ.
5300 ಪೌರಕಾರ್ಮಿಕರ ಹುದ್ದೆಗಳಿಗೆ ನೇಮಕಾತಿ
ಹಾಗೆಯೇ, ಪಾನ್-ಆಧಾರ್ ಲಿಂಕ್ ಮಾಡಲಾಗಿದೆಯೇ ಎಂದು ಪರಿಶೀಲಿಸುವುದು ಹೇಗೆ ?
– ಅಧಿಕೃತ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ: incometaxindiaefiling.gov.in/aadhaarstatus
– ನಿಮ್ಮ ಪ್ಯಾನ್ ಮತ್ತು ಆಧಾರ್ ವಿವರಗಳನ್ನು ನಮೂದಿಸಿ
– ‘View Link Aadhaar Status’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
– ಲಿಂಕ್ನ ಸ್ಥಿತಿ ಪರಿಶೀಲಿಸಿ ಮುಂದಿನ ಸ್ಕ್ರೀನ್ನಲ್ಲಿ ಪ್ರದಶಿರ್ಸಲಾಗುತ್ತದೆ
ಆನ್ಲೈನ್ನಲ್ಲಿ ಪಾನ್ ಮತ್ತು ಆಧಾರ್ ಲಿಂಕ್ ಮಾಡುವುದು ಹೇಗೆ ?
– I-T ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಿ (www.incometaxindiaefiling.gov.in)
-“ಕ್ವಿಕ್ ಲಿಂಕ್ಸ್’ ವಿಭಾಗದ ಅಡಿಯಲ್ಲಿ, “ಲಿಂಕ್ ಆಧಾರ್’ ಮೇಲೆ ಕ್ಲಿಕ್ ಮಾಡಿ
– ಪ್ಯಾಪಾನ್, ಆಧಾರ್ ಸಂಖ್ಯೆ ಮತ್ತು ಇತರ ಅಗತ್ಯವಿರುವ ವಿವರಗಳನ್ನು ನಮೂದಿಸಿ
– ನಿಮ್ಮ ಆಧಾರ್ ಕಾರ್ಡ್ನಲ್ಲಿ ಹುಟ್ಟಿದ ವರ್ಷ ನಮೂದಿಸಿದ್ದರೆ ಮಾತ್ರ ಬಾಕ್ಸ್ನಲ್ಲಿ ಟಿಕ್ ಹಾಕಿ ಮತ್ತು ನಂತರ UIDAI ಯೊಂದಿಗೆ ನಿಮ್ಮ ಆಧಾರ್ ವಿವರಗಳನ್ನು ಮೌಲ್ಯೀಕರಿಸಲು ಸಮ್ಮತಿಸಲು ಚೆಕ್ ಬಾಕ್ಸ್ ಕ್ಲಿಕ್ ಮಾಡಿ
– ಪರದೆಯ ಮೇಲೆ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ- “ಲಿಂಕ್ ಆಧಾರ್’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಎಸ್ಎಂಎಸ್ ಮೂಲಕ ಆನ್ಲೈನ್ನಲ್ಲಿ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವುದು ಹೇಗೆ ?
– 567678 ಅಥವಾ 56161 ರಲ್ಲಿ ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಸಂದೇಶವನ್ನು ಕಳುಹಿಸಿ, ಫಾರ್ಮ್ಯಾಟ್: UIDPAN <12-ಅಂಕಿಯ ಆಧಾರ್><10-ಅಂಕಿಯ PAN>