ಶಾಶ್ವತ ಖಾತೆ ಸಂಖ್ಯೆಗೆ ಆಧಾರ್ ಲಿಂಕಿಂಗ್ ಮಾಡಲು ಇರುವ ಡೆಡ್ಲೈನ್ ಅನ್ನು ಮಾರ್ಚ್ 31, 2022ಕ್ಕೆ ವಿಸ್ತರಿಸಲಾಗಿದೆ. ಈ ಡೆಡ್ಲೈನ್ ಒಳಗೆ ಆಧಾರ್ ಲಿಂಕಿಂಗ್ ಕಾಣದ ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದ್ದು, ಆ ನಂತರ ಲಿಂಕಿಂಗ್ ಮಾಡಲು 1,000 ರೂ. ವೆಚ್ಚ ತಗುಲಬಹುದು.
ಪಾನ್-ಆಧಾರ್ ಲಿಂಕಿಂಗ್ ಆಗದೇ ಇದ್ದಲ್ಲಿ ಮ್ಯೂಚುವಲ್ ಫಂಡ್ಗಳು, ಸ್ಟಾಕ್ಗಳ ಮೇಲೆ ಹೂಡಿಕೆ ಮಾಡಲು ಆಗುವುದಿಲ್ಲ ಜೊತೆಗೆ ಬ್ಯಾಂಕ್ ಖಾತೆ ತೆರೆಯಲು ಸಹ ಪಾನ್ ಕಾರ್ಡ್ ಬೇಕೇ ಬೇಕು.
ವೀಕೆಂಡ್ ಕರ್ಫ್ಯೂ, ಅರ್ಧ ಸಿಬ್ಬಂದಿ ಕೆಲಸ, ಸಮಾರಂಭಗಳಿಗೆ ನಿರ್ಬಂಧ, ಬೆಂಗಳೂರಲ್ಲಿ ಶಾಲೆಗಳಿಗೆ ರಜೆ ಸೇರಿ ಕೊರೋನಾ ತಡೆಗೆ ಹೊಸ ಮಾರ್ಗಸೂಚಿ
ಪಾನ್ ಮತ್ತು ಆಧಾರ್ ಕಾರ್ಡ್ ಲಿಂಕಿಂಗ್ ಮಾಡುವುದು ಹೀಗೆ:
1. www.incometax.gov.in ಪೋರ್ಟಲ್ಗೆ ಭೇಟಿ ಕೊಡಿ.
2. ಹೋಂ ಪೇಜ್ನಲ್ಲಿ ಡ್ರಾಪ್ಡೌನ್ ಮೆನು ಮೂಲಕ ‘Our Services’ ಆಯ್ಕೆ ಮಾಡಿ.
3. ಈಗ ನಿಮ್ಮ ವೈಯಕ್ತಿಕ ಮಾಹಿತಿಗಳಾದ ಪಾನ್ ಮತ್ತು ಆಧಾರ್ ಸಂಖ್ಯೆಗಳನ್ನು ಭರ್ತಿ ಮಾಡಿ, ಜೊತೆಗೆ ನಿಮ್ಮ ಹೆಸರು, ವಿಳಾಸ ಮತ್ತು ಫೋನ್ ಸಂಖ್ಯೆಗಳನ್ನು ನಮೂದಿಸಿ.
4. ಅಗತ್ಯವಿದ್ದಲ್ಲಿ, “I only have my year of birth on my Aadhaar card” ಆಯ್ಕೆ ಮಾಡಿ.
5. ನಿಮ್ಮ ಆಧಾರ್ ವಿವರಗಳನ್ನು ಸಿಂಧುಗೊಳಿಸಲು, “I agree to validate my Aadhaar details” ಎಂದು ಇರುವ ಬಾಕ್ಸ್ ಅನ್ನು ಚೆಕ್ ಮಾಡಿ. ಎಂಟರ್ ಕೀ ಒತ್ತುವ ಮೂಲಕ ಮುಂದುವರೆಯಿರಿ.
6. ನಿಮ್ಮ ನೋಂದಾಯಿತ ದೂರವಾಣಿ ಸಂಖ್ಯೆ ಮೂಲಕ, ನಿಮಗೆ ಆರು ಅಂಕಿಯ ಓಟಿಪಿ ಸಿಗುತ್ತದೆ. ಖಾತ್ರಿ ಪಡಿಸುವ ಪೇಜ್ನಲ್ಲಿ ಓಟಿಪಿ ಎಂಟರ್ ಮಾಡಿ.
ಇದೇ ವೇಳೆ, 2020-21ರ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಲು ಇರುವ ಡೆಡ್ಲೈನ್ ಅನ್ನು ಡಿಸೆಂಬರ್ 31, 2021ಕ್ಕೆ ಅಂತ್ಯಗೊಳಿಸಲಾಗಿದೆ. ಈ ಅವಧಿಯೊಳಗೆ 5.89 ಕೋಟಿಯಷ್ಟು ಆದಾಯ ತೆರಿಗೆ ರಿಟರ್ನ್ಗಳನ್ನು ಫೈಲ್ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.