ಪ್ಯಾಲಿಸ್ತೀನೀ ಭಯೋತ್ಪಾದಕ ರಾಫತ್ ಅಲ್-ಕಾರಾವಿ ಕಳೆದ 15 ವರ್ಷಗಳಿಂದ ಜೈಲಿನಲ್ಲಿದ್ದಾನೆ. ಆದರೂ ಸಹ ಈತ ಇದೇ ಕಾಲಘಟ್ಟದಲ್ಲಿ ನಾಲ್ಕು ಮಕ್ಕಳ ತಂದೆಯಾಗಿದ್ದಾನೆ ಎಂದು ಸುದ್ದಿವಾಹಿನಿಗಳು ತಿಳಿಸಿವೆ.
ಅಲ್-ಅಕ್ಸಾ ಮಾರ್ಟೈರ್ಸ್ ಬ್ರಿಗೇಡ್ ಎಂಬ ಭಯೋತ್ಪಾದಕ ಸಂಘಟನೆಯ ಸದಸ್ಯನಾದ ರಾಫತ್, ಇಸ್ರೇಲ್ ವಿರುದ್ಧ ಭಯೋತ್ಪಾದಕ ಸಂಚು ರೂಪಿಸಿದ್ದ ಆಪಾದನೆ ಮೇಲೆ 2006ರಲ್ಲಿ ಬಂಧಿಯಾಗಿದ್ದಾನೆ.
ತಿಹಾರ್ ಜೈಲಲ್ಲಿ ವಿಲಕ್ಷಣ ಪ್ರಸಂಗ: ಭಯದಿಂದ ಮೊಬೈಲ್ ಫೋನ್ ನುಂಗಿದ ಕೈದಿ…!
ಚಿಪ್ಸ್ ಒಂದರ ಪೊಟ್ಟಣದಲ್ಲಿ ತನ್ನ ವೀರ್ಯಾಣುಗಳನ್ನು ತುಂಬಿ ತನ್ನ ಮಡದಿಗೆ ಕಳುಹಿಸುತ್ತಿದ್ದಿದ್ದಾಗಿ ರಾಫತ್ ತಿಳಿಸಿದ್ದು, ತನ್ನ ಮಡದಿಯ ಮೊಟ್ಟೆಗೆ ಈ ವೀರ್ಯಾಣುಗಳನ್ನು ಫಲವತ್ತತೆಯ ಕ್ಲಿನಿಕ್‌ನಲ್ಲಿ ಕಸಿ ಮಾಡಲಾಗಿದೆ ಎಂದು ಹೇಳಿದ್ದಾರೆ. ತನ್ನಂತೆಯೇ ಜೈಲುಗಳಲ್ಲಿರುವ ಒಂದಷ್ಟು ಭಯೋತ್ಪಾದಕರು ತಮ್ಮ ವೀರ್ಯಾಣುಗಳನ್ನು ಜೈಲಿನಿಂದ ಆಚೆಗೆ ಕಳ್ಳಸಾಗಾಟ ಮಾಡುತ್ತಿದ್ದಾರೆ ಎಂದು ಈತ ಹೇಳಿಕೊಂಡಿದ್ದಾನೆ.
ಕಾರಾಗೃಹದ ಕ್ಯಾಂಟೀನ್‌ನಿಂದ ತಮ್ಮ ಕುಟುಂಬಗಳಿಗೆ ಬ್ಯಾಗುಗಳಲ್ಲಿ ವಸ್ತುಗಳನ್ನು ಕಳುಹಿಸುವ ಅವಕಾಶವಿದ್ದಿದ್ದರ ದುರ್ಬಳಕೆ ಮಾಡಿಕೊಂಡಿರುವ ವಿಚಾರವನ್ನು ಪ್ಯಾಲಿಸ್ತೀನಿಯನ್ ಮೀಡಿಯಾ ವಾಚ್‌ಗೆ ತಿಳಿಸಿದ ರಾಫತ್, “ಅದೊಂಥರಾ ಸೂಪರ್‌ಮಾರ್ಕೆಟ್‌ಗೆ ಹೋಗುವ ಅನುಭವ, ನೀವು ನಿಮ್ಮ ಕುಟುಂಬಕ್ಕೆ ಕ್ಯಾಂಡಿಗಳು, ಕುಕ್ಕೀಗಳು, ಜ್ಯೂಸ್, ಜೇನುತುಪ್ಪಗಳಂಥ ವಸ್ತುಗಳನ್ನು ಕಳುಹಿಸಬಹುದು” ಎಂದಿದ್ದಾನೆ.