ಹಸಿರು ಸೊಪ್ಪು ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಪಾಲಾಕ್ ಹೆಚ್ಚು ಕಬ್ಬಿಣದ ಅಂಶವನ್ನು ಹೊಂದಿದೆ. ಪಾಲಕ್ ಪನ್ನೀರ್ ತಿಂದು ಬೇಸರವಾದವರು ಪಾಲಕ್ ಪುರಿ ಮಾಡಿ ರುಚಿ ಸವಿಯಬಹುದು.
ಪಾಲಕ್ ಪುರಿಗೆ ಬೇಕಾಗುವ ಪದಾರ್ಥ :
2 ಕಪ್ ಗೋಧಿ ಹಿಟ್ಟು
ನೀರು
2 ಚಮಚ ತುಪ್ಪ
ರುಚಿಗೆ ತಕ್ಕಷ್ಟು ಉಪ್ಪು
ಕರಿಯಲು ಎಣ್ಣೆ
ಪಾಲಕ್ ಸೊಪ್ಪು
ಪಾಲಕ್ ಪುರಿ ಮಾಡುವ ವಿಧಾನ :
ಮೊದಲು ಪಾಲಕ್ ಸೊಪ್ಪುಗಳನ್ನು ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಗೋದಿ ಹಿಟ್ಟಿನೊಂದಿಗೆ ಮಿಶ್ರಣ ಮಾಡಿ. ಅದಕ್ಕೆ ಉಪ್ಪನ್ನು ಹಾಕಿ, ನೀರು, ತುಪ್ಪವನ್ನು ಹಾಕಿ ಪುರಿ ಹಿಟ್ಟಿಗೆ ಕಲಸಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ಹಿಟ್ಟನ್ನು ಪುರಿ ಆಕಾರದಲ್ಲಿ ಲಟ್ಟಿಸಿ, ಬಿಸಿ ಎಣ್ಣೆಯಲ್ಲಿ ಕರಿಯಿರಿ.