
ಆಪಲ್ ಕಂಪನಿಯ ಸ್ಥಾಪಕ ಸ್ಟೀವ್ ಜಾಬ್ಸ್‌ರ ವೈಯಕ್ತಿಕ ನೌಕೆಯ ವಿನ್ಯಾಸ ಮಾಡಿಕೊಟ್ಟಿದ್ದ ಫ್ರೆಂಚ್ ವಿನ್ಯಾಸಕ ಥಿಯೆರಿ ಗಗೇನ್ ಇದೀಗ ’ಜಿ-ಟ್ರೇನ್’ ಹೆಸರಿನಲ್ಲಿ ಖಾಸಗಿ ಐಷಾರಾಮಿ ರೈಲೊಂದನ್ನು ವಿನ್ಯಾಸ ಮಾಡಿದ್ದಾರೆ.
1,300 ಅಡಿ ಉದ್ದವಿರಲಿರುವ ಈ ರೈಲು 14 ಕಾರುಗಳನ್ನು ಹೊಂದಲಿದ್ದು, ಅತ್ಯಾಧುನಿಕವಾದ ಸ್ಮಾರ್ಟ್ ಗಾಜಿನ ಹೊರಮೈ ಹೊಂದಿರಲಿದೆ. ರೈಲಿನಲ್ಲಿ ಒಮ್ಮೆಲೆ 18 ಅತಿಥಿಗಳು ಪ್ರಯಾಣಿಸಬಹುದಾಗಿದ್ದು, ಗಂಟೆಗೆ 160 ಕಿಮೀ ವೇಗದಲ್ಲಿ ಚಲಿಸಲಿದೆ. ಅಮೆರಿಕ ಹಾಗೂ ಯೂರೋಪ್‌ನ ಹಳಿಗಳ ಮೇಲೆ ಈ ರೈಲು ಸಂಚರಿಸಬಲ್ಲುದಾಗಿದೆ.
ಬಂಪರ್ ಸ್ಯಾಲರಿ: ಇಬ್ಬರಿಗೆ 75 ಲಕ್ಷ ರೂ., 81 ವಿದ್ಯಾರ್ಥಿಗಳಿಗೆ 25 ಲಕ್ಷ ರೂ. ವೇತನದ ಉದ್ಯೋಗ
ಈ ಲಕ್ಸುರಿ ರೈಲಿನ ನಿರ್ಮಾಣಕ್ಕೆ 350 ದಶಲಕ್ಷ ಅಮೆರಿಕನ್ ಡಾಲರ್ ಖರ್ಚಾಗಲಿದೆ.
ಸಕಲ ಅತ್ಯಾಧುನಿಕ ಸವಲತ್ತುಗಳಲ್ಲದೇ, ಪುಟ್ಟದೊಂದು ಉದ್ಯಾನ, ಅಲ್‌ಫ್ರೆಸ್ಕೋ ಟೆರೇಸ್‌ಗಳಂಥ ವಿಶಿಷ್ಟ ಫೀಚರ್‌ಗಳನ್ನು ಈ ರೈಲು ಹೊಂದಿರಲಿದೆ.


