alex Certify ಮೂರೇ ವರ್ಷದಲ್ಲಿ ಇಮ್ರಾನ್ ಸರ್ಕಾರದಿಂದ 149 ಲಕ್ಷ ಕೋಟಿ ರೂ. ಸಾಲ…! ಅಧೋಗತಿಗೆ ಇಳಿದ ಪಾಕಿಸ್ತಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂರೇ ವರ್ಷದಲ್ಲಿ ಇಮ್ರಾನ್ ಸರ್ಕಾರದಿಂದ 149 ಲಕ್ಷ ಕೋಟಿ ರೂ. ಸಾಲ…! ಅಧೋಗತಿಗೆ ಇಳಿದ ಪಾಕಿಸ್ತಾನ

ಇಸ್ಲಾಮಾಬಾದ್: ಅಧ್ಯಕ್ಷರ ಕಚೇರಿಯ ದಿನನಿತ್ಯದ ಖರ್ಚುವೆಚ್ಚಕ್ಕಾಗಿ ಎಮ್ಮೆಗಳು, ಕಾರುಗಳನ್ನು ಮಾರಿಕೊಳ್ಳುತ್ತಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ದುಃಸ್ಥಿತಿ ಹೇಳತೀರದು.

ಪ್ರಧಾನಿಯಾಗಿ ದೇಶವನ್ನು ಮುನ್ನಡೆಸುವ ಬದಲು, ಸರ್ಕಾರದ ಆಡಳಿತ ಯಂತ್ರ ನಡೆಸುವುದೇ ಅವರಿಗೆ ದೊಡ್ಡ ಸವಾಲಾಗಿದೆ. ಅದಕ್ಕಾಗಿ ಬೇರೆ ದಾರಿಯೇ ಕಾಣದೇ ಸಾಲದ ಕೂಪಕ್ಕೆ ಪಾಕಿಸ್ತಾನವನ್ನು ದೂಡುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಇಮ್ರಾನ್ ಖಾನ್ ಆಡಳಿತದ ಪಾಕ್ ಮೇಲೆ ಹೊರಿಸಿರುವ ಸಾಲದ ಮೊತ್ತ ಬರೋಬ್ಬರು 149 ಲಕ್ಷ ಕೋಟಿ ರೂ.!

ಹಿಂದಿನ ಸರ್ಕಾರಗಳ ದುರಾಡಳಿತ, ಆರ್ಥಿಕ ಮುಗ್ಗಟ್ಟು, ಉಗ್ರರ ಪೋಷಣೆಗೆ ವಿದೇಶಿ ರಾಷ್ಟ್ರಗಳಿಂದ ಕೋಟಿಗಟ್ಟಲೆ ಸಾಲ ಪಡೆಯುವ ಚಾಳಿಗಳಿಂದ ಹೊರಬರದ ಪಾಕಿಸ್ತಾನ ಕೆಲವೇ ವರ್ಷಗಳಲ್ಲಿ ‘ದಿವಾಳಿ ರಾಷ್ಟ್ರ’ ಆಗಲಿದೆ ಎಂಬ ಆತಂಕವನ್ನು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ವ್ಯಕ್ತಪಡಿಸಿದೆ.

ಹೈಜಂಪ್ ನಲ್ಲಿ ಚಿನ್ನ ಗೆದ್ದ ಸ್ಯಾಮ್ ಗ್ರೀವ್ ಗೆ ಪಂದ್ಯಕ್ಕೂ ಮುನ್ನ ತಲುಪಿತ್ತು ʼಹೃದಯಸ್ಪರ್ಶಿʼ ಪತ್ರ

ಪಾಕಿಸ್ತಾನವು ಅಧಿಕೃತವಾಗಿ ತನ್ನ ಮೇಲೆ ಹೇರಿಕೊಂಡು ದಾಖಲೆಗಳಲ್ಲಿ ತೋರಿಸಿರುವ ಸಾಲದ ಮೊತ್ತ ಸುಮಾರು 400 ಲಕ್ಷ ಕೋಟಿ ರೂ.! ಹೌದು, ಆ ಪೈಕಿ ಶೇ. 80 ರಷ್ಟು ಸಾಲವನ್ನು ಕಳೆದ 10 ವರ್ಷಗಳಲ್ಲಿ ನವಾಜ್ ಷರೀಫ್ ಮತ್ತು ಇಮ್ರಾನ್ ಖಾನ್ ಆಡಳಿತದಲ್ಲಿ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...