ಕರಾಚಿ: ಪಾಕಿಸ್ತಾನಿ ಹುಡುಗಿ ಆಯೇಷಾ ಬಾಲಿವುಡ್ ಹಾಡಿಗೆ ನರ್ತಿಸಿರುವುದು ಭಾರಿ ವೈರಲ್ ಆಗಿದ್ದು, ಈಕೆ ಭಾರಿ ಸುದ್ದಿಯಲ್ಲಿಯೂ ಇದ್ದಾಳೆ. ಲಾಹೋರ್ನ 18 ವರ್ಷದ ಆಯೇಷಾಳ ನೃತ್ಯ ಎಲ್ಲೆಡೆ ಹರಿದಾಡುತ್ತಿರುವ ನಡುವೆಯೇ ಈಕೆ ನೃತ್ಯ ಮಾಡಿದ ಹಾಡಿಗೆ ಭಾರಿ ಬೇಡಿಕೆಯೂ ಬಂದುಬಿಟ್ಟಿದೆ.
ಆಯೇಷಾ ಲತಾ ಮಂಗೇಶ್ಕರ್ ಅವರ ಸೂಪರ್ ಹಿಟ್ ಹಾಡು ‘ಮೇರಾ ದಿಲ್ ಯೆ ಪುಕರೆ’ ಹಾಡಿಗೆ ನೃತ್ಯ ಮಾಡಿದ್ದಳು. ಇದು ಭಾರತ ಮಾತ್ರವಲ್ಲ, ಬೇರೆ ಬೇರೆ ದೇಶಗಳ ನೃತ್ಯಪ್ರಿಯರನ್ನೂ ಸೆಳೆದಿದೆ. ಇದೀಗ ಅದೇ ರೀಮಿಕ್ಸ್ ಆವೃತ್ತಿಗೆ ಹಲವರು ಹೆಜ್ಜೆ ಹಾಕುತ್ತಿದ್ದು, ಫ್ರಾನ್ಸ್‌ನ ಪುಟ್ಟ ಹುಡುಗಿ ಈ ಹಾಡಿಗೆ ತನ್ನ ಅಭಿನಯದ ಮೂಲಕ ಹೃದಯವನ್ನು ಗೆದ್ದಿದ್ದಾಳೆ.
ಪುಟ್ಟ ಬಾಲಕಿ ರೇನಾ ಮಾಡಿದ ನೃತ್ಯದ ವಿಡಿಯೋವನ್ನು ಖುದ್ದು ಆಯೇಷಾ ತನ್ನ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾಳೆ. ಫ್ರಾನ್ಸ್‌ನ ಬೀದಿಗಳಲ್ಲಿ ಮೇರಾ ದಿಲ್ ಯೇ ಪುಕಾರೆಗೆ ನೃತ್ಯ ಮಾಡುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಬಾಲಕಿ, ಆಯೇಷಾಳ ಹೆಜ್ಜೆಗಳನ್ನು ಅನುಕರಿಸಲು ಪ್ರಯತ್ನಿಸಿರುತ್ತಿರುವುದನ್ನು ನೋಡಬಹುದು.