
ಈ ವಿಡಿಯೋವನ್ನ ಪತ್ರಕರ್ತೆ ನೈಲಾ ಇನಾಯತ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ರಾಸುಗಳ ಜೊತೆ ಹಫೀಜ್ ಸಂದರ್ಶನವೇ ಇಲ್ಲ ಅಂದರೆ ಬಕ್ರೀದ್ ಹಬ್ಬಕ್ಕೆ ಕಳೆ ಇಲ್ಲ ಎಂದು ಅವರು ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. 28 ಸೆಕೆಂಡ್ಗಳ ವಿಡಿಯೋದಲ್ಲಿ ಹಫೀಜ್ ಈದ್ ಹಬ್ಬದ ವಿಚಾರವಾಗಿ ಎಮ್ಮೆಗೆ ಕೆಲ ಪ್ರಶ್ನೆಗಳನ್ನ ಕೇಳಿದ್ದಾರೆ.
ಲಾಹೋರ್ಗೆ ಬಂದು ನಿಮಗೆ ಹೇಗೆ ಎನಿಸುತ್ತಿದೆ..? ಎಂದು ಎಮ್ಮೆಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಎಮ್ಮೆ ತನ್ನ ಸಾಮಾನ್ಯ ದನಿಯಲ್ಲಿ ಕೂಗಿದೆ. ಇದಕ್ಕೆ ಸಖತ್ ಖುಷಿಯಾದಂತೆ ವರ್ತಿಸಿದ ಹಫೀಜ್ ಓಹ್, ನಿಮಗೆ ಲಾಹೋರ್ ಇಷ್ಟವಾಗಿದ್ಯೋ ಎಂದು ಹೇಳಿದ್ದಾರೆ.
ಇದಾದ ಬಳಿಕ ಲಾಹೋರ್ನ ಆಹಾರ ಇಷ್ಟವಾಗುತ್ತದೆಯೋ ಅಥವಾ ನಿಮ್ಮ ಹಳೆಯ ಆಹಾರ ಹೆಚ್ಚು ಇಷ್ಟ ಎನಿಸುತ್ತದೆಯೋ ಎಂದು ಕೇಳಿದ್ದಾರೆ. ಇದಕ್ಕೆ ಎಮ್ಮೆ ಮತ್ತೆ ಕೂಗುತ್ತಿದ್ದಂತೆಯೇ, ಲಾಹೋರ್ನಲ್ಲಿ ಆಹಾರ ಚೆನ್ನಾಗಿ ಸಿಗುತ್ತೆ ಎಂದು ಎಲ್ಲರೂ ಹೇಳುತ್ತಾರೆ ಎಂದು ಹಫೀಜ್ ಹೇಳಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.