alex Certify ʼಎಮ್ಮೆʼ ಸಂದರ್ಶನ ನಡೆಸಿದ ಪತ್ರಕರ್ತ: ವಿಡಿಯೋ ವೈರಲ್​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಎಮ್ಮೆʼ ಸಂದರ್ಶನ ನಡೆಸಿದ ಪತ್ರಕರ್ತ: ವಿಡಿಯೋ ವೈರಲ್​….!

ಎಮ್ಮೆಗಳ ಜೊತೆ ಸಂದರ್ಶನ ನಡೆಸುವ ಮೂಲಕವೇ ಸೋಶಿಯಲ್​ ಮೀಡಿಯಾದಲ್ಲಿ ಸದ್ದು ಮಾಡುವ ಪಾಕಿಸ್ತಾನಿ ಪತ್ರಕರ್ತ ಕೆಲವೊಮ್ಮೆ ಕತ್ತೆಯ ಮೇಲೆ ರಾಜನ ವೇಷ ಧರಿಸಿ ಕೂತು ಸಹ ವರದಿ ನೀಡುವ ಮೂಲಕ ನೆಟ್ಟಿಗರು ಹೊಟ್ಟೆ ಹುಣ್ಣಾಗುವಷ್ಟು ನಗುವಂತೆ ಮಾಡುತ್ತಾರೆ. ಇದೇ ಹಫೀಜ್​ ಬಕ್ರೀದ್​ ಹಬ್ಬದ ಪ್ರಯುಕ್ತ ಇನ್ನೊಂದು ಎಮ್ಮೆಯನ್ನ ಸಂದರ್ಶನ ಮಾಡಿದ್ದಾರೆ.

ಈ ವಿಡಿಯೋವನ್ನ ಪತ್ರಕರ್ತೆ ನೈಲಾ ಇನಾಯತ್​ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ರಾಸುಗಳ ಜೊತೆ ಹಫೀಜ್​ ಸಂದರ್ಶನವೇ ಇಲ್ಲ ಅಂದರೆ ಬಕ್ರೀದ್​ ಹಬ್ಬಕ್ಕೆ ಕಳೆ ಇಲ್ಲ ಎಂದು ಅವರು ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. 28 ಸೆಕೆಂಡ್​ಗಳ ವಿಡಿಯೋದಲ್ಲಿ ಹಫೀಜ್​ ಈದ್​ ಹಬ್ಬದ ವಿಚಾರವಾಗಿ ಎಮ್ಮೆಗೆ ಕೆಲ ಪ್ರಶ್ನೆಗಳನ್ನ ಕೇಳಿದ್ದಾರೆ.

ಲಾಹೋರ್​ಗೆ ಬಂದು ನಿಮಗೆ ಹೇಗೆ ಎನಿಸುತ್ತಿದೆ..? ಎಂದು ಎಮ್ಮೆಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಎಮ್ಮೆ ತನ್ನ ಸಾಮಾನ್ಯ ದನಿಯಲ್ಲಿ ಕೂಗಿದೆ. ಇದಕ್ಕೆ ಸಖತ್​ ಖುಷಿಯಾದಂತೆ ವರ್ತಿಸಿದ ಹಫೀಜ್​ ಓಹ್​, ನಿಮಗೆ ಲಾಹೋರ್ ಇಷ್ಟವಾಗಿದ್ಯೋ ಎಂದು ಹೇಳಿದ್ದಾರೆ.

ಇದಾದ ಬಳಿಕ ಲಾಹೋರ್​ನ ಆಹಾರ ಇಷ್ಟವಾಗುತ್ತದೆಯೋ ಅಥವಾ ನಿಮ್ಮ ಹಳೆಯ ಆಹಾರ ಹೆಚ್ಚು ಇಷ್ಟ ಎನಿಸುತ್ತದೆಯೋ ಎಂದು ಕೇಳಿದ್ದಾರೆ. ಇದಕ್ಕೆ ಎಮ್ಮೆ ಮತ್ತೆ ಕೂಗುತ್ತಿದ್ದಂತೆಯೇ, ಲಾಹೋರ್​​ನಲ್ಲಿ ಆಹಾರ ಚೆನ್ನಾಗಿ ಸಿಗುತ್ತೆ ಎಂದು ಎಲ್ಲರೂ ಹೇಳುತ್ತಾರೆ ಎಂದು ಹಫೀಜ್​ ಹೇಳಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

— Naila Inayat (@nailainayat) July 21, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...