
ಪಾಕಿಸ್ತಾನದ ಅತಿ ಸಿರಿವಂತರಲ್ಲಿ ಸಿಂಹಗಳಂಥ ಕಾಡುಪ್ರಾಣಿಗಳನ್ನು ಸಾಕುವ ಶೋಕಿ ಬಲು ಸಾಮಾನ್ಯ. ಸಿಂಹಗಳನ್ನೇ ಪಳಗಿಸಿದ ತಮ್ಮ ’ಶೌರ್ಯ’ವನ್ನು ಪ್ರದರ್ಶಿಸಿಕೊಳ್ಳುವುದು ಅಂಥ ಮಂದಿಯ ಹುಚ್ಚು.
ಇಂಥದ್ದೇ ಘಟನೆಯೊಂದರಲ್ಲಿ ಲಾಹೋರ್‌ನ ಇನ್‌ಫ್ಲುಯೆನ್ಸರ್ ಒಬ್ಬರು ಪಾರ್ಟಿ ಹಮ್ಮಿಕೊಂಡಿದ್ದ ವೇಳೆ ತಾವು ಸಾಕಿದ ಸಿಂಹಿಣಿಯೊಂದನ್ನು ಕರೆತಂದು ಶೋಕಿ ತೋರಿಸಿಕೊಂಡು ಭಾರೀ ಟೀಕೆಗೆ ಗ್ರಾಸವಾಗಿದ್ದಾರೆ.
ಮಳೆಗಾಲದಲ್ಲಿ ಮುಖ ಹೊಳೆಯುವಂತೆ ಮಾಡುವುದು ಹೇಗೆ ಗೊತ್ತಾ….?
ಸಿಂಹವನ್ನು ಸರಪಳಿ ಹಾಕಿ ಕೌಚ್ ಮೇಲೆ ಕೂರಿಸಲಾಗಿದ್ದು, ಆಕೆಯ ಸುತ್ತಲೂ ಭದ್ರತಾ ಸಿಬ್ಬಂದಿ ಇರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಪ್ರಾಣಿ ದಯಾ ಸಂಘಟನೆಗಳು ಈ ವಿಡಿಯೋವನ್ನು ಶೇರ್ ಮಾಡಿಕೊಂಡ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
@susankhanofficial ಎಂಬಾಕೆ ತನ್ನ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಯೋಜಿಸಿದ್ದು, ಆ ವೇಳೆ ಪ್ರಾಣಿಗಳನ್ನು ಟ್ರೀಟ್ ಮಾಡುವ ಈಕೆಯ ಪರಿ ಭಾರೀ ಟೀಕೆಗೆ ಗುರಿಯಾಗಿದೆ.
https://www.instagram.com/p/CQWKvHPBmdl/?utm_source=ig_web_copy_link
https://www.instagram.com/p/CQWzJq7h4QZ/?utm_source=ig_web_copy_link