alex Certify ಮದುವೆ ಮನೆಯಲ್ಲಿ ನೃತ್ಯದ ಕಿಚ್ಚು ಹಚ್ಚಿದ ವಧುವಿನ ತಂಗಿ: ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಮನೆಯಲ್ಲಿ ನೃತ್ಯದ ಕಿಚ್ಚು ಹಚ್ಚಿದ ವಧುವಿನ ತಂಗಿ: ನೆಟ್ಟಿಗರು ಫಿದಾ

ಇತ್ತೀಚಿನ ದಿನಗಳಲ್ಲಿ, ಸಂಗೀತ, ನೃತ್ಯಗಳು ಇಲ್ಲದ ಮದುವೆಗಳು ಅಪೂರ್ಣ ಎಂದೇ ಹೇಳಬಹುದು. ಅಂಥ ವಿಶಿಷ್ಟ ಮದುವೆಗಳ ಕೆಲವು ಕುತೂಹಲಕಾರಿ ವಿಡಿಯೋಗಳು ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದ್ದು, ಜನರು ವ್ಹಾರೆವ್ಹಾ ಎನ್ನುತ್ತಿದ್ದಾರೆ.
ವೈರಲ್ ವಿಡಿಯೋದಲ್ಲಿ, ಪಾಕಿಸ್ತಾನಿ ಹುಡುಗಿಯೊಬ್ಬಳು ತನ್ನ ಸಹೋದರಿಯ ಮದುವೆಯಲ್ಲಿ ಅಂಗ್ ಲಗಾ ದೆಗೆ ನೃತ್ಯ ಮಾಡುವುದನ್ನು ಕಾಣಬಹುದು. ಈ ಅಭಿನಯಕ್ಕೆ ಜನರು ಫಿದಾ ಆಗಿದ್ದಾರೆ.

ಇದೀಗ ವೈರಲ್ ಆಗಿರುವ ವಿಡಿಯೋವನ್ನು ನಟಾಲಿಯಾ ಕಾಲಿಂಗ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕಿರು ವಿಡಿಯೋದಲ್ಲಿ, ನಟಾಲಿಯಾ ಅವರ ತಂಗಿ ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾದಿಂದ ಜನಪ್ರಿಯ ಟ್ರ್ಯಾಕ್‌ಗೆ ಪ್ರದರ್ಶನ ನೀಡುವುದನ್ನು ಕಾಣಬಹುದು. ಈಕೆ ಸುಂದರವಾದ ಲೆಹೆಂಗಾವನ್ನು ಧರಿಸಿ ಅಷ್ಟೇ ಸುಂದರವಾಗಿ ನೃತ್ಯ ಮಾಡಿ ಎಲ್ಲರನ್ನೂ ಮೋಡಿ ಮಾಡಿದ್ದಾಳೆ. ಜನರು ಈಕೆಯ ನೃತ್ಯಕ್ಕೆ ಮನ ಸೋತಿದ್ದು, ಅದ್ಭುತ ನೃತ್ಯ ಎಂದು ಶ್ಲಾಘಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...