
ಮದುವೆ ಮೆರವಣಿಗೆಯಲ್ಲಿ ಕಾರಿನ ಬದಲು ಜೆಸಿಬಿಯಲ್ಲಿ ತೆರಳಿದ ಪಾಕಿಸ್ತಾನದ ನವದಂಪತಿ ಜೋಡಿಯೊಂದರ ವಿಡಿಯೋ ನೆಟ್ಟಿಗರಲ್ಲಿ ಹೊಸ ಕ್ರೇಜ಼್ ಸೃಷ್ಟಿಸಿದೆ.
ಹೌದು, ಮದುವೆಯ ದಿನದಂದು ಮದುವೆ ಮನೆ ತಲುಪಲು ಈ ಜೋಡಿ ಜೆಸಿಬಿಯನ್ನು ಆಯ್ದುಕೊಂಡಿದೆ. ಮದುವೆಯ ವೇಳೆ ಸಾಧ್ಯವಾದಷ್ಟು ಗ್ರಾಂಡ್ ಆಗಿಯೇ ಎಲ್ಲವನ್ನೂ ಮಾಡುವ ಮದುಮಕ್ಕಳ ನಡುವೆ ಈ ನವದಂಪತಿ ಹೀಗೊಂದು ಸಿಂಪಲ್ ಸೆಲೆಬ್ರೇಷನ್‌ಗೆ ಮುಂದಾಗಿದೆ.
ಬೆಳ್ಳಗಾಗಲು ಸಹಕಾರಿ ಕೊತ್ತಂಬರಿ ಸೊಪ್ಪಿನ ʼಫೇಸ್ ಪ್ಯಾಕ್ʼ
40 ಸೆಕೆಂಡ್‌ಗಳ ಈ ವಿಡಿಯೋ ಹುಂಜ಼ಾ ಕಣಿವೆಯಲ್ಲಿ ಸೆರೆ ಹಿಡಿಯಲಾಗಿದ್ದು, ಹೂವುಗಳಿಂದ ಸಿಂಗರಿಸಲ್ಪಟ್ಟ ಜೆಸಿಬಿಯಲ್ಲಿ ನವದಂಪತಿ ಸವಾರಿ ಮಾಡುವ ವಿಡಿಯೋ ವೈರಲ್ ಆಗಿದೆ.