ಕೋವಿಡ್-19 ಲಸಿಕೆ ಪಡೆಯಲು ನಿರಾಕರಿಸುವ ಮಂದಿಯ ಮೊಬೈಲ್ ಫೋನ್‌ಗಳನ್ನು ಬ್ಲಾಕ್ ಮಾಡುವುದಾಗಿ ಪಾಕಿಸ್ತಾನದ ಪ್ರಾಂತ್ಯವೊಂದರ ಸರ್ಕಾರ ಸುತ್ತೋಲೆ ಹೊರಡಿಸಿದೆ.
22 ಕೋಟಿ ಜನಸಂಖ್ಯೆಯ ಈ ದೇಶದ ಬಹಳ ಸಣ್ಣ ಭಾಗದಷ್ಟು ಜನರು ಮಾತ್ರವೇ ಲಸಿಕೆ ಪಡೆದಿದ್ದು, ಸ್ಥಳೀಯ ಸರ್ಕಾರಗಳು ಲಸಿಕಾ ಕಾರ್ಯಕ್ರಮಗಳಿಗೆ ಚುರುಕು ನೀಡಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿವೆ. ಲಸಿಕೆ ಪಡೆಯದ ನಾಗರಿಕ ಸೇವೆಗಳ ಅಧಿಕಾರಿಗಳಿಗೆ ಜುಲೈನಿಂದ ಸಂಬಳ ಕೊಡುವುದಿಲ್ಲ ಎಂದು ಸಿಂಧ್ ಪ್ರಾಂತೀಯ ಸರ್ಕಾರ ತಿಳಿಸಿದೆ.
ಪಾಕಿಸ್ತಾನದ ಅತ್ಯಂತ ಹೆಚ್ಚು ಜನಸಂಖ್ಯೆ ಇರುವ ರಾಜ್ಯವಾದ ಪಂಜಾಬ್‌ನಲ್ಲಿ ಲಸಿಕೆಗಳಿಗೆ ಬೇಡಿಕೆಯೇ ಇಲ್ಲವಾಗಿದೆ.
ಮೈ ಝುಂ ಎನಿಸುತ್ತೆ ಚಲಿಸುತ್ತಿರುವ ರೈಲಿನೆದುರು ಈತ ಮಾಡಿದ ಕೃತ್ಯ
“ಮೊದಲಿಗೆ ಫೋನ್‌ಗಳನ್ನು ಬ್ಲಾಕ್ ಮಾಡುವುದು ಕೇವಲ ಪ್ರಸ್ತಾವನೆಯಾಗಿತ್ತು. ಆದರೆ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುವುದು ಹೆಚ್ಚಾಗುತ್ತಿರುವ ಕಾರಣ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ” ಎಂದು ಪಂಜಾಬ್‌ನ ಪ್ರಾಥಮಿಕ ಆರೋಗ್ಯ ಇಲಾಖೆಯ ವಕ್ತಾರ ಹಮ್ಮದ್ ರಾಜಾ ತಿಳಿಸಿದ್ದಾರೆ. ಈ ಕ್ರಮವನ್ನು ಹೇಗೆ ಅನುಷ್ಠಾನಕ್ಕೆ ತರಬೇಕೆಂದು ಟೆಲಿಕಾಂ ಏಜೆನ್ಸಿ ನಿರ್ಧರಿಸಲಿದೆ ಎಂದು ರಾಜಾ ತಿಳಿಸಿದ್ದಾರೆ.
ಕೊರೋನಾ 3 ನೇ ಅಲೆ ತಡೆಗೆ ಸರ್ಕಾರದಿಂದ ಮಹತ್ವದ ಕ್ರಮ: ಸಿಎಂ ಯಡಿಯೂರಪ್ಪ ಮಾಹಿತಿ
ಸದ್ಯಕ್ಕೆ ಪ್ರತಿನಿತ್ಯ ಎರಡು ಲಕ್ಷ ಮಂದಿಗೆ ಲಸಿಕೆ ಹಾಕಲಾಗುತ್ತಿದೆಯಾದರೂ, ಭಾರೀ ಜನಸಂಖ್ಯೆಯ ಪಾಕಿಸ್ತಾನಕ್ಕೆ ಈ ದರವು ತೀರಾ ಕಡಿಮೆಯಾಗಿದೆ. ಚೀನಾದಿಂದ ಲಸಿಕೆಗಳನ್ನು ತರಿಸಿಕೊಳ್ಳುತ್ತಿರುವ ಪಾಕ್‌ನಲ್ಲಿ ಇದುವರೆಗೂ 10.5 ಮಿಲಿಯನ್ ಡೋಸ್‌ಗಳನ್ನು ಕೊಡಲಾಗಿದೆ.
ಲಸಿಕೆ ಪಡೆಯುವುದರಿಂದ ಪುರುಷತ್ವ ಕಳೆದುಹೋಗುವುದು ಸೇರಿದಂತೆ ಅನೇಕ ರೀತಿಯ ಅಡ್ಡಪರಿಣಾಮಗಳು ಇವೆ ಎಂಬ ಗುಮಾನಿಗಳು ಜೋರಾಗುತ್ತಿರುವುದು ಜನರಲ್ಲಿ ಕೋವಿಡ್ ಲಸಿಕೆ ಬಗ್ಗೆ ಸಾಕಷ್ಟು ಭೀತಿ ಮೂಡಿಸಿದೆ.