alex Certify ಪಾಕ್​ ಸಂದರ್ಶನ ಕಾರ್ಯಕ್ರಮದಲ್ಲಿ ನಡೀತು ಫೈಟ್ : ವೈರಲ್ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕ್​ ಸಂದರ್ಶನ ಕಾರ್ಯಕ್ರಮದಲ್ಲಿ ನಡೀತು ಫೈಟ್ : ವೈರಲ್ ಆಯ್ತು ವಿಡಿಯೋ

ಪಾಕಿಸ್ತಾನದ ಟಿವಿ ಸಂದರ್ಶನ ಕಾರ್ಯಕ್ರಮಗಳಲ್ಲಿ ನಡೆಯುವ ಕೆಲವು ಘಟನೆಗಳು ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತದೆ. ಇದು ಎಷ್ಟರ ಮಟ್ಟಿಗೆ ಫನ್ನಿಯಾಗಿರುತ್ತೆ ಅಂದ್ರೆ ಅಲ್ಲೊಂದು ಗಂಭೀರವಾದ ಚರ್ಚೆ ನಡೆಯುತ್ತಿತ್ತು ಅನ್ನೋದೇ ವೀಕ್ಷಕರಿಗೆ ಮರೆತು ಹೋಗ್ಬಿಡುತ್ತದೆ. ‌

ಇದೀಗ ಇಂತಹದ್ದೇ ಒಂದು ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಟಿವಿ ಸಂದರ್ಶನ ಕಾರ್ಯಕ್ರಮಕ್ಕೆ ಬಂದಿದ್ದ ಇಬ್ಬರು ಅತಿಥಿಗಳ ನಡುವೆ ವಾದ ವಿವಾದ ತಾರಕಕ್ಕೇರಿದ್ದು ಇಬ್ಬರೂ ಹೊಯ್​ ಕೈ ಮಾಡಿಕೊಂಡಿದ್ದಾರೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ಒಬ್ಬರನ್ನೊಬ್ಬರು ನಿಂದಿಸಿಕೊಂಡಿದ್ದಾರೆ.

ಪಾಕಿಸ್ತಾನ ಮುಸ್ಲಿಂ ಲೀಗ್​ ನವಾಜ್​ ಬಣವನ್ನು ಪ್ರತಿನಿಧಿಸುವ ಸೆನೆಟರ್​ ಅಫ್ನಾನ್​ ಉಲ್ಲಾ ಖಾನ್​ ಹಾಗೂ ಪಾಕಿಸ್ತಾನ್​ ತೆಹ್ರೀಕ್​ ಇ ಇನ್ಸಾಫ್​​ಗೆ ಸೇರಿರುವ ಶೇರ್​ ಅಫ್ಜಲ್​​ ಖಾನ್ ಮರ್ವಾತ್​​​ ನಡುವೆ ಪರಸ್ಪರ ಜಟಾಪಟಿ ಏರ್ಪಟ್ಟಿದೆ. ಜಾವೇದ್​​ ಚೌಧರಿ ಅವರ ಎಕ್ಸ್​ಪ್ರೆಸ್​ ಟಾಕ್​ ಶೋ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.

ಕಾರ್ಯಕ್ರಮವು ಪ್ರಸಾರವಾಗುತ್ತಿದ್ದಾಗಲೇ ಪಾಕ್​​​ನ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ರನ್ನು ಅಫ್ನಾನ್​​ ಉಲ್ಲ ನಿಂದಿಸಿದ್ದರು. ಇದು ಜಾವೇದ್​ ಚೌಧರಿ ಕೆಂಗಣ್ಣಿಗೆ ಗುರಿಯಾಗಿತ್ತು ಎನ್ನಲಾಗಿದೆ. ಕೋಪದ ಭರದಲ್ಲಿ ಅಫ್ನಾನ್​ ಉಲ್ಲಾ ಖಾನ್​ಗೆ ಜಾವೇದ್ ಚೌಧರಿ ಕಪಾಳ ಮೋಕ್ಷ ಮಾಡಿದ್ದಾರೆ. ಸಿಬ್ಬಂದಿ ಮಧ್ಯಪ್ರವೇಶ ಮಾಡುವವರೆಗೂ ಅವರಿಗೆ ಥಳಿಸಿದ್ದಾರೆ ಎನ್ನಲಾಗಿದೆ. ಈ ವಿಡಿಯೋವನ್ನು ಪತ್ರಕರ್ತ ರಬೀಂದರ್​ ಸಿಂಗ್​ ರಾಬಿನ್​ ಶೇರ್​ ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...