
ಪಾಕಿಸ್ತಾನದ ಟಿವಿ ಸಂದರ್ಶನ ಕಾರ್ಯಕ್ರಮಗಳಲ್ಲಿ ನಡೆಯುವ ಕೆಲವು ಘಟನೆಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತದೆ. ಇದು ಎಷ್ಟರ ಮಟ್ಟಿಗೆ ಫನ್ನಿಯಾಗಿರುತ್ತೆ ಅಂದ್ರೆ ಅಲ್ಲೊಂದು ಗಂಭೀರವಾದ ಚರ್ಚೆ ನಡೆಯುತ್ತಿತ್ತು ಅನ್ನೋದೇ ವೀಕ್ಷಕರಿಗೆ ಮರೆತು ಹೋಗ್ಬಿಡುತ್ತದೆ.
ಇದೀಗ ಇಂತಹದ್ದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಟಿವಿ ಸಂದರ್ಶನ ಕಾರ್ಯಕ್ರಮಕ್ಕೆ ಬಂದಿದ್ದ ಇಬ್ಬರು ಅತಿಥಿಗಳ ನಡುವೆ ವಾದ ವಿವಾದ ತಾರಕಕ್ಕೇರಿದ್ದು ಇಬ್ಬರೂ ಹೊಯ್ ಕೈ ಮಾಡಿಕೊಂಡಿದ್ದಾರೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ಒಬ್ಬರನ್ನೊಬ್ಬರು ನಿಂದಿಸಿಕೊಂಡಿದ್ದಾರೆ.
ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ ಬಣವನ್ನು ಪ್ರತಿನಿಧಿಸುವ ಸೆನೆಟರ್ ಅಫ್ನಾನ್ ಉಲ್ಲಾ ಖಾನ್ ಹಾಗೂ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ಗೆ ಸೇರಿರುವ ಶೇರ್ ಅಫ್ಜಲ್ ಖಾನ್ ಮರ್ವಾತ್ ನಡುವೆ ಪರಸ್ಪರ ಜಟಾಪಟಿ ಏರ್ಪಟ್ಟಿದೆ. ಜಾವೇದ್ ಚೌಧರಿ ಅವರ ಎಕ್ಸ್ಪ್ರೆಸ್ ಟಾಕ್ ಶೋ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.
ಕಾರ್ಯಕ್ರಮವು ಪ್ರಸಾರವಾಗುತ್ತಿದ್ದಾಗಲೇ ಪಾಕ್ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ರನ್ನು ಅಫ್ನಾನ್ ಉಲ್ಲ ನಿಂದಿಸಿದ್ದರು. ಇದು ಜಾವೇದ್ ಚೌಧರಿ ಕೆಂಗಣ್ಣಿಗೆ ಗುರಿಯಾಗಿತ್ತು ಎನ್ನಲಾಗಿದೆ. ಕೋಪದ ಭರದಲ್ಲಿ ಅಫ್ನಾನ್ ಉಲ್ಲಾ ಖಾನ್ಗೆ ಜಾವೇದ್ ಚೌಧರಿ ಕಪಾಳ ಮೋಕ್ಷ ಮಾಡಿದ್ದಾರೆ. ಸಿಬ್ಬಂದಿ ಮಧ್ಯಪ್ರವೇಶ ಮಾಡುವವರೆಗೂ ಅವರಿಗೆ ಥಳಿಸಿದ್ದಾರೆ ಎನ್ನಲಾಗಿದೆ. ಈ ವಿಡಿಯೋವನ್ನು ಪತ್ರಕರ್ತ ರಬೀಂದರ್ ಸಿಂಗ್ ರಾಬಿನ್ ಶೇರ್ ಮಾಡಿದ್ದಾರೆ.