ಲಾಹೋರ್: ಅಧಿವೇಶನದಲ್ಲಿ ಪಾಲ್ಗೊಳ್ಳಲು ಪಂಜಾಬ್ ವಿಧಾನಸಭೆಗೆ ಸೈಕಲ್‌ನಲ್ಲಿ ತೆರಳುತ್ತಿದ್ದ ಪಾಕಿಸ್ತಾನದ ಸಚಿವರೊಬ್ಬರು ಆಲೂಗಡ್ಡೆ ಮತ್ತು ಇತರ ತರಕಾರಿಗಳಿಂದ ಮಾಡಿದ ಹಾರವನ್ನು ಧರಿಸಿರುವ ಫೋಟೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.
ಪಾಕಿಸ್ತಾನ್ ಮುಸ್ಲಿಂ ಲೀಗ್-ಎನ್ (ಪಿಎಂಎಲ್-ಎನ್) ಸದಸ್ಯ ತಾರಿಕ್ ಮಸಿಹ್ ಅವರು ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರವನ್ನು ವಿರೋಧಿಸಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ್ದಾರೆ. ಆಲೂಗಡ್ಡೆ, ಟೊಮ್ಯಾಟೊ ಮತ್ತು ಕ್ಯಾಪ್ಸಿಕಂನಿಂದ ಮಾಡಿದ ಹಾರವನ್ನು ಧರಿಸಿ ಸೈಕಲ್ ನಲ್ಲಿ ವಿಧಾನಸಭೆಗೆ ತೆರಳಿದ್ದಾರೆ.
ಈ ಕಾರಣಕ್ಕೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ ಸಬ್ಯಸಾಚಿಯ ಮಂಗಳಸೂತ್ರ ಜಾಹೀರಾತು..!
ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಕಳೆದ 70 ವರ್ಷಗಳಲ್ಲಿ ಹಣದುಬ್ಬರವು ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ತುಪ್ಪ ಮತ್ತು ಎಣ್ಣೆಯಂತಹ ಆಹಾರ ಪದಾರ್ಥಗಳ ಬೆಲೆಯಲ್ಲಿ ಅತ್ಯಧಿಕ ಏರಿಕೆಯಾಗಿದೆ. ತುಪ್ಪದ ಬೆಲೆಯಲ್ಲಿ ಶೇ.108ರಷ್ಟು ಏರಿಕೆಯಾಗಿದ್ದು, ಪ್ರತಿ ಕೆ.ಜಿಗೆ 356 ರೂ. ಇದೆ. ಮೂರು ವರ್ಷಗಳಲ್ಲಿ ಸಕ್ಕರೆ ಬೆಲೆ ಶೇ.83ರಷ್ಟು ಹೆಚ್ಚಿದ್ದರೆ, ಬೇಳೆಕಾಳುಗಳ ಬೆಲೆ ಶೇ.60ರಿಂದ ಶೇ.76ರಷ್ಟು ಏರಿಕೆಯಾಗಿದೆ. ಇನ್ನು ಅಕ್ಟೋಬರ್ 2018 ರಿಂದ ಅಕ್ಟೋಬರ್ 2021 ರವರೆಗೆ ವಿದ್ಯುತ್ ದರಗಳು ಪ್ರತಿ ಯೂನಿಟ್‌ಗೆ ಶೇಕಡಾ 57 ರಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ.