ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆಯನ್ನು ಲೀಟರ್ ಗೆ 30 ರೂಪಾಯಿಗಳಷ್ಟು ಹೆಚ್ಚಿಸಿದ್ದು, ಒಂದು ಲೀಟರ್ ಬೆಲೆ 180 ರೂಪಾಯಿಗೆ ತಲುಪಿದೆ. ಹೊಸ ದರಗಳು ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿವೆ.
ಇದರಿಂದ ಪಾಕ್ ನಲ್ಲಿ ಜನ ಸಾಮಾನ್ಯರಿಗೆ ಮತ್ತೊಂದು ಹೊಡೆತ ಬಿದ್ದಿದ್ದು, ಏಕಾಏಕಿ ಪೆಟ್ರೋಲ್ ಬೆಲೆ 30 ರೂ. ಏರಿಕೆಯಾಗಿದೆ. ಈ ದರ ಪರಿಷ್ಕರಣೆ ನಂತರ, ಪಾಕಿಸ್ತಾನದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 179.85 ರೂ. ಆಗಿದ್ದು, ಡೀಸೆಲ್ ಪ್ರತಿ ಲೀಟರ್‌ಗೆ 174.15 ರೂ. ಗೆ ಏರಿದೆ.
ಪಾಕಿಸ್ತಾನದ ಹಣಕಾಸು ಸಚಿವರ ಪ್ರಕಾರ, ಪೆಟ್ರೋಲ್ ಬೆಲೆ ಹೆಚ್ಚಳ ಅಂತಾರಾಷ್ಟ್ರೀಯ ಹಣಕಾಸು ನಿಧಿ(IMF) ಕಾರ್ಯಕ್ರಮದ ಪುನಶ್ಚೇತನ ಖಚಿತಪಡಿಸಿಕೊಳ್ಳುವ ಗುರಿ ಹೊಂದಿದೆ.