ಅಧಿಕಾರಿಗಳಿಗೆ ʼಸಂಬಳʼ ನೀಡಲೂ ಇಮ್ರಾನ್ ಸರ್ಕಾರದ ಪರದಾಟ…? 04-12-2021 7:29AM IST / No Comments / Posted In: Latest News, Live News, International ಪಾಕಿಸ್ತಾನದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಕಳೆದ ಮೂರು ತಿಂಗಳಿನಿಂದ ಸಂಬಳವನ್ನೇ ನೀಡಿಲ್ಲ ಎಂದು ಸೆರ್ಬಿಯಾದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯು ಟ್ವೀಟ್ ಮಾಡಿದ್ದು ಇಮ್ರಾನ್ ಸರ್ಕಾರಕ್ಕೆ ಬಹುದೊಡ್ಡ ಮುಖಭಂಗವಾಗಿದೆ. ಸೆರ್ಬಿಯಾದ ಪಾಕಿಸ್ತಾನ ರಾಯಭಾರ ಕಚೇರಿಯ ಅಧಿಕೃತ ಟ್ವಿಟರ್ ಖಾತೆಯಿಂದಲೇ ಈ ಪೋಸ್ಟ್ ಮಾಡಲಾಗಿದೆ. ಈ ಖಾತೆಯಲ್ಲಿ ಸಂಬಳವೇ ಇಲ್ಲದೇ ಪಾಕಿಸ್ತಾನ ಸರ್ಕಾರಕ್ಕಾಗಿ ಎಷ್ಟು ದಿನ ಎಂದು ಕೆಲಸ ಮಾಡಲು ಸಾಧ್ಯ..? ಎಂದು ಪ್ರಶ್ನಿಸಲಾಗಿದೆ. ಆದರೆ ರಾಯಭಾರ ಕಚೇರಿಯ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಪಾಕಿಸ್ತಾನ ಸರ್ಕಾರವು ಸಬೂಬು ನೀಡಿದೆ. ಇನ್ನೂ ಎಷ್ಟು ಸಮಯದವರೆಗೆ ಇಮ್ರಾನ್ ಖಾನ್ ಸರ್ಕಾರದ ಅಧಿಕಾರಿಗಳು ಮೌನವಾಗಿ ಇರುತ್ತೀರಿ..? ಕಳೆದ ಮೂರು ತಿಂಗಳಿನಿಂದ ವೇತನವಿಲ್ಲದೇ ನಿಮ್ಮ ಸರ್ಕಾರಕ್ಕಾಗಿ ದುಡಿಯುತ್ತಿದ್ದಾರೆ. ಶಾಲೆಯಲ್ಲಿ ಶುಲ್ಕ ಪಾವತಿ ಮಾಡದ ಕಾರಣ ಮಕ್ಕಳನ್ನು ಶಾಲೆಯಿಂದ ಹೊರಗಟ್ಟಲಾಗಿದೆ. ಹೊಸ ಪಾಕಿಸ್ತಾನ ಅಂದರೆ ಇದೇನಾ..? ಎಂದು ಟ್ವಿಟರ್ನಲ್ಲಿ ಪ್ರಶ್ನಿಸಲಾಗಿದೆ. ಈ ಟ್ವೀಟ್ ವೈರಲ್ ಆಗುತ್ತಿದ್ದಂತೆಯೇ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟ್ವೀಟ್ ಮಾಡಿದ್ದು ಸರ್ಬಿಯಾದಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಯ ಟ್ವಿಟರ್, ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ. ಈ ಖಾತೆಗಳಲ್ಲಿ ಪೋಸ್ಟ್ ಮಾಡಲಾಗುತ್ತಿರುವ ಯಾವುದೇ ಸಂದೇಶಗಳು ಸಬಿರ್ಯಾದಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಗೆ ಸಂಬಂಧಿಸಿದ್ದಲ್ಲ ಎಂದು ಹೇಳಿದೆ. The Twitter, Facebook and Instagram accounts of the Embassy of Pakistan in Serbia have been hacked. Messages being posted on these accounts are not from the Embassy of Pakistan in Serbia. — Ministry of Foreign Affairs – Pakistan (@ForeignOfficePk) December 3, 2021