
ಅರಮನೆ ಆವರಣದಲ್ಲೇ ಇರುವ ತ್ರಿನೇಶ್ವರ ದೇಗುಲಕ್ಕೆ ಬಣ್ಣ ಬಳಿಯುತ್ತಿದ್ದ ವೇಳೆ ಕಾರ್ಮಿಕನೊಬ್ಬ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾನೆ. ಕಟ್ಟಡಕ್ಕೆ ಸುಣ್ಣ ಬಳಿಯುತ್ತಿದ್ದ ಕಾರ್ಮಿಕ ಅಫ್ತಾಬ್ ಸುಮಾರು 25 ಅಡಿ ಎತ್ತರದ ಕಟ್ಟಡದಿಂದ ಕೆಳಕ್ಕೆ ಬಿದ್ದಿದ್ದಾರೆ.
ಅವಘಡದಲ್ಲಿ ಅಫ್ತಾಬ್ ತಲೆಗೆ ಬಲವಾದ ಪೆಟ್ಟು ಬಿದ್ದಿದೆ.
ಕೂಡಲೇ ಸಮೀಪದಲ್ಲೇ ಇದ್ದ ಕಾರ್ಮಿಕರು ಅಫ್ತಾಬ್ ಸಹಾಯಕ್ಕೆ ಧಾವಿಸಿದ್ದಾರೆ. ಗುತ್ತಿಗೆದಾರ ಕಾರ್ಮಿಕರ ಅಫ್ತಾಬ್ರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಮುಂದುವರಿದಿದೆ.