alex Certify ಮುದ್ದಾದ ನಾಯಿಗಳ ಕ್ಯೂಟ್​ ವಿಡಿಯೋಗೆ ಮನಸೋತ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುದ್ದಾದ ನಾಯಿಗಳ ಕ್ಯೂಟ್​ ವಿಡಿಯೋಗೆ ಮನಸೋತ ನೆಟ್ಟಿಗರು

ಪ್ರಾಣಿ-ಪಕ್ಷಿಗಳ ಒಡನಾಟವೇ ಒಂದು ರೀತಿಯ ರೋಚಕ ಅನುಭವಗಳನ್ನು ನೀಡುತ್ತದೆ. ಅದರಲ್ಲಿಯೂ ಸಾಕು ಪ್ರಾಣಿಗಳಿಗೂ ಮನುಷ್ಯರಿಗೂ ಇರುವುದು ಅವಿನಾಭಾವ ಸಂಬಂಧ. ಎಷ್ಟೋ ಸಂದರ್ಭಗಳಲ್ಲಿ ಮನುಷ್ಯರು ಮಾಡದ ಸಾಹಸ ಕಾರ್ಯವನ್ನು ಸಾಕುಪ್ರಾಣಿಗಳು ಮಾಡಿ ತಮ್ಮ ಪ್ರಾಣವನ್ನು ತ್ಯಜಿಸಿ ಮಾಲೀಕರ ಪ್ರಾಣ ಕಾಪಾಡಿರುವ ಉದಾಹರಣೆಗಳು ಇವೆ.

ಇಂಥ ಸಾಕು ಪ್ರಾಣಿಗಳ ಆಟೋಟಗಳೇ ಬಲುಚೆನ್ನ. ಅದರಲ್ಲಿಯೂ ನಾಯಿಗೆ ಇರುವ ಬುದ್ಧಿಶಕ್ತಿ, ಪ್ರಾಮಾಣಿಕತೆಯ ಬಗ್ಗೆ ಬೇರೆ ಹೇಳಬೇಕಾಗಿಲ್ಲ. ಯಾವ ಮಕ್ಕಳಿಗೂ ಕಡಿಮೆ ಇಲ್ಲದಂತೆ ನಾಯಿಗಳು ಆಟೋಟದಲ್ಲಿ ತೊಡಗಿಸಿಕೊಳ್ಳುವುದಿದೆ. ಯಜಮಾನ ಇವುಗಳಿಗೆ ಸ್ವಲ್ಪ ಹೇಳಿಕೊಟ್ಟರಂತೂ ಮುಗಿದೇ ಹೋಯ್ತು. ಅವು ಆಟೋಟಗಳಲ್ಲಿ ನಿಪುಣರಾಗಿಬಿಡುತ್ತವೆ.

ಅಂಥದ್ದೇ ಒಂದು ಮುದ್ದು ಮುದ್ದಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ನಾಯಿಗಳ ಹಿಂಡೊಂದು ಬಲೂನ್​ನಿಂದ ಆಟವಾಡುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಬಲೂನ್​ ಗಾಳಿಗೆ ಮೇಲೆ ಮೇಲೆ ಹಾರಿದಂತೆ ನಾಯಿಗಳು ಅವುಗಳನ್ನು ಹಿಡಿದು ಆಟವಾಡುವ ಕ್ಯೂಟ್​ ವಿಡಿಯೋ ಇದಾಗಿದೆ. ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕು ಎನ್ನುವ ಈ ಮುದ್ದಾದ ವಿಡಿಯೋಗೆ ಹಲವಾರು ಮಂದಿ ಕಮೆಂಟ್​ ಮಾಡಿದ್ದಾರೆ. ಫುಟ್​ಬಾಲ್​ ರೀತಿಯಲ್ಲಿ ಬಲೂನ್​ ಅನ್ನು ಒದ್ದುಒದ್ದು ಆಟವಾಡುವ ವಿಡಿಯೋ ನೀವೂ ನೋಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...