alex Certify KBC ವೇಳೆ ಸ್ವಾರಸ್ಯಕರ ಘಟನೆ ಹಂಚಿಕೊಂಡ ʼಬಿಗ್ ಬಿʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

KBC ವೇಳೆ ಸ್ವಾರಸ್ಯಕರ ಘಟನೆ ಹಂಚಿಕೊಂಡ ʼಬಿಗ್ ಬಿʼ

ಬಾಲಿವುಡ್ ನ ಮೇರು ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ʼಕೌನ್ ಬನೇಗಾ ಕರೋಡ್ಪತಿʼ ಅತ್ಯಂತ ಜನಪ್ರಿಯ ಕಾರ್ಯಕ್ರಮ. ಮೊನ್ನೆ ಶುಕ್ರವಾರ ನಡೆದ ಸೀಸನ್ ಹದಿಮೂರರಲ್ಲಿ ಭಾರತೀಯ ಕ್ರಿಕೆಟ್ ಆಟಗಾರರಾದ ಸೌರವ್ ಗಂಗೂಲಿ ಮತ್ತು ವಿರೇಂದರ್ ಸೆಹವಾಗ್ ಅತಿಥಿಯಾಗಿ ಬಂದಿದ್ದರು.

ಕಾರ್ಯಕ್ರಮದ ಮಧ್ಯೆ, ಇಬ್ಬರು ಆಟಗಾರರು ತಮ್ಮ ಕ್ರಿಕೆಟ್ ಪಂದ್ಯಗಳ ಬಗ್ಗೆ ಸ್ವಾರಸ್ಯ ಹಂಚಿಕೊಳ್ಳುತ್ತಿದ್ದರು. ಬಿಗ್ ಬಿ ಕೂಡ ತಮ್ಮ ಜೀವನದ ಕ್ರಿಕೆಟ್ ಪಂದ್ಯಾವಳಿ ನೋಡಿದ್ದರ ಬಗ್ಗೆ ಮೆಲುಕು ಹಾಕುತ್ತಿದ್ದರು.

ಷೇರು ಮಾರುಕಟ್ಟೆ ಬೆಳವಣಿಗೆ ವೀಕ್ಷಿಸುತ್ತಿರುವ ಆಟೋಚಾಲಕನ ಫೋಟೋ ವೈರಲ್

ಸೌರವ್ ಗಂಗೂಲಿ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದಾಗ, ಇವರನ್ನು ಈಡನ್ ಗಾರ್ಡನ್ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ವೀಕ್ಷಿಸಲು ಆಹ್ವಾನಿಸಿದ್ದನ್ನು ನೆನೆಸಿಕೊಂಡ ಬಚ್ಚನ್ ಅವರು ಜನ ಗಣ ಮನ ಹೇಳುವುದಕ್ಕೆ ಕರೆದಿದ್ದರು. ” ಮೊದಲು ಭಯ ಆಗಿದ್ದು ನಿಜ, 80 ಸಾವಿರ ಜನರ ಮುಂದೆ ಹೇಳಬೇಕಿತ್ತು , ನಾನು ಹೇಳುತ್ತಿದ್ದ ಹಾಗೆ ಅಲ್ಲಿ ನೆರೆದ 80 ಸಾವಿರ ಜನರ ಧ್ವನಿ ಜೊತೆಗೂಡಿತು. ಇದೊಂದು ರೋಮಾಂಚನಕಾರಿ ಘಟನೆ” ಎಂದು ಹೇಳಿಕೊಂಡರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...